Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಫ್ರೆಂಡ್ಸ್‌ ಮಧ್ಯಕೇರಿ ಪ್ರೋ ಕಬಡ್ಡಿ ರಾಜ್ಯ ಮಟ್ಟದ ಡಿಜಿ ಟ್ರೋಫಿ

ಕುಂದಾಫುರ: ಕಬಡ್ಡಿ ಸೇರಿದಂತೆ ಇತರ ಕ್ರೀಡೆಗಳಿಗೆ ಕಳೆದ 50 ವರ್ಷಗಳಿಂದ ಪ್ರೋತ್ಸಾಹ ನೀಡುತ್ತ,  ಪ್ರತಿ ವರ್ಷ ಕಬಡ್ಡಿ ಟೂರ್ನಿಗಳನ್ನು ಆಯೋಜಿಸುತ್ತ ಬಂದಿರುವ ಇಲ್ಲಿನ ಖಾರ್ವಿ ಕೇರಿಯ ಹೆಸರಾಂತ ಫ್ರೆಂಡ್ಸ್‌ ಮಧ್ಯಕೇರಿ (ಡಿಜಿ) ಈ ವರ್ಷ ಸುವರ್ಣ ಸಂಭ್ರಮ ಆಚರಿಸುತ್ತಿದ್ದು, ಈ ಸವಿ ನೆನಪಿಗಾಗಿ ಇದೇ ನವೆಂಬರ್‌ 6 ಮತ್ತು 7 ರಂದು ಖಾರ್ವಿ ಕೇರಿಯಲ್ಲಿ ಅಖಿಲ ಕರ್ನಾಟಕ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗಾಗಿ ರಾಜ್ಯ ಮಟ್ಟದ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾಟ ಆಯೋಜಿಸಿದೆ. As part of the 50th anniversary celebrations of Friends Madhyakeri (D.G.), Kharvi Keri, Kundapura, a state-level Kabaddi tournament for the Kharvi community will be held on November 7 and 8

ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ಗೆ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಚಾಲನೆ ನೀಡುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿ ಕೇರಿ ಇದರ ಅಧ್ಯಕ್ಷರಾದ ಪ್ರಕಾಶ್‌ ಆರ್.‌ ಖಾರ್ವಿ ವಹಿಸುವರು.

