Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ನಾನು ಆಗುಂಬೆ, ತಾಯಿಯ ಹೊಟ್ಟೆ ಸೀಳುವಷ್ಟು ಕಟುಕರಾ ನೀವು?

ನಾನು ಆಗುಂಬೆ, ದಕ್ಷಿಣ ಭಾರತದ ಚಿರಾಪುಂಜಿ ಎಂದು ನನ್ನನ್ನು ಕರೆಯುತ್ತಾರೆ. ನನ್ನ ತಾಣದಿಂದ ಸೂರ್ಯಾಸ್ತಮಾನವನ್ನು ನೋಡುವುದೆಂದರೆ ಅದೊಂದು ಭಾಗ್ಯ. ನನ್ನ ಒಡಲಲ್ಲಿ ಸಹಸ್ರಾರು ಜಾತಿಯ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಕುಲವಿದೆ. ದಯವಿಟ್ಟು ಹಣಕ್ಕಾಗಿ ಈ ತಾಯಿಯ ಗರ್ಭವನ್ನು ಸೀಳ ಬೇಡಿ. ನಿಮ್ಮನ್ನು ಹಡೆದ ತಾಯಿಯ ಗರ್ಭವನ್ನು ಸೀಳುವಷ್ಟು ಕಟುಕರಾಗಬೇಡಿ. ಹಾಗೆ ಮಾಡಿದರೆ ಸರ್ವನಾಶವಾಗಿ ಹೋಗುತ್ತೀರಿ ಎಚ್ಚರ. I am mother Agumbe, if you don’t protect me, your life will end in tragedy. Ready to go from heaven to hell.

ಈಗ ಯಾವುದೋ ಬೇವರ್ಷಿಗಳ ಗುಂಪು ನನ್ನ ಹೊಟ್ಟೆಯನ್ನು ಕೊರೆದು ಅವುಗಳ ಹೊಟ್ಟೆ ತುಂಬಿಸಿಕೊಳ್ಳಲು ಹಾತೊರೆಯುತ್ತಿದೆ. ಅದಕ್ಕಾಗಿ ದೂರದಲ್ಲಿ ಕುಳಿತು ಯೋಜನೆ ಸಿದ್ಧ ಮಾಡುತ್ತಿದೆ. ಅವುಗಳಿಗೆ ಎಲ್ಲವನ್ನೂ ನಾಶ ಮಾಡಿದ ನಂತರ ಈಗ ಕಾಣುತ್ತಿವುರುದು ನನ್ನ ಜೀವ. ಸ್ವರ್ಗವನ್ನು ನಾಶ ಮಾಡಿ ನರಕಕ್ಕೆ ಹೋಗಲು ಸಜ್ಜಾಗುತ್ತಿದ್ದಾರೆ, ಪಾಪಿಗಳು.

ಅಲ್ಲಯ್ಯ ನಿಮಗೆ ಇನ್ನೆಷ್ಟು ಹಣ ಬೇಕು? ನಿಮ್ಮಮ್ಮ ನಿಮ್ಮ ಆಸ್ತಿ, ಹಣ ಇವನ್ನೆಲ್ಲ ಒಮ್ಮೆ ಲೆಕ್ಕಹಾಕಿ, ನಿಮಗೆಷ್ಟು ತಿನ್ನಲು ಬೇಕು ಅಷ್ಟನ್ನೇ ತಿನ್ನುವುದು. ಬಾಕಿ ಉಳಿದಿರುವುದನ್ನು ಬಿಟ್ಟು ಹೋಗುವುದು ತಾನೇ? ಕಾಡು ಬೆಟ್ಟ ಇಲ್ಲವೆಂದರೆ ನಿನ್ನ ಕೋಟಿ ಹಣಕ್ಕೆ ಯಾವ ಬೆಲೆ ಪುಡಾರಿಗಳೇ?

