Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಡ್ರ್ಯಾಗನ್‌ ಬೋಟ್‌: ಕರ್ನಾಟಕಕ್ಕೆ 11 ಪದಕ

ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 14ನೇ ರಾಷ್ಟ್ರೀಯ ಡ್ರ್ಯಾಗನ್‌ ಬೋಟ್‌ ಚಾಂಪಿಯನ್‌ಷಿಪ್‌ನಲ್ಲಿ  ಕರ್ನಾಟಕದ ಸ್ಪರ್ಧಿಗಳು 3 ಚಿನ್ನ, 7 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿ ಒಟ್ಟು 11 ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. The Karnataka State Dragon Boat Team delivered an excellent performance at the 14th National Dragon Boat Championship by winning 11 medals.

ಹಿರಿಯ ಪುರುಷರು, ಮಹಿಳೆಯರು, ಜೂನಿಯರ್‌ ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ಪರ್ಧೆ ನಡೆದಿತ್ತು. ಜನವರಿ 6 ರಿಂದ 9 ರ ವರೆಗೆ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ 17 ರಾಜ್ಯಗಳಿಂದ ಸುಮಾರು 1150 ಸ್ಪರ್ಧಿಗಳು ಪಾಲ್ಗೊಂಡಿರುತ್ತಾರೆ. ಒಟ್ಟು 105 ಬೋಟ್‌ ರೇಸ್‌ಗಳು ನಡೆದಿವೆ.

2000 ಮೀಟರ್‌: D10 ಪುರುಷರು – ಬೆಳ್ಳಿ, D20 ಪುರುಷರು – ಬೆಳ್ಳಿ, D20 ಮಿಶ್ರ – ಬೆಳ್ಳಿ

500 ಮೀಟರ್‌: D10 ಮಿಶ್ರ- ಚಿನ್ನ, D10 ಪುರುಷರು – ಚಿನ್ನ, D20 ಪುರುಷರು – ಬೆಳ್ಳಿ, D20 ಮಿಶ್ರ – ಬೆಳ್ಳಿ

200 ಮೀಟರ್‌: D10 ಪುರುಷರು – ಚಿನ್ನ, D10 ಮಿಶ್ರಿತ – ಬೆಳ್ಳಿ, D20 ಮಿಶ್ರಿತ – ಬೆಳ್ಳಿ, D20 ಪುರುಷರು – ಬೆಳ್ಳಿ

ಒಟ್ಟು ಪದಕಗಳು: ಚಿನ್ನ – 3, ಬೆಳ್ಳಿ – 7, ಕಂಚು – 1.

ಕರ್ನಾಟಕ ತಂಡದ ಯಶಸ್ಸಿನಲ್ಲಿ ಕೋಚ್‌ಗಳಾದ  ಮಹೇಶ್ ಎಂ.ಎಸ್,  ವಿಜಯ್ ಕುಮಾರ್ ಹಾಗೂ  ವೀರಮುತ್ತು ಅವರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಕರ್ನಾಟಕ ಕಯಾಕಿಂಗ್‌ ಹಾಗೂ ಕೆನಾಯಿಂಗ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಕ್ಯಾಪ್ಟನ್‌ ದಿಲೀಪ್‌ ಕುಮಾರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


administrator