ಹೂ ಮಾರಿದ ತಾಯಿಗೆ ನಿಶಾಂಕ ಶತಕದ ಉಡುಗೊರೆ
ಕೊಲಂಬೊ: ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಅದ್ಭುತ ಫ್ಲಾಯಿಂಗ್ ಕ್ಯಾಚ್ ಕಬಳಿಸಿ ಅಪಾಯಕಾರಿ ಅಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಪೆವಿಲಿಯನ್ಗೆ ಅಟ್ಟಿ, ಬಳಿಕ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿ ಆಸೀಶ್ ತಂಡವನ್ನು ಟೂರ್ನಿಯಿಂದಲೇ ಹೊರದಬ್ಬುವಂತೆ ಮಾಡಿದ ಶ್ರೀಲಂಕಾದ ಬ್ಯಾಟ್ಸ್ಮನ್ ಪಾತುಮ್ ನಿಶಾಂಕ ಅವರ ತಾಯಿ ದೇವಸ್ಥಾನದ ಮುಂದೆ ಹೂ ಮಾರುತ್ತಿದ್ದರು, ತಂದೆ ಪುಟ್ಟ ಕ್ರಿಕೆಟ್ ಅಂಗಣದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಈಗ ನಿಶಾಂತ್ ಅವರ ಕ್ರಿಕೆಟ್ ಸಾಧನೆಯಿಂದ ಅವರ ಮನೆ ಬೆಳಗುವಂತಾಗಿದೆ. Sri Lankan cricketer Pathum Nissanka’s path was arduous, with his father working as a daily wage labourer in a cricket ground and his mother selling flowers in front of a temple.
ಪಾತುಮ್ ನಿಶಾಂಕ್ ಅವರ ಮೊದಲ ಕೋಚ್ ಅವರ ತಂದೆ ಸುನಿಲ್ ಸಿಲ್ವಾ. ಗಾಲೆ ಸಮೀಪದ ಕಲುತರ ಎಸ್ಪ್ಲಾನಡೆ ಎಂಬ ಅಂಗಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ತಾಯಿ ಗೀತಿಕಾ ಪಕ್ಕದಲ್ಲಿರುವ ಕಲುತರ ದೇವಸ್ಥಾನದ ಬೀದಿಯಲ್ಲಿ ಹೂವು ಮಾರುತ್ತಿದ್ದರು. ಅವರ ಮನೆ ಸುನಾಮಿ ನಿರಾಶ್ರಿತರಿಗಾಗಿ ಸರಕಾರ ಕಟ್ಟಿಸಿಕೊಟ್ಟ ಪುಟ್ಟ ಮನೆ. ಆದರೆ ಕ್ರಿಕೆಟ್ ಅವರ ಕುಟುಂಬದ ಬಡತನವನ್ನು ದೂರು ಮಾಡಿದೆ.
ಯುವ ಆಟಗಾರ ಪಾತುಮ್ ನಿಶಾಂಕ ಮೊದಲ ಬಾರಿಗೆ ಕ್ಲಬ್ವೊಂದಕ್ಕೆ ಸಹಿ ಮಾಡಿರುವುದು ಕಲುತರ ದೇವಸ್ಥಾನದ ಪ್ರಾಂಗಣದಲ್ಲಿ, ಇದರಿಂದಾಗಿ ಈ ಆಟಗಾರನಿಗೆ ದೇವಿಯ ಆಶೀರ್ವಾದವಿದೆ ಎನ್ನುತ್ತಾರೆ ಕೊಲಂಬೊದ ಕ್ರಿಕೆಟ್ ಅಭಿಮಾನಿಗಳು.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾತುಮ್ ನಿಶಾಂಕ್ 52 ಎಸೆತಗಳನ್ನೆದುರಿಸಿ 10 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ಅಜೇಯ ಶತಕ ಸಿಡಿಸಿ ಜಯ ತಂದುಕೊಟ್ಟರು. ಮಗನ ಈ ಸಾಧನೆ ಹೆತ್ತವರಿಗೆ ಆರಂಭದಲ್ಲಿ ಅನುಭವಿಸಿದ ನೋವುಗಳನ್ನು ಮರೆಯುವಂತೆ ಮಾಡಿತು.