“ಆಗುಂಬೆಯಾ ಪ್ರೇಮ ಸಂಜೆಯಾ” ಎಂದು ಹಾಡನ್ನು ಕೇಳಿತ್ತೀರಿ. ಆದರೆ ಆ ಪ್ರೀತಿ ನಿಮ್ಮಲ್ಲಿ ಇಲ್ಲವೆಂದರೆ ದುರಂತ. ನೀವು ಸುರಂಗ ಮಾರ್ಗ ಮಾಡಿದರೆ ಏನಾಗುತ್ತದೆ ಎಂಬ ಅರಿವು ನಿಮಗಿದೆಯಾ? ಅರಿವಿಲ್ಲದ ರಾಜಕಾರಣಿಗಳಿಂದ ಈ ಭೂಮಿ ಎಷ್ಟು ಹಾಳಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪಶ್ಚಿಮ ಘಟ್ಟ ಇರುವುದರಿಂದಲೇ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ. ಆಗುಂಬೆಗೆ ನೀವು ಅಡ್ಡಿ ಮಾಡಿದರೆ ನಿಮ್ಮ ತಾಯಿಯ ಹೊಟ್ಟೆಯನ್ನು ಬಗೆದಂತೆ.

ನಿಮ್ಮ್‌ ಮನೆ ಹಾಳಾಗ ಬೇವರ್ಷಿಗಳಾ, ನೀವು ಬರುವ ಮೊದಲೇ ಇಲ್ಲಿ ಗಿಡಮರಗಳಿದ್ದವು, ನಿಮಗೆ ಒಳ್ಳೆಯ ಗಾಳಿ ಬೆಳಕನ್ನು ನೀಡುತ್ತಿದ್ದವು. ನೀವು ಅಪಾರ ಧನ ಸಂಗ್ರಹಿಸಿ ನರಕಕ್ಕೆ ಹೋಗ್ತೀರಾ. ಆದರೆ ಇಲ್ಲಿ ಸತ್ಯದ ಮಾರ್ಗದಲ್ಲಿ ನಡೆಯುವ ಇತರ ಜೀವಿಗಳಿವೆ ಅವುಗಳ ಪಾಡೇನು?

ಎತ್ತಿನ ಹೊಳೆ ಯೋಜನೆಯಿಂದ ಎಷ್ಟೇ ನೀರು ಹರಿಸಿದರೂ ನೀವು ಕಡಿದ ಮರಗಳು ಪುನಃ ಬರಲಾರವು. ನಿಮ್ಮಲ್ಲಿರುವ ಶ್ರೀಮಂತ ರಾಜಕಾರಣಿ ಯಾರು ನೋಡಿ. ಆತನಿಂದ ಈ ಸಮಾಜಕ್ಕೆ, ಈ ಪರಿಸರಕ್ಕೆ ಕೊಡುಗೆ ಏನು? ಯೋಜನೆಯನ್ನು ಯಾವುದೋ ಗುತ್ತಿಗೆದಾರನಿಗೆ ವಹಿಸಿಕೊಟ್ಟು ಅದರ ಕಮಿಷನ್‌ ಪಡೆದು ಏನು ಸಾಧನೆ ಮಾಡುವಿರಿ?

