ಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆಯುವವರಿಗೆ ಇಲ್ಲಿದೆ ಅವಕಾಶ
ಬೆಂಗಳೂರು: ಸಾಹಸ ಕ್ರೀಡೆಗಳಲ್ಲಿ ತರಬೇತಿ ಪಡೆಯುವವರಿಗೆ ಕರ್ನಾಟಕ ಸರಕಾರದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು General Thimayya National Academy of Adventure ಬೇಸಿಗೆ ಶಿಬಿರಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸಿದೆ. Join Adventure Sports Summer Camp Organized by Department of Youth Empowerment & Sports.
ಬೇಸಿಗೆ ಶಿಬಿರದ ವಿವರ:
ಏರೋ ಸ್ಪೋರ್ಟ್ಸ್ ಕ್ಯಾಂಪ್: 10 ರಿಂದ 15 ವರ್ಷ ವಯೋಮಿತಿಯವರಿಗೆ ಜಕ್ಕೂರಿನಲ್ಲಿ ಏಪ್ರಿಲ್ 14 ರಿಂದ 18, 10 ರಿಂದ 16 ವರ್ಷ ವಯೋಮಿತಿಯವರಿಗೆ ಏಪ್ರಿಲ್ 21 ರಿಂದ 25, 10 ರಿಂದ 16 ವರ್ಷ ವಯೋಮಿರಿಯವರಿಗೆ ಏಪ್ರಿಲ್ 10 ರಿಂದ 16 ರ ವರೆಗೆ ತರಬೇತಿ ನಡೆಯಲಿದೆ. ಇಲ್ಲಿ 30 ಆಸಕ್ತರಿಗೆ ಮಾತ್ರ ಅವಕಾಶವಿರುತ್ತದೆ. ಆದ್ದರಿಂದ ಆಸಕ್ತರು ರಾಜೇಂದ್ರ ಹಸಬಾವಿ ಅವರನ್ನು 9448038220 ದೂರವಾಣಿ ಮೂಲಕ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಿ. ಪ್ರವೇಶ ಶುಲ್ಕ ರೂ. 10,000.
ವಿಂಡ್ ಸರ್ಫಿಂಗ್ ಮತ್ತು ಸೈಲಿಂಗ್ ಕ್ಯಾಂಪ್: ಏಪ್ರಿಲ್ 29 ರಿಂದ ಮೇ 3 ರವರೆಗೆ ನಡೆಯಲಿದೆ. ಈ ಶಿಬಿರವು ಕಾರವಾರದಲ್ಲಿ ನಡೆಯುತ್ತದೆ. 14 ರಿಂದ 17 ವರ್ಷ ವಯೋಮಿತಿಯ 30 ಆಸಕ್ತರಿಗೆ ಅವಕಾಶವಿರುತ್ತದೆ. ಪ್ರವೇಶ ಶುಲ್ಕ 7,500 ರೂ. ಆಸಕ್ತರು ಪ್ರಕಾಶ್ ಕೆ ಹರಿಕಾಂತ್ರ ಅವರನ್ನು 7760365079 ಸಂಪರ್ಕಸಬಹುದು.
ಸಾಹಸ ಮತ್ತು ಪರಿಸರ ಅರಿವು ಕ್ಯಾಂಪ್: ಈ ಶಿಬಿರವು ಕೊಡಗಿನ ಬರಪೊಳೆಯಲ್ಲಿ ನಡೆಯಲಿದೆ. 10 ರಿಂದ 13 ವಯೋಮತಿಯವರಿಗೆ ಏಪ್ರಿಲ್ 29 ರಿಂದ ಮೇ 3 ರ ವರೆಗೆ ಈ ಶಿಬಿರ ನಡೆಯಲಿದೆ. 50 ಆಸಕ್ತ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. 10 ರಿಂದ 15 ವರ್ಷ ವಯೋಮಿತಿಯವರಿಗೆ ಮೇ 4 ರಿಂದ ಮೇ 8ರ ವರೆಗೆ ಶಿಬಿರ ನಡೆಯಲಿದೆ. ಆಸಕ್ತ 50 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. 10 ರಿಂದ 16ವರ್ಷ ವಯೋಮಿತಿಯವರಿಗೆ ಮೇ 13 ರಿಂದ ಮೇ 17 ರ ವರೆಗೆ ಶಿಬಿರ ನಡೆಯಲಿದೆ. 50 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಎಲ್ಲ ವಿಭಾಗಕ್ಕೂ ಪ್ರವೇಶ ಶುಲ್ಕ 6000 ರೂ. ಆಗಿರುತ್ತದೆ.
