ಯುದ್ಧ: ಮನೆಗೆ ತಲುಪದ ಜಿಂಬಾಬ್ವೆ ತಂಡ
ಮುಂಬಯಿ: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿರುವುದು ಹಲವಾರು ಕ್ರೀಡಾ ಕೂಟಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಅಡ್ಡಿಯಾಗಿದೆ. How US-Israel attacks on Iran effects on Sports
ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಜಿಂಬಾಬ್ವೆ ತಂಡ ಈಗ ತಾಯ್ನಾಡಿಗೆ ಹಿಂದಿರುಗಲಾಗದೆ ಭಾರತದಲ್ಲೇ ಉಳಿಯವಂತಾಗಿದೆ. ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ದುಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, 16 ಸದಸ್ಯರನ್ನೊಳಗೊಂಡ ಭಾರತದ ಕುಸ್ತಿಪಟುಗಳ ತಂಡ ಅಲ್ಬೇನಿಯಾದ ತಿರಾನದಲ್ಲಿ ನಡೆದ ಯುನೈಟೆಡ್ ವಿಶ್ವ ಕುಸ್ತಿ ರಾಂಕಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದು ಭಾರತಕ್ಕೆ ಬರಲಾಗದೆ ಆತಂಕದಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಬೇಕಾಗಿದ್ದ ಫಾರ್ಮುಲಾ ಒನ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಬೇಕಾಗಿದ್ದ ಸ್ಪರ್ಧಿಗಳು ಮತ್ತು ಅಧಿಕಾರಿಗಳು ದುಬೈನಲ್ಲೇ ಕಾಲ ಕಳೆಯುವಂತಾಗಿದೆ.
ಟೆನಿಸ್ ತಾರೆ ಡೇನಿಯಲ್ ಮೆಡ್ವಿಡೋನ್ ದುಬೈ ಓಪನ್ ಗೆದ್ದ ನಂತರ ಮನೆ ತಲುಪಲಾಗದೆ ದುಬೈಯಲ್ಲೇ ಉಳಿಯವಂತಾಗಿದೆ. ಅದೇ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಆಂಡ್ರೆ ಬುಲೆವ್ ಕೂಡ ದುಬೈನಲ್ಲೇ ಕಾಲ ಕಳೆಯುವಂತಾಗಿದೆ. ಬಾಕ್ಸರ್ ಕ್ರಿಸ್ ಯುಬಾಂಕ್ ಜೂನಿಯರ್ ಕೂಡ ದುಬೈನಲ್ಲೇ ಉಳಿದಿದ್ದಾರೆ. ಪಶ್ಚಿಮ ಏಷ್ಯಾದ ಅನೇಕ ಫುಟ್ಬಾಲ್ ಟೂರ್ನಿಗಳು ಯುದ್ಧದಿಂದಾಗಿ ರದ್ದಾಗಿವೆ.