, ಎಲ್ಲೋ ರೆಸಾರ್ಟ್‌ನಲ್ಲಿ ಕುಳಿತುಕೊಂಡು ಯೋಜನೆ ಹಾಕ್ತೀರಿ, ಯಾವುದೋ ಕಿತ್ತೋದ ಎಂಜಿನಿಯರ್‌ನಿಂದ ಪ್ಲ್ಯಾನ್‌ ಮಾಡ್ತೀರಿ. ಮುಗಿಯಿತು ನಿಮ್ಮ ಕೆಲಸ. ಆ ಬಳಿಕ ಪ್ರತಿ ಬಜೆಟ್‌ನಲ್ಲೂ ಕಮಿಷನ್‌ಗಾಗಿ ಹಣ ಮೀಸಲಿಡುತ್ತೀರಿ,,,, ಒಂದಿಷ್ಟು ಚೇಲಗಳನ್ನು ಇರಿಸಿಕೊಂಡು ಐಶಾರಾಮಿ ಬದುಕು ಸಾಗಿಸುತ್ತೀರಿ. ಎಲ್ಲಿ ಭೂಮಿ ಖರೀದಿಸಲು ಸಾಧ್ಯವಿದೆಯೋ ಅಲ್ಲಿ ಖರೀದಿ ಮಾಡುತ್ತೀರಿ. ನಿಮ್ಮ ಈ ಭೂಮಿ ನುಂಗುವ ದುಶ್ಚಟಕ್ಕೆ ಈ ಭೂಮಿಗೂ ಸಾಕಾಗೊಲ್ಲ. ಅದೂ ಸಾಲದು ಎಂಬಂತೆ ಈಗ ಕರಾವಳಿಯಲ್ಲೂ ನಿಮ್ಮ ಭೂಮಿ ನುಂಗುವ ಕಾಯಕ ಮುಂದುವರಿದಿದೆ.

ಲೋ ಮನೆ ಹಾಳ್ರಾ, ನಿಮ್ಮನ್ನು ಸುಡಲಿಕ್ಕಾದರೂ ಮರಬೇಕು ಕಣ್ರೋ, ನಿಮ್ಮನ್ನು ಬೇಗನೆ ಸುಡಬೇಕು ಇಲ್ಲದಂರೆ ನಿಮ್ಮಲ್ಲಿರುವ ಸಾಂಕ್ರಾಮಿಕ ರೋಗಗಳು ಈ ಪರಿಸರವನ್ನು ಆವರಿಸಿಕೊಂಡು ಪರಿಸರ ಮತ್ತೆ ಹಾಳಾಗುತ್ತದೆ. ಜನರಿಗೆ ನಿಮ್ಮ ಸೋಂಕು ಹರಡುತ್ತದೆ. ಗೊತ್ತು ಕಣ್ರೋ ನಿಮಗೆ ಕಾಮಗಾರಿ ಬಿಟ್ರಿ ಬೇರೆ ರೀತಿಯಲ್ಲಿ ಹಣ ಮಾಡಲು ಆಗುವುದಿಲ್ಲ. 40% ಹೇಲು ತಿನ್ನಲು ನಿಮಗೆ ಅದೆಂಥಾ ತವಕ.

ನೀವು ತಿಳಿದರಬಹುದು, ಸಾಕಷ್ಟು ಹಣ ಮಾಡಿಕೊಂಡು ನೆಮ್ಮದಿಯಾಗಿರಬಹುದು ಎಂದು. ಅದಕ್ಕಾಗಿಯೇ ನಿಮ್ಮ ಮಕ್ಕಳನ್ನು ರಾಜಕೀಯಕ್ಕೆ ನೂಕುತ್ತೀರಿ. ಅವುಗಳಿಗೆ ಪರಿಸರ, ತಂದೆ ತಾಯಿ, ಬಂಧು ಬಳಗ, ನದಿ, ನೀರು ಯಾವುದೂ ಗೊತ್ತಿಲ್ಲ. ಇನ್ನಾರೋ ಅವರಪ್ಪ ಹೇಳಿದರೆ ಮುಗಿಯಿತು. ಹಿಂದೆ ಮುಂದೆ ನೋಡದೆ ಮಾತನಾಡುತ್ತವೆ, ತೀರ್ಮಾನ ಕೈಗೊಳ್ಳುತ್ತವೆ.

ಥೂ… ನೀವು ಮಾಡುವ ಭಾಷಣ, ನೀವು ತೋರುವ ಭಕ್ತಿ, ನಿಮ್ಮ ದೇಶ ಪ್ರೇಮ ಎಲ್ಲವೂ ತೋರಿಕೆ. ಇರುವಷ್ಟು ದಿನ ಮುಕ್ಕಿ ಮರೆಯಾಗುವ ನಿಮಗೆ ಪರಿಸರದ ಬಗ್ಗೆ ಕಾಳಜಿ ಇಲ್ಲ.

