Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬುಲ್ಸ್‌ ಗೆಲುವಿನ ಓಟಕ್ಕೆ ತಲೈವಾಸ್‌ ತಡೆ

ಜೈಪುರ: ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸದ ಹೊರತಾಗಿಯೂ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 8ನೇ ಪಂದ್ಯದಲ್ಲಿತಮಿಳ್‌ ತಲೈವಾಸ್‌ ವಿರುದ್ಧ 6 ಅಂಕಗಳಿಂದ ಪರಾಭವಗೊಂಡಿತು. Raid Machine Arjun Deshwal Leads Tamil Thalaivas to Thrilling Win, Ends Bengaluru Bulls’ Purple Patch.

ಎಸ್‌ಎಂಎಸ್‌ ಒಳಾಂಗಣ ಕ್ರೀಡಾಂಗಣದಲ್ಲಿಮಂಗಳವಾರ ನಡೆದ ದ್ವಿತೀಯ ಪಂದ್ಯದಲ್ಲಿಬುಲ್ಸ್‌ 29-35 ಅಂಕಗಳಿಂದ ತಲೈವಾಸ್‌ಗೆ ಮಂಡಿಯೂರಿತು. ಹೀಗಾಗಿ ಸತತ ನಾಲ್ಕು ಗೆಲುವುಗಳ ನಂತರ ಬುಲ್ಸ್‌ ತಂಡ ಸೋಲನುಭವಿಸಿತು.

ಅಲಿರೇಜಾ ಮಿರ್ಜಾಯಿನ್‌( 10 ಅಂಕ), ಗಣೇಶ್‌ ಹನುಮಂತಗೋಳ( 4 ಅಂಕ), ಅಹ್ಮದ್‌ ರೇಜಾ (5 ಅಂಕ) ಮತ್ತು ಯೋಗೇಶ್‌ (3 ಅಂಕ) ಬೆಂಗಳೂರು ಬುಲ್ಸ್‌ ತಂಡದ ಪರ ಗಮನ ಸೆಳೆದರು. ಅತ್ತ ತಮಿಳ್‌ ತಲೈವಾಸ್‌ ತಂಡದ ಪರ ಅರ್ಜುನ್‌ ದೇಶ್ವಾಲ್‌(13 ಅಂಕ), ನರೇಂದರ್‌ ಕಂಡೋಲಾ(5 ಅಂಕ) ಹೋರಾಟಕ್ಕೆ ಸಾಕ್ಷಿಯಾದರು.

ಪಂದ್ಯದ ಕೊನೆಯ ಹತ್ತು ನಿಮಿಷ ಎರಡು ತಂಡಗಳ ತುರುಸಿನ ಪೈಪೋಟಿಯನ್ನು ನಿರೀಕ್ಷಿಸಲಾಯಿತು. ಆದರೆ ತಲೈವಾಸ್‌ ಮುಂದೆ ಬುಲ್ಸ್‌ ಆಟಗಾರರು ಮಂಕಾದರು. ಮತ್ತೊಮ್ಮೆ ಸೂಪರ್‌ 10 ಸಾಹಸ ಮಾಡಿದ ಅಲಿರೇಜಾ ಅವರಿಗೆ ಇತರ ಆಟಗಾರರು ಸಾಥ್‌ ನೀಡಲು ವಿಫಲಗೊಂಡಿದ್ದು, ಬುಲ್ಸ್‌ ಹೋರಾಟಕ್ಕೆ ಹಿನ್ನಡೆಯನ್ನುಂಟು ಮಾಡಿತು.

ಮುನ್ನಡೆ ವಿಸ್ತರಿಸುವ ಹಾದಿಯಲ್ಲಿಬುಲ್ಸ್‌ ದ್ವಿತೀಯಾರ್ಧ ಆರಂಭಿಸಿತು. ಅಂತೆಯೇ ತಲೈವಾಸ್‌ ಹಿನ್ನಡೆ ತಗ್ಗಿಸುವ ನಿಟ್ಟಿನಲ್ಲಿಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಚುರುಕಿನ ರೇಡಿಂಗ್‌ ನಡೆಸಿದ ನಾಯಕ ಅರ್ಜುನ್‌ ದೇಶ್ವಾಲ್‌ ತಂಡದ ಹೋರಾಟಕ್ಕೆ ಬಲ ತುಂಬಿದರು. ಹೀಗಾಗಿ ತಲೈವಾಸ್‌ 18-22ರಲ್ಲಿಹಿನ್ನಡೆ ತಗ್ಗಿಸಿ ಪ್ರತಿರೋಧ ಒಡ್ಡಿತು. ಈ ಹಂತದಲ್ಲಿಹೊಂದಾಣಿಕೆ ಆಟವಾಡಲು ತಿಣುಕಾಡಿದ ಬುಲ್ಸ್‌ ಆಟಗಾರರು ಪದೇ ಪದೇ  ಅಂಕ ಬಿಟ್ಟುಕೊಟ್ಟ ಪರಿಣಾಮ ತಲೈವಾಸ್‌ 22-23ರಲ್ಲಿಮರು ಹೋರಾಟ ಸಂಘಟಿಸಿ ಅಚ್ಚರಿ ಮೂಡಿಸಿತು. 30 ನಿಮಿಷಕ್ಕೆ ಬುಲ್ಸ್‌ ತಂಡವನ್ನು ಆಲೌಟ್‌ ಮಾಡಿ ಸೇಡು ತೀರಿಸಿಕೊಂಡ ತಲೈವಾಸ್‌ 26-23ರಲ್ಲಿಮೇಲುಗೈ ಸಾಧಿಸಿ ಬುಲ್ಸ್‌ಗೆ ಆಘಾತ ನೀಡಿತು.

