40 ಲಕ್ಷ ಬಹುಮಾನ ಮೊತ್ತದ ಕ್ರಿಕೆಟ್: ಕ್ವಾರ್ಟರ್ ಫೈನಲ್ಗೇ ಫಿನಿಷ್!
ಬ್ರಹ್ಮಾವರ: ಬ್ರಹ್ಮಾವರದ ಗಾಂಧೀ ಮೈದಾನದಲ್ಲಿ ಜನವರಿ 23, 24 ಹಾಗೂ 25 ನಡೆದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಎಚ್ಎಂಸಿ ಯುನೈಟೆಡ್ ಟ್ರೋಫಿಯ ಚಾಂಪಿಯನ್ಷಿಪ್ ಮೂರನೇ ಕ್ವಾರ್ಟರ್ ಫೈನಲ್ಗೇ ರಾತ್ರೋರಾತ್ರಿ ನಿಂತು ಹೋಗಿದ್ದು, ಈಗ ಆಟಗಾರರು ಬಹುಮಾನದ ಮೊತ್ತಕ್ಕಾಗಿ ಆಕಾಶ ನೋಡುತ್ತಿದ್ದಾರೆ. The tennis ball cricket tournament held in Brahmavar, Udupi district, with a prize money of Rs 40 lakh, was cancelled overnight before end of the quarter-finals.
ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಬಹುಮಾನದ ಮೊತ್ತ ಇದಾಗಿತ್ತು. ಆದರೆ ಜಾನ್ಸನ್ ಹಾಗೂ ಪಾಂಚಜನ್ಯ ತಂಡಗಳ ನಡುವಿನ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ನಡೆದ ವಿವಾದದಿಂದಾಗಿ ಟೂರ್ನಿಯೇ ರದ್ದಾಗಿ, ಸಂಘಟಕರು ವಾಯ್ಸ್ ಮೆಸೇಜ್ನಲ್ಲಿ ಸ್ಪಷ್ಟೀಕರಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಹಿಂದೂ ಮುಸಲ್ಮಾನ ಕ್ರೈಸ್ತ HMC ಹೆಸರಿನ ಈ ಟೂರ್ನಿಯಲ್ಲಿ ಚಾಂಪಿಯನ್ ತಂಡಕ್ಕೆ 25 ಲಕ್ಷ ರೂ. ಹಾಗೂ ರನ್ನರ್ಸ್ ಅಪ್ ತಂಡಕ್ಕೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಉಂಟಾದ ಗೊಂದಲದಿಂದಾಗಿ ಟೂರ್ನಿಯೇ ರದ್ದಾಗಿ ಆಟಗಾರರು ಮತ್ತು ಪ್ರೇಕ್ಷಕರು ನೋವಿನೊಂದಿಗೆ ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಸಂಘಟಕರಲ್ಲಿ ಒಬ್ಬರಾದ ಶಕೀಲ್ ಹೊನ್ನಾಳ ಎಂಬುವರು ರಾತ್ರಿ ವಾಟ್ಸ್ಆಪ್ನಲ್ಲಿ ಕಳುಹಿಸಿದ ಮೆಸೇಜ್ ಈಗ ಕ್ರಿಕೆಟ್ ವಲಯಲ್ಲಿ ಹರಿದಾಡುತ್ತಿದೆ. “ಅಸಾಲಮಲೈಕುಂ ನಮಸ್ಕಾರ, ಎಚ್ಎಂಸಿ ಯುನೈಟೆಡ್ ಟ್ರೋಫಿ 2026ರ ಆರ್ಗನೈಸಿಂಗ್ ಕಮಿಟಿಯ ಎಲ್ಲ ಸದಸ್ಯರು, ದಯವಿಟ್ಟು ಮದರ್ ಪ್ಯಾಲೆಸ್ ಹತ್ತಿರ ಹನ್ನೆಡರು ಗಂಟೆಗೆ ಬರಬಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ, ಹಾಗೇನೇ ಒಂದು ದುರಾದೃಷ್ಟ, ನಾವು ತುಂಬಾ ಕಷ್ಟಪಟ್ಟು ಮ್ಯಾಚ್ ಮಾಡಿದ್ದು, ಒಂದು ಬ್ರಹ್ಮಾವರದಲ್ಲಿ ಇತಿಹಾದ ನಿರ್ಮಿಸಬೇಕೆಂದು ನಮ್ಮ ಒಂದು ಬಯಕೆ ಆಗಿತ್ತು. ಆದರೆ ಅದಕ್ಕೆಲ್ಲ ಮಣ್ಣೆರಚಿದ್ದಾರೆ ಕೆಲವರು. ಆದ್ದರಿಂದಾಗಿ ನಾವು ಈವೊಂದು ಪಂದ್ಯದ ತಂಡಗಳಿಗೆ ಸಮಾನವಾಗಿ ಈವೊಂದು ನಗದು ಬಹುಮಾನ ಹಚ್ಚುವ ತೀರ್ಮಾನವನ್ನು ಕೈಗೊಂಡಿದ್ದೇವೆ,. ಹಾಗೆನೇ ಟ್ರೋಫಿಯನ್ನು ಚೀಟಿ ಮೂಲಕ ಅದೃಷ್ಟದ ಮೂಲಕ ಅವರಿಗೆ ನೀಡುವ ನಾವು ಬದ್ಧತೆಗೆ ಬಂದಿದ್ದೇವೆ, ನಮ್ಮ ತೀರ್ಮಾನ ಅದೇ ಆಗಿರುತ್ತದೆ. ಹಾಗೂ ಅದಕ್ಕಿಂತಲೂ ಹೆಚ್ಚಾಗಿ, ನಮ್ಮ ಆರ್ಗನೈಸಿಂಗ್ ಕಮಿಟಿಯ ಎಲ್ಲ ಸದಸ್ಯರ ಒಕ್ಕೊರಲ ಮನವಿಯ ಮೇರೆಗೆ, ಇವತ್ತು 12 ಗಂಟೆಗೆ ಒಂದು ಮೀಟಿಂಗ್ ಮಾಡುತ್ತೇವೆ, ಅದರಲ್ಲಿ ಮುಂದಿನ ಆಗುಹೋಗುಗಳ ಕುರಿತು ಚರ್ಚಿಸಲಾಗುವುದು, ದಯವಿಟ್ಟು ಎಲ್ಲರೂ ಕೂಡ 12 ಗಂಟೆಗೆ ಮದರ್ ಪ್ಯಾಲೆಸ್ ಹತ್ತಿರ ಬರಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ, ಧನ್ಯವಾದಗಳು.”.
2011ರಲ್ಲು ಕೂಡ ಇದೇ ರೀತಿಯ ಗೊಂದಲ ಉಂಟಾಗಿ ಬೃಹತ್ ಮೊತ್ತದ ಟೂರ್ನಿ ಅರ್ಧದದಲ್ಲೇ ನಿಂತುಹೋಗಿತ್ತು. ಈಗ ಅದೇ ಬ್ರಹ್ಮಾವರದಲ್ಲಿ ಇತಿಹಾದ ಬರೆಯಲು ಹೊರಟವರು ಬರೆದದ್ದು ಅದೇ ಅಧ್ಯಾಯ. ನಗದು ಬಹುಮಾನವನ್ನು ಹಂಚುತ್ತೇವೆ ಎಂದು ಸಂಘಟಕರ ಧ್ವನಿಯಲ್ಲಿ ದಾಖಲಾಗಿದೆ. ಆದರೆ ಸರಣಿಶ್ರೇಷ್ಠ ಹಾಗೂ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಬೈಕ್ ಯಾರಿಗೆ ಕೊಡುತ್ತಾರೆ ಎಂಬುದು ತಿಳಿದು ಬಂದಿಲ್ಲ.

