ಬೆಂಗಳೂರು ಓಪನ್: ದಕ್ಷಿಣೇಶ್ವರ ಸುರೇಶ್ ಪ್ರಿ ಕ್ವಾರ್ಟರ್ ಫೈನಲ್‌ಗೆ
ಬೆಂಗಳೂರು: ಕ್ರೊಯೇಷಿಯಾದ ಡೂಜೆ ಅಜುಕೋವಿಕ್ ವಿರುದ್ಧ 6-4, 6-4 ಅಂತರದಲ್ಲಿ ಜಯ ಗಳಿಸಿದ ಭಾರತದ ದಕ್ಷಿಣೇಶ್ವರ ಸುರೇಶ್ ಬೆಂಗಳೂರು ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
Dhakshineswar Suresh powers into the Round of 16 at Dafa News Bengaluru Open
ಎಸ್ ಎಂ ಕೃಷ್ಣ ಟೆನಿಸ್ ಅಂಗಣದಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಚಾಂಪಿಯನ್‌ಷಿಪ್‌ನಲ್ಲಿ ದಕ್ಷಿಣೇಶ್ವರ, ಆರಂಭದಲ್ಲೇ ಸರ್ವ್ ಬ್ರೇಕ್ ಮಾಡುವ ಮೂಲಕ ಆತ್ಮವಿಶ್ವಾಸದ ಹೆಜ್ಜೆ ಇಟ್ಟರು. ಕಳೆದ ವರ್ಷ ಡೇವಿಸ್ ಕಪ್‌ನಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದ ದಕ್ಷಿಣೇಶ್ವರ, ಸುಲಭವಾಗಿ ಮೊದಲ ಸೆಟ್ ಗೆದ್ದಕೊಂಡರು. ಎರಡನೇ ಗೇಮ್‌ನಲ್ಲಿ ಡೂಜೆ ಸ್ವಲ್ಪ ಮಟ್ಟಿನ ಹೋರಾಟ ನೀಡಿದರೂ, ದಕ್ಷಿಣೇಶ್ವರ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರಿಂದ ಯಶಸ್ಸು ಸಿಗಲಿಲ್ಲ,
“ಇಲ್ಲಿ ಸ್ಥಳ ಹಾಗೂ ಹವಾಮಾನ ಆಡಲು ಬಹಳ ಉತ್ತಮವಾಗಿದೆ. ನನ್ನ ಆಟದ ಮೇಲೆ ನಂಬಿಕೆ ಇಟ್ಟಿದ್ದೆ. ನನ್ನ ಸರ್ವ ನನ್ನ ದೊಡ್ಡ ಅಸ್ತ್ರ. ಕಳೆದ ಕೆಲವು ವರ್ಷಗಳಿಂದ ನಾನು ಇದರ ಮೇಲೆ ಗಮನವಿಟ್ಟು ಕೆಲಸ ಮಾಡುತ್ತಿದ್ದೆ, ಇವತ್ತು ಅದು ಉಪಯೋಗಕ್ಕೆ ಬಂದಿದೆ,” ಎಂದು ದಕ್ಷಿಣೇಶ್ವರ ಹೇಳಿದರು.

