Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಕಯಾಕಿಂಗ್‌: ಕರ್ನಾಟಕದ ಪ್ರಾಂಜಲ ಶೆಟ್ಟಿಗೆ ಕಂಚಿನ ಪದಕ

ಬೆಂಗಳೂರು: ಮಧ್ಯಪ್ರದೇಶದ ಮಹೇಶ್ವರ್‌ನಲ್ಲಿ ನಡೆದ 12ನೇ ರಾಷ್ಟ್ರೀಯ ಜೂನಿಯರ್‌ ಕಯಾಕಿಂಗ್‌ ಸಲೋಮ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪ್ರಾಂಜಲ ಶೆಟ್ಟಿ ಅವರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Pranjala Shetty of Karnataka has brought laurels to the state by winning the Bronze Medal in the Kayak Slalom event at the 12th Junior National Kayak Slalom Championship

ದೇಶದ ವಿವಿಧ ರಾಜ್ಯಗಳಿಂದ ಪ್ರತಿಭಾವಂತ ಜೂನಿಯರ್‌ ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. ಆಟದಲ್ಲಿ ಶಿಸ್ತು, ಬದ್ಧತೆ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ  ಪ್ರಾಂಜಲಾ ಶೆಟ್ಟಿ ತೋರಿಸಿದ್ದಾರೆ. ಅವರ ಈ ಸಾಧನೆ ಜಲಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕದ ಯುವ ಸ್ಪರ್ಧಿಗಳಿಗೆ ಸ್ಪೂರ್ತಿಯಾಗಿದೆ. ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಕರ್ನಾಟಕದ ಪರ ಪದಕ ಗೆದ್ದ ಏಕೈಕ ಸ್ಪರ್ಧಿ ಎಂಬ ಹೆಗ್ಗಳೆಕೆಗೆ ಪ್ರಾಂಜಲ ಶೆಟ್ಟಿ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಪ್ರಾಂಜಲಾ ಶೆಟ್ಟಿ ಹಾಗೂ ಅವರ ತರಬೇತುದಾರರಿಗೆ ಕರ್ನಾಟಕ ಕಯಾಕಿಂಗ್‌ ಸಂಸ್ಥೆಯ ಕಾರ್ಯದರ್ಶಿ ಕ್ಯಾಪ್ಟನ್‌ ದಿಲೀಪ್‌ ಕುಮಾರ್‌ ಶುಭ ಕೋರಿದ್ದಾರೆ.


administrator