Sunday, May 26, 2024

ಐಪಿಎಲ್ ಉದ್ಘಾಟನಾ ಸಮಾರಂಭದ ಹಣ ಸೇನೆಗೆ

ಸ್ಪೋರ್ಟ್ಸ್ ಮೇಲ್ ವರದಿ

ಇದುವರೆಗಿನ ಹನ್ನೊಂದು ಐಪಿಎಲ್ ಉದ್ಘಾಟನಾ ಸಮಾರಂಭ  ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ ಆ ಮೊತ್ತವನ್ನು ಭಾರತೀಯ ಸೇನೆ, ಸಿಆರ್‌ಪಿಎಫ್ , ‘ಭಾರತೀಯ ವಾಯುಸೇನೆ ಹಾಗೂ ‘ಭಾರತೀಯ ನೌಕಾಪಡೆಗೆ ನೀಡಲು ತೀರ್ಮಾನಿಸಿದೆ.

ಐಪಿಎಲ್ ಉದ್ಘಾಟನೆಗೆ 20 ಕೋಟಿ ರೂ.ವೆಚ್ಚ ತಗಲುತ್ತದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ‘ಭಾರತೀಯ ಸೇನೆಗೆ 11 ಕೋಟಿ ರೂ., ಸಿಆರ್‌ಪಿಎ್ ಪಡೆಗೆ 7 ಕೋಟಿ ರೂ, ನೌಕಾಪಡೆ ಮತ್ತು ವಾಯು ಸೇನೆಗೆ ತಲಾ 1 ಕೋಟಿ ರೂ. ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

Related Articles