Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಓಪನ್‌ ವಾಟರ್‌ ಈಜು: ಕರ್ನಾಟಕಕ್ಕೆ ಡಬಲ್‌ ಸ್ವರ್ಣ

ಮಂಗಳೂರು: ಇಲ್ಲಿನ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್‌ ವಾಟರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಡಿಂಪಲ್‌ ಸೋನಾಕ್ಷಿ ಗೌಡ ವನಿತೆಯರ ವಿಭಾಗದಲ್ಲಿ ಹಾಗೂ ಭಾವಿಕ್‌ ಅಗರ್ವಾಲ್‌ ಬಾಲಕರ ವಿಭಾಗದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Swimming Federation of India open water national championship double gold for Karnataka.

ವನಿತೆಯರ 10 ಕಿಮೀ ಈಜಿನಲ್ಲಿ ಡಿಂಪಲ್‌ ಸೋನಾಕ್ಷಿ 2 ಗಂಟೆ 36 ನಿಮಿಷ ಹಾಗೂ 52 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು, ಈ ವಿಭಾಗದಲ್ಲಿ ಕರ್ನಾಟಕದವೇ ಆದ ಖುಷಿಕಾ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಗೆದ್ದರು.

ಬಾಲಕರ 1 ಕಿ ಮೀ ಈಜಿನಲ್ಲಿ ಕರ್ನಾಟಕದ ಬಾವಿಕ್‌ ಅಗರ್ವಾಲ್‌ 0:11:56 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು, ಎರಡನೇ ಸ್ಥಾನವನ್ನು ಕರ್ನಾಟಕದವೇ ಆದ ಕುಷಲ್‌ ಗೌಡ ಗೆದ್ದುಕೊಂಡರು.

ಬಾಲಕಿಯರ 1 ಕಿ ಮೀ ಈಜಿನಲ್ಲಿ ತಮಿಳುನಾಡಿನ ನಿಹಾರ ಮಹೇಶ್‌ ಚಿನ್ನ ಗೆದ್ದರು, ಕರ್ನಾಟಕದ ವಿವಾನ್ಯ ಅರವಿಂದ ಹಾಗೂ ಸಾನ್ವಿ ಆರ್.‌ ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.

ಪುರುಷರ 10 ಕಿಮೀ ವಿಭಾಗದಲ್ಲಿ ಆಲಿಸ್ಟರ್‌ ಸ್ಯಾಮ್ವೆಲ್‌ ರೇಗೋ ಕಂಚಿನ ಪದಕ ಗೆದ್ದರು. 5 ಕಿ ಮೀ ಬಾಲಕಿಯರ ವಿಭಾಗದಲ್ಲಿ ಸಹನಾ ಶ್ರೀ ಡಿ ಕಂಚಿನ ಪದಕ ಹಾಗೂ 5 ಕಿಮೀ ಪುರುಷರ ವಿಭಾಗದಲ್ಲಿ ದಕ್ಷ್‌ ಪ್ರಸಾದ್‌ ಹಾಗೂ ಅರವಿ ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.


administrator