Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಭಾರತ ವಿರುದ್ಧ ಸೋಲು: ಪಾಕ್‌ ಆಟಗಾರರಿಗೆ ತಲಾ 16.5 ಲಕ್ಷ ದಂಡ!

ಕರಾಚಿ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಸೆಮಿಫೈನಲ್‌ ತಲಪುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ಪತಿಯೊಬ್ಬ ಆಟಗಾರರು ತಲಾ 18,000 ಡಾಲರ್‌ (ರೂ. 16,50,408) ದಂಡ ತೆರುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆದೇಶಿಸಿದೆ ಎಂದು ಕ್ರಿಕ್‌ಇನ್ಫೋ ವರದಿ ಮಾಡಿದೆ.

All of Pakistan‘s squad members from the T20 World Cup have been fined PKR 5 million (US$ 18,000 approx.) each by the PCB following their underwhelming campaign.

ಭಾರತ ವಿರುದ್ಧದ ಲೀಗ್‌ ಹಂತದಲ್ಲಿ ಸೋತಾಗಲೇ ಪಿಸಿಬಿ ಈ ದಂಡ ವಿಧಿಸಿತ್ತು.  ಆದರೆ ಮುಂದಿನ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ ತಲುಪಿದರೆ ಈ ದಂಡವನ್ನು ಮನ್ನ ಮಾಡುವುದಾಗಿ ತಿಳಿಸಿತ್ತು. ಆದರೆ ಪಾಕ್‌ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆತ್ಯಂತ ಕಳಪೆ ಪ್ರದರ್ಶನ ತೋರಿ ಸೆಮಿಫೈನಲ್‌ ಪ್ರವೇಶಿಸುವಲ್ಲಿ ವಿಫಲವಾಯಿತು.

ಸೂಪರ್‌ 8 ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ರನ್‌ ಅಂತರದಲ್ಲಿ ಜಯ ಗಳಿಸಿದರೂ ಸೆಮಿಫೈನಲ್‌ ತಲುಪಿದ್ದು ನ್ಯೂಜಿಲೆಂಡ್‌. ಈ ರೀತಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ತಂಡದ ಎಲ್ಲ ಆಟಗಾರರಿಗೆ ದಂಡ ವಿಧಿಸಿದ್ದು ಇದೇ ಮೊದಲು.


administrator