KIBG 2026 ಇತಿಹಾಸ ಬರೆದ ಕರ್ನಾಟಕ ಫುಟ್ಬಾಲ್ ತಂಡ
ಬೆಂಗಳೂರು: ಭಾನುವಾರ ಡಿವು ಕಡಲ ಕಿನಾರೆಯಲ್ಲಿ ಮುಕ್ತಾಯಗೊಂಡ ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕ ಬೀಚ್ ಫುಟ್ಬಾಲ್ (Karnataka Beach Soccer Team) ತಂಡ ಹೊಸ ಇತಿಹಾಸ ಬರೆದಿದೆ. The Karnataka Beach Soccer Team has won its first-ever national medal, securing Bronze at the Khelo India Beach Games 2026 in Diu
ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ತಂಡ ಕೇರಳ ವಿರುದ್ಧ 15-0 ಅಂತರದಲ್ಲಿ ಸೋಲನುಭವಿಸಿತ್ತು, ಕೇರಳ ಈ ಬಾರಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ, ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ ಹಿಮಾಚಲ ಪ್ರದೇಶವನ್ನು 7-3 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಕರ್ನಾಟಕದ ಪರ ಮೊಹಮ್ಮದ್ ಸೂಫಿಯಾನ್ (1 ಮತ್ತು 3 ನೇ ನಿಮಿಷ), ಮೊಹಮ್ಮದ್ ಲಕ್ಮನ್ ಶೇಖ್‌ಜಿ (19 ಮತ್ತು 26ನೇ ನಿಮಿಷ), ಸಯ್ಯದ್ ಅಬ್ದುಲ್ ಮದನಿ (25 ಮತ್ತು 26ನೇ ನಿಮಿಷ) ಹಾಗೂ ಜಸೀರ್ ಸಯೀದ್ ಕಾಝಿ (35ನೇ ನಿಮಿಷ). ಹಿಮಾಚಲ ಪ್ರದೇಶದ ಪರ ಆಕಾಶ್, ಗೌರವ್ ಕೌಂದಲ್ ಹಾಗೂ ಶಿವಾಂಗ್ ಪಠಾನಿಯಾ ಗೋಲು ಗಳಿಸಿದರು.
ನಂತರದ ಪಂದ್ಯದಲ್ಲಿ ಕರ್ನಾಟಕ ತಂಡ ದಾದರ್ ನಗರ ಹವೇಲಿ ಮತ್ತು ಡಾಮನ್ & ಡಿಯು ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿತು. ಮೊಹಮ್ಮದ್ ಸಾದ್ ಖಾನ್, ಮೊಹಮ್ಮದ್ ಲಕ್ಮನ್ ಶೇಖಜೀ ಹಾಗೂ ನಾಯಕ ಮೊಹಮ್ಮದ್ ಸುಫಿಯಾನ್ ಗಳಿಸಿದ ಗೋಲಿನಿಂದ ಕರ್ನಾಟಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಗೋವಾದ ವಿರುದ್ಧ 3-6 ಗೋಲುಗಳ ಅಂತರದಲ್ಲಿ ಸೋಲನುಭವಿಸಿತು. ಗೋವಾದ ಪರ ಪೆರೊ ಗೊನ್ಸಾಲ್ ವೆಸ್ (4, 10, 27ನೇ ನಿಮಿಷ), ನೆಹಾಲ್ ಪರಬ್ (8, 16ನೇ ನಿಮಿಷ) ಅಬೆಲ್ ಗುರ್ಜಾವೋ (32ನೇ ನಿಮಿಷ) ಗೋಲು ಗಳಿಸಿದರು. ಕರ್ನಾಟಕದ ಪರ ನಾಯಕ ಮೊಹಮ್ಮದ್ ಸೂಫಿಯಾನ್ (9ನೇ ನಿಮಿಷ), ಸಯ್ಯದ್ ಅಬ್ದುಲ್ ಸಮದ್ (25, 31ನೇ ನಿಮಿಷ) ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳನ್ನು ಮೂರನೇ ಸ್ಥಾನದ ಜಂಟಿ ವಿಜೇತರೆಂದು ಘೋಷಿಸಲಾಯಿತು, ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನ ಫುಟ್ಬಾಲ್‌ನ ಮೊದಲ ಆವೃತ್ತಿಯಲ್ಲಿ ಕರ್ನಾಟಕ ಫುಟ್ಬಾಲ್ ಪಾಲ್ಗೊಂಡಿರಲಿಲ್ಲ.
ತಂಡದ ವಿವರ: ಕರ್ನಾಟಕ ತಂಡದ ವಿಶೇಷವೆಂದರೆ ಒಟ್ಟು 12 ಆಟಗಾರರಲ್ಲಿ 9 ಆಟಗಾರರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು ಎಂಬುದು ವಿಶೇಷ. ಮೊಹಮ್ಮದ್ ಸೂಫಿಯಾನ್ (ನಾಯಕ), ಮೊಹಮ್ಮದ್ ಸಾದ್ ಖಾನ್ (ಗೋಲ್‌ಕೀಪರ್), ಮೊಹಮ್ಮದ್ ಕಾಷಿಫ್ (ಗೋಲ್ ಕೀಪರ್), ದಿಲೀಶ್ ಕಾನ್ಕೋನ್ಕರ್, ಮೊಹಮ್ಮದ್ ಲಕ್ಮನ್, ಕೆವಿನ್ ಕ್ಸೇವಿಯರ್, ಜಸೀರ್ ಸಹೀದ್ ಖಾಝಿ, ಸಯೀದ್ ಅಬ್ದುಲ್ ಸಮದ್, ಅಮ್ಮರ್ ಕಾಶಿಮ್ಜೀ, ಮೊಹಮ್ಮಸ್ ಗೌಸ್ ಸಲ್ಮಾನ್, ಮೊಹಮ್ಮದ್ ಅಮಾನ್ ಕೋಲಾ, ಮೊಹಮ್ಮದ್ ಮದನಿ,
ಕೋಚ್: ಸಂಜು ಕುಮಾರ್ ಎಸ್, ಮ್ಯಾನೇಜರ್: ದೀಪಕ್ ವಿಲಿಯಮ್
ಐತಿಹಾಸಿಕ ಪದಕ ಗೆದ್ದ ಕರ್ನಾಟಕ ತಂಡಕ್ಕೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಎ, ಕುಮಾರ್, ಅಧ್ಯಕ್ಷ ಎನ್. ಎ. ಹ್ಯಾರಿಸ್ ಹಾಗೂ ಇತರ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

