ರಾಷ್ಟ್ರೀಯ ಪ್ಯಾರಾ ಕಬಡ್ಡಿ: ಸೆಮಿಫೈನಲ್‌ಗೆ ಕರ್ನಾಟಕ
ರಾಯ್ಪುರ: ಪಂಜಾಬ್‌ನ ಚಂಡೀಘಡದಲ್ಲಿ ನಡೆಯುತ್ತಿರುವ ಮೊದಲ ರಾಷ್ಟ್ರೀಯ ಸೀನಿಯರ್ ಪ್ಯಾರಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ. The Karnataka team has entered the semi-finals of the first National Senior Para Kabaddi Championship being held in Chandigarh, Punjab.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬಲಿಷ್ಠ ಉತ್ತರಪ್ರದೇಶದ ವಿರುದ್ಧ 41-36 ಅಂಕಗಳಿಂದ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕವನ್ನು ಖಚಿತಪಡಿಸಿದೆ. ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬಲಿಷ್ಠಿ ಡೆಲ್ಲಿ ವಿರುದ್ಧ ಸೆಣಲಿದೆ.
ಕರ್ನಾಟಕ ತಂಡದ ವಿವರ: ನಾಗೇಶ್ ಎಚ್. ಕೆ (ಚಿಕ್ಕಮಗಳೂರು) ನಾಯಕ, ರಮೇಶ್ (ಕಲ್ಬುರ್ಗಿ) ಉಪನಾಯಕ, ರಾಹುಲ್ ಸುರೇಶ್ ಕಾಳೆ (ಬೆಳಗಾವಿ), ಚೇತನ ಪುಂಡಿಪಲ್ಲೆ (ಬೆಳಗಾವಿ), ಕುಮಾರ್ ರಾಥೋಡ್ (ಯಾದಗಿರಿ), ಸಚಿನ್ ಪವಾರ್ (ಯಾದಗಿರಿ), ಕುಮಾರ್ ಪವಾರ್ (ಯಾದಗಿರಿ), ಸನಿಲ್ ರಾಠೋಡ್ (ಬೆಂಗಳೂರು),. ಅಕ್ಷಯ್ ಕುಮಾರ್ ವಿ (ಬೆಂಗಳೂರು), ಘನಷ್ಯಾಮ್ ಭೀಮ್ ರಾಠೋಡ್ (ಬೆಂಗಳೂರು), ವಿನಾಯಕ ಸಿದ್ಧಪ್ಪ ಪೂಜೇರಿ (ಬಿಜಾಪುರ), ಪ್ರವೀನ್ ಕೆ (ಹಾಸನ), ಕಾರ್ತಿಕ್ ವಿ. (ರಾಮನಗರ), ಬಾಲರಾಜ್ (ರಾಮನಗರ).
ತರಬೇತುದಾರರು: ಎಂ. ಆರುಮುಗಂ (ಅಂರಾತಾಷ್ಟ್ರೀಯ ಮಾಜಿ ಆಟಗಾರರು)
ವ್ಯವಸ್ಥಾಪಕರು: ಗೋಪಿನಾಥ್ (ಅಖಿಲ ಭಾರತ ವಿಶ್ವವಿದ್ಯಾನಿಲಯ ಕಬಡ್ಡಿ ಚಿನ್ನದ ಪದಕ ವಿಜೇತರರು)

