Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕುಸ್ತಿಯಲ್ಲಿ ಸಿದ್ದಿ ಪ್ರಭುತ್ವ, ಪದಕ ಪಟ್ಟಿಯಲ್ಲಿ ಕರ್ನಾಟಕ ಟಾಪ್‌

ರಾಯ್ಪುರ: ಅಥ್ಲೆಟಿಕ್ಸ್‌ನಲ್ಲಿ ರಿತುಶ್ರೀ, ಕುಸ್ತಿಯಲ್ಲಿ ಪ್ರಿಸ್ಟಿನಾ ಪೆದ್ರು ಸಿದ್ದಿ ಚಿನ್ನದ ಪದಕ ಹಾಗೂ ಶಾಲಿನ ಸಯರ್‌ ಸಿದ್ದಿ ಬೆಳ್ಳಿ ಮತ್ತು ಅಮೂಲ್ಯ ಕುಂದರ್ಗಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಇಲ್ಲಿ ನಡೆಯುತ್ತಿರುವ ಮೊದಲ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನಲ್ಲಿ ಕರ್ನಾಟಕ 19 ಚಿನ್ನ, 7 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. Khelo India Tribal Games Karnataka won three gold in Wrestling, second runners up at meet.

ಕ್ರೀಡಾಕೂಟದ ಏಳನೇ ದಿನದಲ್ಲಿ ಕರ್ನಾಕಟ ಸಿದ್ದಿ ಸಮುದಾಯದ ಕುಸ್ತಿಪಟು ಪ್ರಿಸ್ಟಿನಾ ಪೆದ್ರು ಸಿದ್ದಿ 68ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಚಿನ್ನ ಗೆದ್ದರು. ಸಿದ್ದಿ ಸಮುದಾಯದ ಇನ್ನೋರ್ವ ಕುಸ್ತಿಪಟು ಶಾಲಿನ ಸಯರ್‌ ಬೆಳ್ಳಿ ಪದಕ ಗೆದ್ದರು. ಇದೇ ವಿಭಾಗದಲ್ಲಿ ಕರ್ನಾಟಕದ ಅಮೂಲ್ಯ ಕುಂದರ್ಗಿ ಕಂಚಿನ ಪದಕ ಗೆದ್ದರು.

ಹೆತ್ತವರ ಕಷ್ಟಕ್ಕೆ ಚಿನ್ನದ ಉಡುಗೊರೆ:

ಹಳಿಯಾಳದ ಪ್ರಿಸ್ಟಿನಾ ಪೆದ್ರು ಸಿದ್ದಿ ಅವರ ತಂದೆ  ಪೆದ್ರು ಗಾರೆ ಕೆಲಸ ಮಾಡುತ್ತಿದ್ದು, ತಾಯಿ ಜುಲಿಯಾನ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಿಸ್ಟಿನಾ ಹುಬ್ಬಳ್ಳಿಯಲ್ಲಿರುವ ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವನಿತೆಯರ 400 ಮೀಟರ್‌ ಓಟದಲ್ಲಿ ಚಿನ್ನ ಗೆದ್ದ ಪಾವಗಡದ ರಿತುಶ್ರೀ ಅವರ ತಾಯಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸೋಮವಾರ ಕುಸ್ತಿಯಲ್ಲಿ ಚಿನ್ನ ಗೆದ್ದಿರುವ ರೋಹನ್‌ ಎಂ ದೊಡ್ಡಮನಿ ಅವರ ತಾಯಿ ಕೂಡ ಹಳಿಯಾಳದ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ಮಕ್ಕಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ತಕ್ಕ ಉಡುಗೊರೆ ನೀಡಿದ್ದಾರೆ.

ಕುಸ್ತಿಯಲ್ಲಿ ಕರ್ನಾಟಕ 3 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕಗಳೊಂದಿಗೆ ಎರಡನೇ ರನ್ನರ್ಸ್‌ ಅಪ್‌ ಗೌರವಕ್ಕೆ ಪಾತ್ರವಾಯಿತು.


administrator