ರಸೆಲ್ ಸ್ಫೋಟಕ್ಕೆ ಸನ್‌ಸೆಟ್!

0
152
ಏಜೆನ್ಸೀಸ್ ಕೋಲ್ಕೊತಾ

ಆಂಡ್ರೆ ರಸೆಲ್ ಅವರ ಸ್ಫೋಟಕ, ಅಜೇಯ 49 ರನ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ರೈಡರ್ಸ್ ತಂಡ ರೋಚಕ 6 ವಿಕೆಟ್ ಜಯ ಗಳಿಸಿ ಶುಭಾರಂಭ  ಕಂಡಿದೆ.

ಡೇವಿಡ್ ವಾರ್ನರ್ (85) ಅವರ ಆಕರ್ಷಕ ಅ‘ರ್ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ 3 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಸವಾಲಿನ ಗುರಿ ನೀಡಿತ್ತು. ಕೆಕೆಆರ್ ಆರಂಭ  ಉತ್ತಮವಾಗಿರಲಿಲ್ಲ. ಕ್ರಿಸ್ ಲಿನ್ ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ನಿತಿನ್ ರಾಣಾ (68) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೆಕೆಆರ್‌ಗೆ ಒಂದು ಹಂತದಲ್ಲಿ ಜಯದ ಹಾದಿ ಸುಗಮವಾಗಿತ್ತು. ಆದರೆ ರಾಬಿನ್ ಉತ್ತಪ್ಪ , ದಿನೇಶ್ ಕಾರ್ತಿಕ್ ಹಾಗೂ ರಾಣಾ ಅವರ ವಿಕೆಟ್ ಉರುಳಿದಾಗ ಸನ್‌ರೈಸರ್ಸ್ ಹಾದಿ ಸುಗಮವಾಗಿತ್ತು. ಅಂತಿಮ ಮೂರು ಓವರ್‌ಗಳಲ್ಲಿ ಕೆಕೆಆರ್‌ಗೆ 53  ರನ್‌ಗಳ ಜಯದ ಅಗತ್ಯವಿದ್ದಿತ್ತು. ರಸೆಲ್  19 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿ ಅಜೇಯ 49 ರನ್‌ಗಳ ನೆರವಿನಿಂದ ಜಯದ ಹಾದಿಯನ್ನು ಸುಗಮಗೊಳಿಸಿದರು. ಶುಭ್ಮ್ ನ್ ಗಿಲ್ 10 ಎಸೆತಗಳಲ್ಲಿ 2 ಸಿಕ್ಸರ್ ಮೂಲಕ 18 ರನ್ ಗಳಿಸಿ ಇನ್ನೂ 2 ಎಸೆತ ಬಾಕಿ ಇರುವಾಗಲೇ ಜಯ ತಂದಿತ್ತರು.