ಕೆನರಾ ಬ್ಯಾಂಕ್ ಸಿಂಧೂರ ಕಪ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಉದಯಬಾನು ಕ್ರೀಡಾಂಗಣದಲ್ಲಿ ಕಾಮಧೇನು ಯೂಥ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯನ್ನು ಕೆನರಾ ಬ್ಯಾಂಕ್ ತಂಡ ಗೆದ್ದುಕೊಂದಿದೆ.
Canara Bank won the Karnataka State Ball Badminton championship Sindhoora Trophy
ಈ ಚಾಂಪಿಯನ್ಷಿಪ್‌ನಲ್ಲಿ 22 ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಕಾಮಧೇನು ಯೂಥ್ ಕ್ಲಬ್ ವಿರುದ್ಧ ಕೆನರಾ ಬ್ಯಾಂಕ್ 35-31, 35-22 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಹಲವು ದಶಕಗಳಿಂದ ಕೆನರಾ ಬ್ಯಾಂಕ್ ವಿವಿಧ ಕ್ರೀಡೆಗಳಿಗೆ ಪ್ರೋತ್ದಾಹ ನೀಡುತ್ತಾ ಬಂದಿದ್ದು, ಅಳಿವಿನಂಚಿನಲ್ಲಿರುವ ಬ್ಯಾಡ್ಮಿಂಟನ್ ಕ್ರೀಡೆಗೆ ಈಗಲೂ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ.

ಕೆನರಾ ಬ್ಯಾಂಕ್ ತಂಡವನ್ನು ಹಿರಿಯ ಆಟಗಾರ ಸುದರ್ಶನ್, ಗಿರಿ ಪ್ರಸಾದ್, ಪ್ರಶಾಂತ್ ಹಾಗೂ ಧೀರಜ್ ರೆಡ್ಡಿ ಪ್ರತಿನಿಧಿಸಿದ್ದರು,