ಆರಂಭದಲ್ಲಿಪ್ರಬಲ ಪ್ರತಿರೋಧ ಎದುರಿಸಿದ ಹೊರತಾಗಿಯೂ ಬೆಂಗಳೂರು ಬುಲ್ಸ್‌ ತಂಡ ಪಂದ್ಯದ ಮೊದಲಾರ್ಧಕ್ಕೆ (20-14) ತಮಿಳ್‌ ತಲೈವಾಸ್‌ ವಿರುದ್ಧ 6 ಅಂಕಗಳ ಮುನ್ನಡೆ ಸಾಧಿಸುವಲ್ಲಿಯಶಸ್ವಿಯಾಯಿತು.

ಹ್ಯಾಟ್ರಿಕ್‌ ಸೋಲಿನ ನಂತರ ಸತತ ನಾಲ್ಕು ಗೆಲುವುಗಳೊಂದಿಗೆ ಎದುರಾಳಿ ತಂಡಗಳಲ್ಲಿಭಯ ಹುಟ್ಟಿಸಿರುವ ಬಿ.ಸಿ.ರಮೇಶ್‌ ಕೋಚ್‌ ಸಾರಥ್ಯದಲ್ಲಿಪಳಗಿರುವ ಬುಲ್ಸ್‌, ಗೆಲುವಿನ ನಾಗಾಲೋಟ ಕಾಯ್ದುಕೊಳ್ಳುವ ಗುರಿಯೊಂದಿಗೆ ಅಖಾಡಕ್ಕಿಳಿಯಿತು. ಆದರೆ ಮೊದಲ ಹತ್ತು ನಿಮಿಷಗಳ ಆಟದಲ್ಲಿಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ಸಂಘಟಿಸಿದವು. 5-5, 6-6 ಮತ್ತು 7-7ರಲ್ಲಿಇತ್ತಂಡಗಳು ಮುನ್ನಡೆಗಾಗಿ ಯತ್ನಿಸಿದವು.

15ನೇ ನಿಮಿಷದ ವೇಳೆಗೆ ತಂಡದ ಮುನ್ನಡೆಯನ್ನು 12-10ಕ್ಕೆ ವಿಸ್ತರಿಸಿಕೊಂಡ ಬುಲ್ಸ್‌, ಕ್ರಮೇಣ ಪಂದ್ಯದ ಮೇಲೆ ಹಿಡಿತ ಸಾಧಿಸಿ ಎದುರಾಳಿ ಮೇಲೆ ಒತ್ತಡ ಹೇರಿತು. ಮೊದಲಾರ್ಧ ಮುಕ್ತಾಯಕ್ಕೆ 3 ನಿಮಿಷಗಳಿರುವಾಗ ಮಿಂಚಿದ ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌, ಎರಡು ಟಚ್‌ ಪಾಯಿಂಟ್ಸ್‌ ಅಲ್ಲದೆ ಎರಡು ಆಲೌಟ್‌ ಪಾಯಿಂಟ್ಸ್‌ ತರುವಲ್ಲಿನಿರ್ಣಾಯಕ ಪಾತ್ರವಹಿಸಿದರು. ಹೀಗಾಗಿ ಮುನ್ನಡೆಯನ್ನು ಹೆಚ್ಚಿಸಿಕೊಂಡ ಬೆಂಗಳೂರು ತಂಡ ವಿರಾಮದ ವೇಳೆಗೆ 6 ಅಂಕಗಳಿಂದ ಮೇಲುಗೈ ಸಾಧಿಸಿತು.

ಬೆಂಗಳೂರು ಬುಲ್ಸ್‌ ತಂಡ ತನ್ನ ಮುಂದಿನ ಪಂದ್ಯದಲ್ಲಿಸೆಪ್ಟೆಂಬರ್‌ 22ರಂದು ಗುಜರಾತ್‌ ಜಯಂಟ್ಸ್‌ ತಂಡವನ್ನು ಎದುರಿಸಲಿದೆ.


administrator