Thursday, October 10, 2024

Pragathi Gowda ಫ್ರಾನ್ಸ್‌ ರ‍್ಯಾಲಿಯಲ್ಲಿ ಇತಿಹಾಸ ಬರೆದ ಕರ್ನಾಟಕದ ಪ್ರಗತಿ ಗೌಡ

ಬೆಂಗಳೂರು: ಫ್ರಾನ್ಸ್‌ನಲ್ಲಿ ನಡೆದ ರ‍್ಯಾಲಿ ಡೆಸ್‌ ವ್ಯಾಲೀಸ್‌ ಅಂತಾರಾಷ್ಟ್ರೀಯ ರ‍್ಯಾಲಿಯಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಬೆಂಗಳೂರಿನ ಪ್ರಗತಿ ಗೌಡ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಯಶಸ್ಸಿನ ಹಾದಿ ತುಳಿದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ರ‍್ಯಾಲಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Bangalores Pragathi Gowda shines in debut international rally finishes third at Rally des Vallees 2024

ರ‍್ಯಾಲಿ 5 ಕಾರ್‌ ಕ್ಲಾಸ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಗತಿ ಗೌಡ 23:51.8 ನಿಮಿಷಗಳಲ್ಲಿ ಗುರಿ ತಲುಪಿ ಇತಿಹಾಸ ನಿರ್ಮಿಸಿದರು. ಈ ಮೂಲಕ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಪೋಡಿಯಂ ಸ್ಥಾನ ಪಡೆದ ಮೊದಲ ಭಾರತೀಯ ರ‍್ಯಾಲಿಪಟು ಎನಿಸಿದರು. ಇನ್ನೊಂದು ವಿಶೇಷವೆಂದರೆ ಪ್ರಗತಿ ಗೌಡ ಭಾಗವಹಿಸಿದ್ದು ಪುರುಷರ ವಿಭಾಗದಲ್ಲಿ. ಫ್ರಾನ್ಸ್‌ನ ರಾಷ್ಟ್ರೀಯ ಚಾಆಂಪಿಯನ್‌ ಯಾನ್‌ ಕಾರ್ಬರಾಂಡ್‌ ಈ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗೆದ್ದರು.

ಯೂರೋಪ್‌ನಲ್ಲಿ ಮೂರು ತಿಂಗಳ ಕಾಲ ಕಠಿಣ ಅಭ್ಯಾಸ ನಡೆಸಿದ್ದ 26 ವರ್ಷದ ಪ್ರಗತಿ ಗೌಡ ಸಹ ಚಾಲಕಿಯಾದ ಗ್ಯಾಬ್ರಿಯಲ್‌ ಮೊರಾಲ್ಸ್‌ ಜೊತೆಗೂಡಿ ಮೂರನೇ ಸ್ಥಾನ ಪಡೆದದ್ದು ಮಾತ್ರವಲ್ಲ ಸಮಗ್ರ 34ನೇ ಸ್ಥಾನ ಗಳಿಸಿದರು. “ಫ್ರಾನ್ಸ್‌ನಲ್ಲಿ ನಡೆದ ನನ್ನ ಮೊದಲ ಅಂತಾರಾಷ್ಟ್ರೀಯ ರ‍್ಯಾಲಿ ಅದ್ಭುತ ಅನುಭವ ನೀಡಿದೆ. ಇದು ನನ್ನ ಪಾಲಿಗೆ ಸವಾಲಿನ ರ‍್ಯಾಲಿಯಾಗಿತ್ತು. ಆದರೆ ಪ್ರತಿಯೊಂದು ಕಿಲೋ ಮೀಟರ್‌ ಪೂರ್ಣಗೊಳ್ಳುತ್ತಿದ್ದಂತೆ ಆತ್ಮವಿಶ್ವಾಸ ಹೆಚ್ಚಿಸಿತು. ಇತರ ರ‍್ಯಾಲಿ ಪಟುಗಳ ವೇಗವನ್ನು ಸರಿಗಟ್ಟುವಲ್ಲಿ ಯಶಸ್ವಿಯಾದೆ. ಕೆಲವೊಂದು ಕಡೆ ಗಂಟೆಗೆ 165 ಕಿಮೀ ವೇಗದಲ್ಲಿ ಚಲಾಯಿಸಿದ್ದೆ, ಸರಾಸರಿ 102 ಕಿಮೀ,” ಎಂದು ಪ್ರಗತಿ ಗೌಡ ಹೇಳಿದ್ದಾರೆ.

Related Articles