ಬಂಗಾರಪ್ಪ ಕಟ್ಟಿದ ಸಂಸ್ಥೆಗೆ ಅವರ ಕುಮಾರ ಅಧ್ಯಕ್ಷ
ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಕಳೆದ ಭಾನುವಾರ ರಾಜ್ಯದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಘಟನೆ ನಡೆಯಿತು. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಕಾಳಜಿಯಿಂದ ಸ್ಥಾಪಿಸಲ್ಪಟ್ಟ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಗೆ ಅವರ ಮಗ ಮಾಜಿ ಸಚಿವ, ನಟ ಕುಮಾರ ಬಂಗಾರಪ್ಪ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. Kumar Bangarappa former minister and son of former Karnataka Chief Minister S. Bangarappa was elected president of the Karnataka Badminton Association (KBA).
ಮಾಜಿ ಮುಖ್ಯಮಂತ್ರಿ ಅವರು ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಗೆ ಸರಕಾರದ ವತಿಯಿಂದ ಭೂಮಿ ನೀಡಿದರು, ಬ್ಯಾಡ್ಮಿಂಟನ್ ಆಟಗಾರರಾಗಿದ್ದ ಬಂಗಾರಪ್ಪ ಅವರು ತಮ್ಮ ಆಡಳಿತದ ಅವಧಿಯಲ್ಲಿ ರೆಹೆಜಾ ಬ್ಯಾಡ್ಮಿಂಟನ್ ಅಂಗಣವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ತಂದೆ ಪ್ರೋತ್ಸಾಹಿಸಿದ ಬ್ಯಾಡ್ಮಿಂಟನ್ ಕ್ರೀಡೆಗೆ ಮತ್ತಷ್ಟು ನೆರವು ನೀಡಬೇಕೆಂಬ ಉದ್ದೇಶದಿಂದ ಅವರ ಮಗ ಕುಮಾರ ಬಂಗಾರಪ್ಪ ಅವರು ಅಧ್ಯಕ್ಷರಾಗುವ ಮೂಲಕ ಬ್ಯಾಡ್ಮಿಂಟನ್ ಕ್ರೀಡೆಗೆ ಹೊಸ ರೂಪ ಸಿಗಲಿದೆ ಎಂಬುದು ಕ್ರೀಡಾಭಿಮಾನಿಗಳ ನಿರೀಕ್ಷೆ. ಕಾರ್ಯದರ್ಶಿಯಾಗಿ ವಿ. ಮುರಳೀಧರ್ ಕಾರ್ಯನಿರ್ವಹಿಸಲಿದ್ದಾರೆ.

ಪದಾಧಿಕಾರಿಗಳು (2025-2029):
ಕುಮಾರ ಬಂಗಾರಪ್ಪ ಎಸ್. (ಅಧ್ಯಕ್ಷ), ವಿ, ಮುರಳೀಧರ್ (ಗೌರವ ಕಾರ್ಯದರ್ಶಿ), ಜಿ.ಎಂ. ನಿಶ್ಚಿತ (ಖಜಾಂಚಿ), ಅನೂಪ್ ಶ್ರೀಧರ್ (ಜಂಟಿ ಕಾರ್ಯದರ್ಶಿ), ಡಾ, ಅನಿಲ್ ಕುಮಾರ್ (ಹಿರಿಯ ಉಪಾಧ್ಯಕ್ಷ), ಬಸವರಾಜ ಎಸ್. ಎನ್. (ಉಪಾಧ್ಯಕ್ಷ), ಕಿರಣ್ ಬೆಲ್ಲಂ (ಉಪಾಧ್ಯಕ್ಷ), ಟಿ.ಎಸ್. ವಿಶ್ವಾಸ್ (ಉಪಾಧ್ಯಕ್ಷ), ಸಿ.ಎಸ್. ಮಹೇಶ್ (ಉಪಾಧ್ಯಕ್ಷ).

ಕಾರ್ಯಕಾರಿ ಸಮಿತಿ ಸದಸ್ಯರು:
ಎಸ್. ಸಿ ಶ್ರೀಧರ್, ಡಾ. ನಿಶಾಂತ್ ಹಿರೇಮಠ್ ಎಸ್, ವಿಜಯ್ ಎನ್, ಗುರುಪ್ರಸಾದ್, ಹರೀಶ್ ಕುಮಾರ್ ಬಿ ಆರ್., ಅರವಿಂದ್ ಭಟ್, ಆರ್. ಅರುಣ್, ಸಂತೋಷ್ ಕುಮಾರ್ ಶೆಟ್ಟಿ, ಆನಂದ್ ಬಿ ಹವಣ್ಣವರ್, ರಾಜೇಶ್ ಪಿ.

