ತುಮಕೂರಿನಲ್ಲಿ ಐಟಿಎಫ್ ಮಹಿಳಾ ವಿಶ್ವ ಟೆನಿಸ್ ಟೂರ್
ತಮಕೂರು: ಮೇ 4 ರಿಂದ 10 ರ ವರೆಗೆ ತಮಕೂರು ಜಿಲ್ಲಾ ಟೆನಿಸ್ ಅಂಗಣದಲ್ಲಿ ಮೊದಲ ಬಾರಿಗೆ ಐಟಿಎಫ್ ಮಹಿಳಾ ವಿಶ್ವ ಟೆನಿಸ್ ಟೂರ್ ಟೂರ್ನಮೆಂಟ್ ನಡೆಯಲಿದೆ. ಇದರೊಂದಿಗೆ ಕಲ್ಪತರು ಜಿಲ್ಲೆಯಲ್ಲಿ ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಟೆನಿಸ್ ಚಾಂಪಿಯನ್ಷಿಪ್ ನಡೆಯುತ್ತಿದೆ. Tumakuru is set to host its first ever ITF Women’s World Tennis Tour W35 tournament from 4th-10th May 2026 at the Tumkur District Tennis Stadium.
ಸುಮಾರು 28ಲಕ್ಷ ರೂ. ಬಹುಮಾನ ಮೊತ್ತದ ಈ ಟೂರ್ನಿ ಐಟಿಎಫ್ ಜಾಗತಿಕ ಮಟ್ಟದ ಟೂರ್ನಿಯಾಗಿದ್ದು, ವೃತ್ತಿಪರ ಆಟಗಾರ್ತಿಯರಿಗೆ ರಾಂಕಿಂಗ್ ಅಂಕ ಗಳಿಸಲು ಉತ್ತಮ ವೇದಿಕೆಯಾಗಿದೆ. ಸುಮಾರು 32 ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಹಾಗೂ ಕಲ್ಬುರ್ಗಿಯಲ್ಲಿ ಯಶಸ್ಸು ಕಾಣುವ ಮೂಲ ಕರ್ನಾಟಕ ಜಾಗತಿಕ ಮಟ್ಟದ ಟೂರ್ನಿಗಳನ್ನು ಆಯೋಜಿಸುವಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ.

“ಎರಡು ದಶಕಗಳ ನಂತರ ತಮಕೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯನ್ನು ಆಯೋಜಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಜಾಗತಿಕ ಮಟ್ಟದ ಟೂರ್ನಿಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯ ಕ್ರೀಡಾ ಮೂಲಭೂತ ಸೌಖರ್ಯಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಂತಾಗಿದೆ. ಇಲ್ಲಿಯ ಯುವಕರಿಗೆ ಜಾಗತಿಕ ಮಟ್ಟದ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ಸಿಕ್ಕಿಂತಾಗಿದೆ. ಈ ಅವಕಾಶವನ್ನು ನೀಡಿದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಗೆ ನಾವು ಚಿರ ಋಣಿಯಾಗಿದ್ದೇವೆ,” ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಗೃಹ ಸಚಿವರಾಗಿರುವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
2003ರಲ್ಲಿ ತುಮಕೂರು ಓಪನ್ ನಡೆದಾಗ ರೋಹನ್ ಬೋಪಣ್ಣ ಹಾಗೂ ಪ್ರಕಾಶ್ ಅಮೃತ್ರಾಜ್ ಪಾಲ್ಗೊಂಡಿದ್ದರು. ಆಗ ಜರ್ಮನಿಯ ಫಿಲಿಪ್ ಕೊಲ್ಷ್ರೈಬರ್ ಪ್ರಶಸ್ತಿ ಗೆದ್ದಿದ್ದರು.