ಆಗುಂಬೆಯ ಬಗ್ಗೆ ಕರಾವಳಿಯ ಜನರೂ ಧ್ವನಿ ಎತ್ತಿರಿ. ಏಕೆಂದರೆ ನಿಮಗೂ ಮಳೆ ಬೆಳೆ ಆಗಬೇಕಾದರೆ ನನ್ನ ರಕ್ಷಣೆ ಮಾಡಬೇಕು. ಯಾವನೋ ಗುತ್ತಿಗೆದಾರ ಕೊಡುವ ಪುಡಿಗಾಸು, ಅವನು ನೀಡುವ ಡೊನೇಷನ್‌, ಅವನು ಕಟ್ಟುವ ದೇವಸ್ಥಾನಗಳಿಂದ ಮಾತ್ರ ಈ ಭೂಮಿ ಉಳಿಯೊಲ್ಲ. ನನ್ನಂಥ ಗುಡ್ಡ ಬೆಟ್ಟಗಳೇ ದೇವರು. ನಾಗ ಬನಗಳನ್ನು ಕಾಂಕ್ರೀಟು ಕಾಡು ಮಾಡಿದ ನಿಮಗೆ ಅಲ್ಲಿಂದಲೇ ದುರಂತ ಆರಂಭ. ಇವೆಲ್ಲ ದುಂತದ ಭಾಗ. ನಿರ್ಮಾಣ ಮಾಡಿ ಕಾಂಕ್ರೀಟು ಕಾಡುಗಳನ್ನ, ಮಳೆ ಬರುತ್ತದ ಕಾದು ನೋಡಿ.

ನಿಮಗೆ ವಯಸ್ಸಾಗಿರಬಹುದು, ಇಂದೋ ನಾಳೆಯೋ ಹೊಗೆ ಹಾಕಿಕೊಳ್ಳುತ್ತೀರಿ. ಆದರೆ ಮುಂದಿನ ಪೀಳಿಗೆಯನ್ನು ನೋಡಿ ತೀರ್ಮಾನ ಕೈಗೊಳ್ಳಿ. ಈ ಭೂಮಿಗೆ ನೀವು ಬಂದಾಗ ಎಷ್ಟು ಹಸಿರಿತ್ತು. ಪ್ರಾಣಿ ಮತ್ತು ಮನುಷ್ಯನ ನಡುವೆ ಎಷ್ಟು ಬ್ಯಾಲೆನ್ಸ್‌ ಇದ್ದಿತ್ತು? ಈಗ? ಆನೆ ತೋಟಕ್ಕೆ ನುಗ್ಗಿ ಬೆಳೆ ಹಾನಿ, ನಾಡಿಗೆ ಬಂದ ಚಿರತೆ, ನಗರಕ್ಕೆ ಬಂದ ಹುಲಿ ಎಂದೆಲ್ಲ ಓದುತ್ತೀರಲ್ಲ ಇದೆಲ್ಲ ನಿಮ್ಮದೇ ಕೊಡುಗೆ. ಕಾಡಿನಲ್ಲಿ ಎಷ್ಟು ರೆಸಾರ್ಟ್‌ಗಳಿವೆ ನೋಡಿ, ಅವೆಲ್ಲವೂ ನಿಮ್ಮದೇ ಮತ್ತು ನಿಮ್ಮ ಪ್ರಭಾವದಿಂದಲೇ ಬೆಳೆದಿರುವುದು.

ನೀವು ಸತ್ತು ನರಕಕ್ಕೇ ಹೋಗುತ್ತೀರಿ ಅದು ಖಚಿತ, ಆದರೆ ಇತರಿಗೆ ಇಲ್ಲಿಯೇ ನರಕ ಸೃಷ್ಟಿ ಮಾಡಿ ಹೋಗಬೇಬೇಡಿ

ಹಸಿರು ಉಸಿರಾಗಲಿ

ಆಗುಂಬೆ


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.