Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಥ್ರಿಲ್ಲರ್‌ ಟೆಸ್ಟ್‌ ಮ್ಯಾಚ್‌: ಭಾರತಕ್ಕೆ 6 ರನ್‌ ಜಯ

ಓವಲ್‌: ಇಂಗ್ಲೆಂಡ್‌ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ರೋಚಕ 6 ರನ್‌ ಅಂತರದಲ್ಲಿ ಜಯ ಗಳಿಸಿದ ಭಾರತ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. India beat England by six runs and series draw in thrilling end.

ಗೆಲ್ಲಲು 374 ರನ್‌ ಗಳಿಸಬೇಕಾಗಿದ್ದ ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ 367 ರನ್‌ಗೆ ಸರ್ವ ಪತನ ಕಂಡಿತು. ನಾಲ್ಕನೇ ದಿನಲ್ಲಿ ಕ್ಯಾಚ್‌ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದ ಮೊಹಮ್ಮದ್‌ ಸಿರಾಜ್‌ 104 ರನ್‌ಗೆ 5 ವಿಕೆಟ್‌ ಗಳಿಸಿ ಜಯದ ರೂವಾರಿ ಎನಿಸಿದರು. ಕನ್ನಡಿಗ ಪ್ರಸೀಧ್‌ ಕೃಷ್ಣ 126 ರನ್‌ಗೆ 4 ವಿಕೆಟ್‌ ಗಳಿಸಿದರು.

ಇಂಗ್ಲೆಂಡ್‌ನ ಹ್ಯಾರಿ ಬ್ರೋಕ್‌ (111) ಹಾಗೂ ಜೊಯ್‌ ರೂಟ್‌ (105) ಅಬ್ಬರದ ಆಟ ಪ್ರದರ್ಶಿಸಿದಾಗ ಇಂಗ್ಲೆಂಡ್‌ ನಾಲ್ಕನೇ ದಿನದಲ್ಲೇ ಜಯ ಗಳಿಸಿ ಸರಣಿ ಗೆಲ್ಲುವ ಲಕ್ಷಣ ತೋರಿತ್ತು. ಆದರೆ ಪ್ರಸೀಧ್‌ ಹಾಗೂ ಸಿರಾಜ್‌ ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಭಾರತಕ್ಕೆ ಜಯ ತಂದಕೊಟ್ಟರು. ಗಾಯಗೊಂಡಿದ್ದ ಕ್ರಿಸ್‌ ವೋಕ್‌ ಕೊನೆಯ ಆಟಗಾರನಾಗಿ ಅಂಗಣಕ್ಕಿಳಿದು ಕ್ರಿಕೆಟ್‌ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ಮೊಹಮ್ಮದ್‌ ಸಿರಾಜ್‌ ಪಂದ್ಯ ಶ್ರೇಷ್ಠ ಹಾಗೂ ಹ್ಯಾರಿ ಬ್ರೂಕ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಭಾರತ: 224 & 396

ಇಂಗ್ಲೆಂಡ್‌: 247 & 367


administrator