ವಿಜಯ ಹಜಾರೆ ಟ್ರೋಫಿ: ಸೆಮಿಫೈನಲ್‌ಗೆ ಕರ್ನಾಟಕ
ಬೆಂಗಳೂರು: ದೇವದತ್ತ ಪಡಿಕ್ಕಲ್ (81*) ಹಾಗೂ ಕರುಣ್ ನಾಯರ್ (74*) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧದ ವಿಜಯ ಹಜಾರೆ ಟ್ರೋಪಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಜೆಡಿ ನಿಯಮಾನುಸಾರ 55 ರನ್ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದೆ. Vijaya Hazare Trophy Karnataka reached Semifinal by winning against Mumbai.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಾಯಕ ಮಯಾಂಕ್ ಅವರ್ವಾಲ್ ಅವರ ನಿರ್ಧಾರವನ್ನು ಕರ್ನಾಟಕದ ಬೌಲರ್‌ಗಳು ಉತ್ತಮ ರೀತಿಯಲ್ಲಿ ಸಮರ್ಥಸಿಕೊಂಡರು. ಮುಂಬಯಿ 8 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಕರ್ನಾಟಕದ ಪರ ವಿದ್ಯಾಧರ ಪಾಟೀಲ್ 3/42, ಅಭಿಲಾಷ್ ಶೆಟ್ಟಿ 2/59 ಹಾಗೂ ವಿದ್ವತ್ ಕಾವೇರಪ್ಪ 2/43 ಉತ್ತಮ ಬೌಲಿಂಗ್ ಪ್ರದರ್ಶಿಸಿ ಮುಂಬೈಯ ರನ್ ಗಳಿಕೆಗೆ ಕಡಿವಾಣ ಹಾಕಿದರು,
ಸಾಧಾರಣ ಮೊತ್ತವನ್ನು ಬೆಂಬತ್ತಿದ ಕರ್ನಾಟಕದ ಇನ್ನಿಂಗ್ಸ್‌ಗೆ ಮಳೆ ಅಡ್ಡಿಯಾಗಿತ್ತು. ಕರ್ನಾಕಟ ನಾಯಕ ಮಯಾಂಕ್ ಅಗರ್ವಾಲ್ (12) ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ದೇವದತ್ತ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಉತ್ತಮ ಜೊತೆಯಾಟವಾಡುವ ಮೂಲಕ ಕರ್ನಾಟಕ 33 ಓವರ್‌ಗಳಲ್ಲಿ 1 ವಿಕೆಟ್‌ಗೆ 187 ರನ್ ಗಳಿಸಿ ಸುಸ್ಥಿತಿ ತಲುಪಿತ್ತು. ಪಂದ್ಯಕ್ಕೆ ಮಳೆ ಅಡ್ಡಿಯಾಗಲು ವಿಜೆಡಿ (ಭಾರತದ ಎಂಜಿಯರ್ ವಿ ಜಯದೇವನ್ ಅವರ ನಿಯಮ) ನಿಯಮಾನುಸಾರ ಕರ್ನಾಟಕ 55 ರನ್ ಅಂತರದಲ್ಲಿ ಜಯ ಗಳಿಸಿತು.
ಹಾಲಿ ಚಾಂಪಿಯನ್ ಕರ್ನಾಟಕ ಐದು ಬಾರಿ ಫೈನಲ್ ತಲುಪಿದ್ದು, ಐದು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವುದು ವಿಶೇಷ. ಅತಿ ಹೆಚ್ಚು ಬಾರಿ ವಿಜಯ ಹಜಾರೆ ಟ್ರೋಫಿ ಗೆದ್ದಿರುವುದು ಕರ್ನಾಟಕ ಹಾಗೂ ತಮಿಳುನಾಡು ತಂಡಗಳು.

