ಅಗ್ರ ಸ್ಥಾನದಲ್ಲಿ ಹಲೆಪ್, ಜೊಕೊವಿಚ್

0
189
ಮ್ಯಾಡ್ರಿಡ್:

ರೊಮಾನಿಯಾದ ಸ್ಟಾರ್ ಆಟಗಾರ್ತಿ ಸಿಮೊನಾ ಹಲೆಪ್ ಅವರು ಮಹಿಳಾ ಟೆನಿಸ್ ಅಸೋಸಿಯೇಷನ್ ಬಿಡುಗಡೆ ಮಾಡಿದ  ರಾಂಕಿಂಗ್‌ನಲ್ಲಿ 6,921 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇನ್ನೂ ಜರ್ಮನಿಯ ಎ.ಕೆರ್ಬರ್ ಅವರು 5,875 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
ಪುರುಷರ ಟೆನಿಸ್ ಅಸೋಸಿಯೇಷನ್ ಬಿಡುಗಡೆ ಮಾಡಿದ ವಿಶ್ವ ಸಿಂಗಲ್ಸ್  ರ್ಯಾಕಿಂಗ್‌ ನಲ್ಲಿ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್ ಅವರು 9,045 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ರಾಫೆಲ್ ನಡಾಲ್ ಎರಡನೇ ಸ್ಥಾನದಲ್ಲಿದ್ದರೆ, ರೋಜರ್ ಫೆಡರರ್ ಮೂರನೇ ರಾಂಕಿಂಗ್‌ ನಲ್ಲಿದ್ದಾರೆ.