Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಎಚ್‌ಎಂಸಿ ಯುನೈಟೆಡ್‌ ರೂ 40 ಲಕ್ಷ, ಕೊನೆಗೆ ಡಿವೈಡೆಡ್‌ ರೂ 20 ಲಕ್ಷ

ಉಡುಪಿ: ಸಾಕಷ್ಟು ವಿವಾದಗಳಿಗೆ ಕಾರಣವಾಗಿ ಅರ್ಧದಲ್ಲೇ ರದ್ದಾಗಿದ್ದ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟ್ರೋಫಿಯ ವಿಜೇತ ತಂಡಗಳನ್ನು ಸೋಮವಾರ ಅದೃಷ್ಟದ ನಾಣ್ಯ ಚಿಮ್ಮುವ ಮೂಲಕ ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಖುಷಿ ಅಮರ್ ಪಾಂಚಜನ್ಯ ತಂಡ ಚಾಂಪಿಯನ್‌ ಆಗಿ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ, ಬೆಂಗಳೂರು ಜಯಕರ್ನಾಟಕ ತಂಡ ರನ್ನರ್‌ಅಪ್ ಪ್ರಶಸ್ತಿ ಸ್ವೀಕರಿಸಿತು. ಇದೊಂದಿಗೆ ಕ್ರಿಕೆಟ್‌ ಅಂಗಣದಲ್ಲಿ ಆರಂಭವಾದ ಪಂದ್ಯ ಕ್ವಾರ್ಟರ್‌ ಫೈನಲ್‌ ವರೆಗೆ ನಡೆದು, ನಂತರದ ಪಂದ್ಯಗಳು ಪೊಲೀಸ್‌ ಠಾಣೆಯಲ್ಲಿ ಚರ್ಚೆಯಾಗಿ ಕೊನೆಯಲ್ಲಿ ಖಾಸಗಿ ಹೊಟೇಲ್‌ನಲ್ಲಿ ಕೊನೆಗೊಂಡಿತು. Controversial HMC United Trophy cricket tournament’s prize distribution ended in Toss. All semifinalist got Rs 5 lakh each.

ಚಾಂಪಿಯನ್‌ ಹಾಗೂ ರನ್ನರ್ಸ್‌ ಅಪ್‌ ತಂಡಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಇಝಾನ್ ಚೈತನ್ಯ ಫೈಸ್‌ರ್ ಎಚ್.ಎಂ ಎಕ್ತಾ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡಗಳಿಗೆ ತಲಾ 5 ಲಕ್ಷ ರೂಗಳಂತೆಒಟ್ಟು 20 ಲಕ್ಷ ರೂ.ಗಳ ಬಹುಮಾನ ವಿತರಿಸಲಾಯಿತು.  ಟೂರ್ನಿಯ ಒಟ್ಟು ಬಹುಮಾನದ ಮೊತ್ತ 40 ಲಕ್ಷ ರೂ. ಆಗಿತ್ತು. ಸರಣಿಶ್ರೇಷ್ಠ ಬಹುಮಾನವಾಗಿರುವ ಮಾರುತಿ ಸ್ವಿಫ್ಟ್‌ ಕಾರು ಯಾರಿಗೂ ನೀಡಲಿಲ್ಲ.


administrator