ಒಲಿಂಪಿಕ್ಸ್ ಪದಕ ವಿಜೇತನಿಗೆ ಸೋಲಿನ ಶಾಕ್ ನೀಡಿದ ಆಯುಷ್ ಶೆಟ್ಟಿ
ಹೊಸದಿಲ್ಲಿ: ಭಾರತದ ಆಯುಷ್ ಶೆಟ್ಟಿ ವರ್ಷದ ಮೊದಲ ಬ್ಯಾಡ್ಮಿಂಟನ್ ಟೂರ್ನಿಯಾಗಿರುವ ಮಲೇಷ್ಯ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ, ವಿಶ್ವದ ಮಾಜಿ 2ನೇ ರಾಂಕ್ ಆಟಗಾರ ಮಲೇಷ್ಯಾದ ಲೀ ಝೀ ಜಿಯಾ ಅವರಿಗೆ ಸೋಲಿನ ಆಘಾತ ನೀಡಿದ್ದಾರೆ. India’s Ayush Shetty upset local favourite and Paris 2024 Olympics bronze medal winner Lee Zii Jia in the opening round of the Malaysia Open Badminton..
ಉಡುಪಿ ಜಿಲ್ಲೆಯ ಕಾರ್ಕಳದವರಾದ ಆಯುಷ್ ಶೆಟ್ಟಿ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಲೀ ಝೀ ಜಿಯಾ ಅವರನ್ನು 21-12, 21-17 ಅಂತರದಲ್ಲಿ ಮಣಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ಕಳೆದ ವರ್ಷ ಚೈನಾ ಮಾಸ್ಟರ್ಸ್‌ನಲ್ಲಿ ಗಾಯಗೊಂಡು ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಲೀ ವಿರುದ್ಧ ಆಯುಷ್ ಆಡುತ್ತಿರುವುದು ಇದೇ ಮೊದಲು. ಕಳೆದ ವರ್ಷ ಯುಎಸ್ ಓಪನ್ ಚಾಂಪಿಯನ್ ಪಟ್ಟ ಗೆದ್ದಿರುವ ಆಯುಷ್ ಶೆಟ್ಟಿ, ಮಾಜಿ ವಿಶ್ವ ಚಾಂಪಿಯನ್ ಲೊಹ್ ಕೇನ್ ಯಿವ್‌ಗೆ ಹೈಲೋ ಓಪನ್‌ನಲ್ಲಿ ಆಚ್ಚರಿಯ ಆಘಾತ ನೀಡಿದ್ದರು. ಮುಂದಿನ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ಟಾಪ್ ಸೀಡ್ ಆಟಗಾರ ಶಿ ಯು ಕ್ವಿ ವಿರುದ್ಧ ಸೆಣಲಿದ್ದಾರೆ.

