Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪಾಕಿಸ್ತಾನದ ಪಂದ್ಯಕ್ಕೆ ಬಳಸಿದ ಪಿಚ್‌: ಪಾಕ್‌ ಆರೋಪ

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಉದ್ದೇಶಪೂರ್ವಕವಾಗಿ ಪಾಕ್‌ ತಂಡಕ್ಕೆ ಬಳಸಿದ ಪಿಚ್‌ ನೀಡುತ್ತಿದೆ Board of Control for Cricket in India are intentionally giving used pitches to Pakistan ಎಂದು ಮಾಜಿ ಆಟಗಾರ ಮೊಹಮ್ಮದ್‌ ಹಫೀಜ್‌ ಆರೋಪಿಸಿದ್ದಾರೆ.ಚೆನ್ನೈನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳಿಗೆ ನೀಡಿದ ಪಿಚ್‌ ಪುನಃ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಪಂದ್ಯಕ್ಕೆ ನೀಡಲಾಗಿದೆ.

“ಕೆಲವೊಂದು ಉದ್ದೇಶಗಳಿಗಾಗಿ ಪಾಕಿಸ್ತಾನದ ಪಂದ್ಯಗಳಿಗೆ ಬಳಸಿದ ಪಿಚ್‌ ನೀಡಲಾಗುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಬಳಸಲಾದ ಪಿಚ್‌ ಅನ್ನು ಪುನಃ ಪಾಕಿಸ್ತಾನದ ಪಂದ್ಯಕ್ಕೆ ಬಳಸಲಾಗಿದೆ. ಅದನ್ನು ಇತರ ಪಂದ್ಯಗಳಿಗೆ ಬಳಸದೆ ಪಾಕಿಸ್ತಾನದ ಪಂದ್ಯಕ್ಕೆ ಪುನಃ ಬಳಸಲಾಗಿದೆ,” ಎಂದು ಹಫೀಜ್‌ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ತಂಡ ಸೆಮಿಫೈನಲ್‌ಗೆ ಪ್ರವೇಶ ಮಾಡುವುದನ್ನು ಭಾರತ ಪರೋಕ್ಷವಾಗಿ ತಡೆಯುತ್ತಿದೆ ಎಂಬುದು ಅವರ ಹೇಳಿಕೆಯ ಉದ್ದೇಶವಾಗಿದೆ. ಆದರೆ ಪಿಚ್‌ನಲ್ಲಿ ಎರಡೂ ತಂಡಗಳು ಆಡುತ್ತವೆ ಎಂಬುದು ಹಫೀಜ್‌ಗೆ ಗೊತ್ತಿರಲೇ ಬೇಕು.


administrator