Thursday, December 12, 2024

ಬುಲ್ ಆರ್ಭಟಕ್ಕೆ ಕರಗಿದ ಸ್ಟೀಲ್

ಸ್ಪೋರ್ಟ್ಸ್ ಮೇಲ್ ವರದಿ

ಪವನ್ ಶೆಹ್ರಾವತ್ ಅವರ ಮಿಂಚಿನ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 42-34 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.

  ಜೋನ್ ಚಾಲೆಂಜರ್ ವಾರದ ಪಂದ್ಯದಲ್ಲಿ  ಪವನ್ ಶೆಹ್ರಾವತ್ 21ರೈಡ್ ಅಂಕಗಳನ್ನು ಗಳಿಸುವ ಮೂಲಕ ಸ್ಟೀಲರ್ಸ್ ತಂಡದ ಡಿಫೆನ್ಸ್ ವಿಭಾಗ ನುಚ್ಚುನೂರಾಯಿತು. ಸ್ಟೀಲರ್ಸ್ ಪರ ವಿಕಾಸ್ ಕಂಡೋಲ 14 ಹಾಗೂ ಮನು ಗೋಯತ್ 9 ಅಂಕಗಳನ್ನು ಗಳಿಸಿದರು. ಹರಿಯಾಣ ಸ್ಟೀಲರ್ಸ್ ತಂಡಕ್ಕೆ ಇದು ಋತುವಿನ ಆರನೇ ಸೋಲಾಗಿದೆ. ಮೂರನೇ ನಿಮಿಷದಲ್ಲಿ ಶೆಹ್ರಾವತ್ ಹಾಗೂ ಮನು ಗೋಯತ್ ರೈಡಿಂಗ್‌ನಲ್ಲಿ ಮಿಂಚುವ ಮೂಲಕ ಪಂದ್ಯ 3-2ರಲ್ಲಿ ಸಾಗಿತು. 6ನೇ ನಿಮಿಷದಲ್ಲಿ ರೋಹಿತ್ ಕುಮಾರ್ ಅವರ ರೈಡಿಂಗ್ ಅಂಕದ ಮೂಲಕ ಪಂದ್ಯ 5-5ರಲ್ಲಿ ಸಮಬಲಗೊಂಡಿತು. ಆದರೆ ಹರಿಯಾಣ ಸ್ಟೀಲರ್ಸ್ ಪ್ರಥಮಾರ್ಧದಲ್ಲಿ 15-13 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧದ  25ನೇ ನಿಮಿಷದಲ್ಲಿ ಬೆಂಗಳೂರು ತಂಡ ಸ್ಟೀಲರ್ಸ್ ಪಡೆಯನ್ನು ಆಲೌಟ್ ಮಾಡುವ ಮೂಲಕ 21-17ರಲ್ಲಿ ಮುನ್ನಡೆ ಕಂಡಿತು. ಶೆಹ್ರಾವತ್ ಸೂಪರ್ ರೈಡ್ ಮೂಲಕ ಬೆಂಗಳೂರು ತಂಡ 26=18ರಲ್ಲಿ ಮುಂದೆ ಸಾಗಿತು. ರೈಡರ್‌ಗಳು ಯಶಸ್ಸು ಕಾಣುವ ಮೂಲಕ ಪಂದ್ಯ 32-23ರಲ್ಲಿ ಮುನ್ನಡೆಯಿತು. ಐದು ನಿಮಿಷಗಳ ಆಟ ಬಾಕಿ ಇರುವಾಗ ಬೆಂಗಳೂರು ತಂಡ ಎಂಟು ಅಂಕಗಳೊಂದಿಗೆ ಮೇಲುಗೈ ಸಾಧಿಸಿತ್ತು. 37ನೇ ನಿಮಿಷದಲ್ಲಿ ವಿಕಾಸ್ ಒಂದು ರೈಡ್ ಅಂಕ ಗಳಿಸುವುದರೊಂದಿಗೆ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

Related Articles