ಬೆಂಗಳೂರಿನಲ್ಲಿ ವಿಶ್ವ ಟೆನಿಸ್ ಲೀಗ್: ಆಟಗಾರರ ತಂಡಗಳನ್ನು ಘೋಷಣೆ
ಬೆಂಗಳೂರು,: ವಿಶ್ವ ಟೆನಿಸ್ ಲೀಗ್ (WTL) ‘ದಿ ಗ್ರೇಟೆಸ್ಟ್ ಶೋ ಆನ್ ಕೋರ್ಟ್’ ಡಿಸೆಂಬರ್ 17 ರಿಂದ 20 ರವರೆಗೆ ಬೆಂಗಳೂರಿನ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲು ಸಜ್ಜಾಗಿದೆ. ದೇಶದಾದ್ಯಂತ ಲೀಗ್ ನ ಉತ್ಸಾಹ ಹೆಚ್ಚುತ್ತಿರುವ ಬೆನ್ನಲ್ಲೇ ವರ್ಲ್ಡ್ ಟೆನಿಸ್ ಲೀಗ್ ತನ್ನ ತಂಡದ ಮಾಲೀಕರನ್ನು ಮತ್ತು ತಂಡಗಳ ಸಂಯೋಜನೆಯನ್ನು ಅನಾವರಣಗೊಳಿಸಿದೆ. World Tennis League (WTL) will be held in Bangalore Rohan Bopanna will be in action.
ಈ ಸೀಸನ್ ನ ಫ್ರಾಂಚೈಸಿ ಮಾಲೀಕರಲ್ಲಿ ಹಾಲಿ ಚಾಂಪಿಯನ್ಗಳಾದ ಗೇಮ್ ಚೆಂಜರ್ಸ್ ಫಾಲ್ಕನ್ಸ್ (ಮಾಲೀಕ: ಅಮನ್ದೀಪ್ ಸಿಂಗ್, ಗೇಮ್ ಚೆಂಜರ್ಸ್ FZCO),ವಿಬಿ ರಿಯಾಲ್ಟಿ ಹಾಕ್ಸ್ (ಮಾಲೀಕ: ವಾಶು ಭಗ್ನಾನಿ), ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ (ಮಾಲೀಕರು: ಡಾ. ಉಮೇದ್ ಶೇಖಾವತ್, ಅಮಿತ್ ಸಾಹ್ನಿ ಮತ್ತು ಕೇವಲ್ ಕಲ್ರಾ) ಮತ್ತು ಎಒಎಸ್ ಈಗಲ್ಸ್ (ಮಾಲೀಕರು: ಎಒಎಸ್ ಸ್ಪೋರ್ಟ್ಸ್ ಟೂರ್ನಮೆಂಟ್, ದುಬೈ ಮತ್ತು ಸತೇಂದರ್ ಪಾಲ್ ಛಬ್ರಾ) ಸೇರಿದ್ದಾರೆ.
ವಿಶ್ವ ಟೆನಿಸ್ ಲೀಗ್ನ 2025 ಆವೃತ್ತಿಯು 16 ಆಟಗಾರರು, 4 ತಂಡಗಳು, 1 ಚಾಂಪಿಯನ್ ಹೊಂದಿದ್ದು, ಅನುಭವಿ ತರಬೇತುದಾರರ ನೇತೃತ್ವದಲ್ಲಿ ಕೆಲವು ಅತ್ಯುತ್ತಮ ಜಾಗತಿಕ ಟೆನಿಸ್ ತಾರೆಗಳು ಮತ್ತು ಭಾರತದ ಅಗ್ರ ಶ್ರೇಯಾಂಕಿತ ಆಟಗಾರರು ಈ ಆವೃತ್ತಿಯಲ್ಲಿ ಆಡಲಿದ್ದಾರೆ.
ಡಾನಿಯಲ್ ಮೆಡ್ವೆಡೆವ್, ರೋಹನ್ ಬೋಪಣ್ಣ, ಮಾಗ್ಡಾ ಲಿನೆಟ್, ಸಹಜ ಯಮಲಪಲ್ಲಿ, ಡೆನಿಸ್ ಷಪೊವಾಲೊವ್, ಯುಕೀ ಭಾಂಬ್ರಿ, ಎಲೀನಾ ಸ್ವಿಟೋಲಿನಾ, ಮಾಯಾ ರೇವತಿ, ನಿಕ್ ಕಿರ್ಗಿಯೋಸ್, ದಕ್ಷಿಣೇಶ್ವರ್ ಸುರೇಶ್, ಮಾರ್ಟಾ ಕೋಸ್ಟ್ಯುಕ್, ಅಂಕಿತಾ ರೈನಾ, ಗೇಲ್ ಮೊನ್ಫಿಲ್ಸ್, ಸುಮಿತ್ ನಾಗಲ್, ಪೌಲಾ ಬಡೋಸಾ, ಶ್ರೀವಲ್ಲಿ ಭಾಮಿಡಿಪತಿ ಚಾಂಪಿಯನ್ಷಿಪ್ನಲ್ಲಿ ಆಡಲಿರುವ ಪ್ರಮುಖ ಆಟಗಾರರು.

