ಸ್ಪೋರ್ಟ್ಸ್ ಮೇಲ್ ವರದಿ
ಇದೇ ತಿಂಗಳ 25ರಿಂದ 31ರ ವರೆಗೆ ಥಾಯ್ಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆಕ್ವಾಂಡೊ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಯುವ ಟೆಕ್ವಾಂಡೊ ಪಟು ನಿಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಮೊಗವೀರ ಸಮುದಾಯದ ಈ ಯುವ ಕ್ರೀಡಾ ಸಾಧಕ ಈಗಾಗಲೇ ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಎರಡು ಕಂಚಿನ ಪದಕ ಗೆದ್ದು ಸಾಧನೆ ಮಾಡಿರುತ್ತಾರೆ. ಇತ್ತೀಚೆಗೆ ದಕ್ಷಿಣ ಕೊರಿಯಾ ದಲ್ಲಿರುವ ವಿಶ್ವ ಟೆಕ್ವಾಂಡೊ ಪ್ರಧಾನ ಕಚೇರಿಯಲ್ಲಿ ಬ್ಲಾಕ್ ಬೆಲ್ಟ್ ಗಳಿಸಿರುತ್ತಾರೆ.