ಆಸಕ್ತರು ಮಂಜುನಾಥ್ ಆರ್ ಅವರನ್ನು 9480383764 ದೂರವಾಣಿ ಮೂಲಕ ಸಂಪರ್ಕಿಸಬಹುದು.
ಆಕ್ವಾ ಸ್ಪೋರ್ಟ್ಸ್ ಕ್ಯಾಂಪ್: ಈ ಶಿಬಿರವು ವಾಣಿ ವಿಲಾಸ ಸಾಗರದಲ್ಲಿ ನಡೆಯಲಿದೆ. 10 ರಿಂದ 16 ವರ್ಷ ವಯೋಮಿತಿಯವರಿಗೆ ಎರಡು ದಿನಾಂಕಗಳಲ್ಲಿ ನಡೆಯಲಿದೆ. ಮೇ 1 ರಿಂದ ಮೇ 5 ಹಾಗೂ ಮೇ 8 ರಿಂದ ಮೇ 12 ರ ವರೆಗೆ ನಡೆಯಲಿದೆ. ಆಸಕ್ತ 50 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಪ್ರವೇಶ ಶುಲ್ಕ 6000 ರೂ. ಆಗಿರುತ್ತದೆ. ಆಸಕ್ತರು ಶಬ್ಬೀರ್ ಎಫ್ ಅವರನ್ನು 8971553337 ದೂರವಾಣಿ ಮೂಲಕ ಸಂಪರ್ಕಿಸಬಹುದು.
ರಿವರ್ ರಾಫ್ಟಿಂಗ್ & ಕಯಾಕಿಂಗ್ ಕೋರ್ಸ್: ದಾಂಡೇಲಿಯಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಆಸಕ್ತ 30 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. 12 ರಿಂದ 15 ವರ್ಷ ವಯೋಮಿತಿಯವರಿಗೆ ಏಪ್ರಿಲ್ 17 ರಿಂದ ಏಪ್ರಿಲ್ 21 ರ ವರೆಗೆ ಹಾಗೂ 15 ರಿಂದ 17 ವರ್ಷ ವಯೋಮಿತಿಯವರಿಗೆ ಏಪ್ರಿಲ್ 24 ರಿಂದ ಏಪ್ರಿಲ್ 28 ರ ವರೆಗೆ ನಡೆಯಲಿದೆ. 30 ಆಸಕ್ತರಿಗೆ ಅವಕಾಶವಿರುತ್ತದೆ. 7500 ರೂ. ಪ್ರವೇಶ ಶುಲ್ಕ. ಆಸಕ್ತರು ದಿನೇಶ್ ಸುವರ್ಣ ಅವರನ್ನು 9731362617 ಸಂಪರ್ಕಿಸಬಹುದು.
ಸಾಹಸ ಮತ್ತು ಪರಿಸರ ಅರಿವು ಕ್ಯಾಂಪ್: ಈ ಶಿಬಿರವು ಉಳವಿಯಲ್ಲಿ ನಡೆಯಲಿದೆ. 10 ರಿಂದ 16 ವರ್ಷ ವಯೋಮಿತಿಯವರಿಗೆ ಮೇ 13 ರಿಂದ 17 ರ ವರೆಗೆ ನಡೆಯಲಿದೆ. ಆಸಕ್ತ 30 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಪ್ರವೇಶ ಶುಲ್ಕ 7500 ರೂ. ಆಸಕ್ತರು ಗಂಗಾಧರ ಅವರನ್ನು 805035755 ದೂರವಾಣಿ ಮೂಲಕ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ www.gethnaa.org ಗೆ ಲಾಗಿನ್ ಆಗಿ. ಹೆಲ್ಪ್ಲೈನ್ ನಂಬರ್: 1800 4251 488