Friday, March 1, 2024

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ : ವಿಶ್ವಚಾಂಪಿಯನ್ ಒಕುಹಾರಗೆ ಸೋಲುಣಿಸಿ ಸೆಮೀಸ್‌ಗೆ ಸಿಂಧೂ

ಬರ್ಮಿಂಗ್‌ಹ್ಯಾಮ್: ಭಾರತದ ಅಗ್ರಮಾನ್ಯ ಮಹಿಳಾ ಶಟ್ಲರ್ ಪಿ.ವಿ ಸಿಂಧೂ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

PC:Twitter/YonexAllEngland

ವಿಶ್ವದ 4ನೇ ರ್ಯಾಂಕ್‌ನ ಆಟಗಾರ್ತಿ ಸಿಂಧೂ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ನಜೋಮಿ ಒಕುಹಾರ ಅವರ ಪ್ರಬಲ ಸವಾಲನ್ನು 20-22, 21-18, 21-18ರಲ್ಲಿ ಹಿಮ್ಮೆಟ್ಟಿಸಿ ಅಂತಿಮ 4ರ ಘಟ್ಟಕ್ಕೆ ಅರ್ಹತೆ ಪಡೆದರು. ಕಳೆದ ವರ್ಷ ಗ್ಲಾಸ್ಗೊದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಜಪಾನ್‌ನ ಒಕುಹಾರ, ಭಾರತದ ಸಿಂಧೂ ಅವರನ್ನು ಮಣಿಸಿ ವಿಶ್ವ ಚಾಂಪಿಯನ್‌ಷಿಪ್ ಗೆದ್ದಿದ್ದರು. ಆ ಸೋಲಿಗೆ ಸಿಂಧೂ, ಬ್ಯಾಡ್ಮಿಂಟನ್ ಜಗತ್ತಿನ ಮತ್ತೊಂದು ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

Congratulations on beating world champion Okuhara and reaching semi-finals of the All England Championships. Maza!

Related Articles