Tuesday, November 12, 2024

ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ: ಕ್ವಾರ್ಟರ್ ಫೈನಲ್‌ಗೆ ರೋಜರ್ ಫೆಡರರ್

ಇಂಡಿಯನ್ ವೆಲ್ಸ್: ವಿಶ್ವದಾಖಲೆಯ 20 ಗ್ರ್ಯಾನ್‌ಸ್ಲ್ಯಾಮ್‌ಗಳ ಸರದಾರ ಹಾಗೂ ವಿಶ್ವದ ನಂ.1 ಆಟಗಾರ ರೋಜರ್ ಫೆಡರರ್, ಪ್ರತಿಷ್ಠಿತ  ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
PC: twitter/Roger Federer
ಇಂಡಿಯನ್ ವೆಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಸ್ವಿಟ್ಜರ್ಲೆಂಡ್‌ನ ದಿಗ್ಗಜ ರೋಜರ್ ಫೆಡರರ್, ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ ಜೆರ್ಮಿ ಚಾರ್ಡಿ ಅವರನ್ನು 7-5, 6-4 ಅಂತರದ ನೇರ ಸೆಟ್‌ಗಳಿಂದ ಮಣಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅನುಭವಿ ಫೆಡರರ್ ದಕ್ಷಿಣ ಕೊರಿಯಾದ ಹೆಯಾಗ್ ಚುಂಗ್ ಅವರನ್ನು ಎದುರಿಸಲಿದ್ದಾರೆ. ಚುಂಗ್, ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ಅವರನ್ನು 6-1, 6-3 ಅಂತರದ ನೇರ ಸೆಟ್‌ಗಳಿಂದ ಬಗ್ಗು ಬಡಿದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

Related Articles