Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

 ಸುಬ್ರೋತೋ ಕಪ್ ಫುಟ್ಬಾಲ್‌: ಹರಿಯಾಣ,ಬಂಗಾಳಕ್ಕೆ ಗೆಲುವು

ಬೆಂಗಳೂರು,: 64ನೇ ಸುಬ್ರೋಟೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಯ್ಸ್ (U-15) ವಿಭಾಗದ ಮೂರನೇ ದಿನವು ರೋಚಕ ಪಂದ್ಯಗಳ ಸಾಕ್ಷಿಯಾಯಿತು. ಹರಿಯಾಣ ಮತ್ತು ಪಶ್ಚಿಮ ಬಂಗಾಳ ದೊಡ್ಡ ಅಂತರದ ಗೆಲುವುಗಳೊಂದಿಗೆ ಗಮನ ಸೆಳೆದರೆ, ಗುಜರಾತ್ ಕೂಡ ವಿಶ್ವಾಸಾರ್ಹ ಜಯ ದಾಖಲಿಸಿತು. The 64th Edition of the Subroto Cup International Football Tournament Haryana and Bengal registered victory

ದಿನದ ಆರಂಭಿಕ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗೂ ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ (ಝಾರ್ಖಂಡ್) ನಡುವೆ 2-2 ಡ್ರಾ ಆಯಿತು. CISCE ಪರ ಮಮೇಶ್ (30’) ಮತ್ತು ಬಿಕ್ಸನ್ (33’) ಗೋಲು ಗಳಿಸಿದರೆ, ಝಾರ್ಖಂಡ್ ಪರ ಸಂದೀಪ್ (22’) ಮತ್ತು ಅಶೀಷ್ (35’) ಗೋಲು ದಾಖಲಿಸಿದರು.

ಹರಿಯಾಣದ ಇಂದಿರಾ ಮಾಡರ್ನ್ ಹೈ ಸ್ಕೂಲ್ ಅದ್ಭುತ ಪ್ರದರ್ಶನ ನೀಡಿ ತಾಶಿ ನಮ್ಗ್ಯಾಲ್ ಅಕಾಡೆಮಿ (IPSC) ವಿರುದ್ಧ 8-0 ಅಂತರದ ಭರ್ಜರಿ ಜಯ ದಾಖಲಿಸಿತು. ಸುಖ್ವಿಂದರ್ ನಾಲ್ಕು ಗೋಲುಗಳನ್ನು (2’, 17’, 20’, 43’) ಗಳಿಸಿ ಮೆರೆದರೆ, ರೋಹಿತ್ (11’), ಅರಣ್ (22’, 24’) ಮತ್ತು ಆದಿತ್ಯ (50+2’) ತಲಾ ಗೋಲು ಹೊಡೆದರು.

ಚಂಡೀಗಢದ ಗವರ್ಮೆಂಟ್ ಮಾದರಿ ಸೀನಿಯರ್ ಸೆಕೆಂಡರಿ ಸ್ಕೂಲ್ ಮತ್ತು ಹಿಮಾಚಲ ಪ್ರದೇಶದ ಮದರ್ಸ್ ಪ್ರೈಡ್ ಪಬ್ಲಿಕ್ ಸ್ಕೂಲ್ ನಡುವಿನ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತು. ಕೃಷ್ಣ (9’) ಚಂಡೀಗಢ ಪರ ಗೋಲು ಸಾಧಿಸಿತು.

ಮಧ್ಯಾಹ್ನದ ಪಂದ್ಯದಲ್ಲಿ, ಪಶ್ಚಿಮ ಬಂಗಾಳದ ಮಾನಿಕ್‌ಪಾರ ವಿವೇಕಾನಂದ ವಿದ್ಯಾಪೀಠ, ನಾಗಲ್ಯಾಂಡ್ ನ SFS ಹೈಯರ್ ಸೆಕೆಂಡರಿ ಸ್ಕೂಲ್ ವಿರುದ್ಧ 8-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಕೌಶಿಕ್ (2’, 25’), ಮುರ್ಮು (27’, 29’), ಸೌಮೆನ್ (9’), ಫಾಗುನ್ (11’), ಅಭಿಜಿತ್ (42’) ಮತ್ತು ನೆಹಾಲ್ (50+1’) ಪಶ್ಚಿಮ ಬಂಗಾಳ ಪರ ಗೋಲು ಗಳಿಸಿದರು. ನಾಗಲ್ಯಾಂಡ್ ಪರ ಎನ್‌ಗ್ನಮಿಲ್ಲೆನ್ (46’) ಏಕೈಕ ಗೋಲು ದಾಖಲಿಸಿದರು.

ಕೊನೆಯ ಪಂದ್ಯದಲ್ಲಿ, ಗುಜರಾತ್‌ನ ಆನಂದ್ ನಿಕೇತನ ಸ್ಕೂಲ್ ಜಯಶ್ರೀ ಪೆರಿವಾಲ್ ಇಂಟರ್‌ನ್ಯಾಷನಲ್ ಸ್ಕೂಲ್ (ISSO) ವಿರುದ್ಧ 2-0 ಅಂತರದ ಜಯ ಸಾಧಿಸಿತು. ಮೇಘ್ (23’) ಮೊದಲ ಗೋಲು ಗಳಿಸಿದರೆ, ಶುಭಮ್ (50+1’) ಇಂಜುರಿ ಟೈಮ್‌ನಲ್ಲಿ ಜಯವನ್ನು ಸಾಧಿಸಿದರು.

ಮೂರನೇ ದಿನ ಸುಬ್ರೋಟೋ ಕಪ್ ಯುವ ಆಟಗಾರರ ಕೌಶಲ್ಯ, ತಂಡದ ಆಟ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.


administrator