ರಾಜ್ಯ ಮಟ್ಟದ ಕೊಂಕಣಿ ಖಾರ್ವಿ ವಿಭಾಗದಲ್ಲಿ ವಿಜೇತ ತಂಡಕ್ಕೆ 1,15,050 ರೂ. ಬಹುಮಾನ, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ 55,050 ರೂ. ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ವಿಜೇತ ತಂಡಕ್ಕೆ 30,050 ರೂ. ನಗದು ಬಹುಮಾನ, ಎರಡನೇ ಸ್ಥಾನ ಪಡೆದ ತಂಡಕ್ಕೆ 15,050 ರೂ. ಮೂರನೇ ಸ್ಥಾನ ಗಳಿಸಿದ ತಂಡಕ್ಕೆ 7050 ರೂ. ನಗದು ಬಹುಮಾನ ಹಾಗೂ ನಾಲ್ಕನೇ ಸ್ಥಾನ ಗಳಿಸಿದ ತಂಡಕ್ಕೆ 5,050 ರೂ. ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಹರಿರಾಂ ಶಂಕರ್‌ ಐಪಿಎಸ್‌, ಕಾಂಗ್ರೆಸ್‌ ಮುಖಂಡ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಬೆಂಗಳೂರಿನ ಉದ್ಯಮಿ ಎಂ ಬಾಲಾಜಿ, ಸ್ವರ್ಣ ಜ್ಯುವೆಲ್ಲರ್ಸ್‌ ಮಾಲೀಕರಾದ ಗುಜ್ಜಾಡಿ ದೀಪಕ್‌ ನಾಯಕ್‌, ನ್ಯೂ ಮೆಡಿಕಲ್‌ ಸೆಂಟರ್‌ನ ಡಾ. ರಂಜನ್‌ ಆರ್‌ ಶೆಟ್ಟಿ (ಎಂ.ಡಿ), ಡಾ. ಎ ಆದರ್ಶ್‌ ಹೆಬ್ಬಾರ್‌, ಮಂಗಳೂರಿನ ಖಾರ್ವಿ ಅಜೇಂಜರ್ಸ್‌ ನ ಎಂ.ಡಿ. ರಾಘವೇಂದ್ರ ಖಾರ್ವಿ, ಸಹನಾ ಗ್ರೂಪ್‌ ಆಫ್‌ ಹೋಟೆಲ್ಸ್‌ನ ಮಾಲೀಕರಾದ ಸುರೇಂದ್ರ ಶೆಟ್ಟಿ, ಕಿಯೋನಿಕ್ಸ್‌ ಕುಂದಾಪುರದ ಧೀರಜ್‌ ಹೆಜಮಾಡಿ, ಉದ್ಯಮಿ ಆನಂದ ಎಲ್‌. ಖಾರ್ವಿ, ಎಸ್‌.ಕೆ. ಎಫ್‌ ಭಟ್ಕಳದ ತಿಮ್ಮಪ್ಪ ಖಾರ್ವಿ, ಮ್ಯಾಕ್‌ ಟ್ರೇಡರ್ಸ್‌ನ ಮುಕ್ತಾರ್‌, ಮಂಜುನಾಥ ಆಸ್ಪತ್ರೆಯ ಪ್ರತಿಮಾ ಕುಲಾಲ್‌, ಒಕ್ವುಡ್‌ ಇಂಡಿಯನ್‌ ಸ್ಕೂಲ್‌ ಕುಂದಾಪುರ ಇದರ ಮ್ಯಾನೇಜಿಂಗ್‌ ಡೈರೆಕ್ಟರ್‌ ನೀತಾ ಅಭಿನಂದನ್‌ ಶೆಟ್ಟಿ, ಫ್ರೆಂಡ್ಸ್‌ ಮಧ್ಯಕೇರಿ (ಡಿ,ಜಿ.) ಕುಂದಾಪುರ ಇದರ ಅಧ್ಯಕ್ಷರಅದ ಗುರುಪ್ರಸಾದ್‌ ಖಾರ್ವಿ ಅವರು ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರನ್ನು ಸನ್ಮಾನಿಸಲಾಗುವುದು. ರವಿ ಕಟಪಾಡಿ, ಆನಂದ ಪೂಜಾರಿ, ಸುದೀಪ್‌ ಶೆಟ್ಟಿ, ಶಿಲ್ಪಾ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ನವೆಂಬರ್‌ 7 ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ವಕೀಲರಾದ ರಾಘವೇಂದ್ರ ಗೌಡ ವಹಿಸುವರು. ಮುಖ್ಯ ಅತಿಥಿಗಳಾಗಿ ಸಿಲ್ವರ್‌ ಬಾಕ್ಸ್‌ ಬೆಂಗಳೂರು ಇದರ ಮಾಲೀಕರಾದ ಮುನಿ ನಾರಾಯಣ, ಆಸೋಡು ಗ್ಲೋಬಲ್‌ ಹೆಲ್ತ್‌ ಕೇರ್‌ನ ಶಿವಾನಂದ ಹೆಗ್ಡೆ, 9 ಪ್ಲಾನೆಟ್‌ ರೆಸಾರ್ಟ್‌ನ ಮಾಲೀಕರಾ ದಿನಕರ್‌ ಪಟೇಲ್‌, ಗೌರಿ ಶಂಕರ್‌ ಚಾರಿಟೇಬಲ್‌ ಟ್ರಸ್ಟ್‌ನ ಟ್ರಸ್ಟಿ ನಾಗರಾಜ್‌ ಖಾರ್ವಿ, ದುಬೈನ ಜೀವನ್‌ ಪೂಜಾರಿ, ಉದ್ಯಮಿ ಪ್ರಶಾಂತ್‌ ಮುರ್ಡೇಶ್ವರ, ಕರವೇ ಕುಂದಾಪುರದ ಅಧ್ಯಕ್ಷ ಶಿವ ಆರ್‌ ಪೂಜಾರಿ, ವಕೀಲರಾ ಪಿ ಜಯಚಂದ್ರ ಶೆಟ್ಟಿ, ಕುಂದಾಪುರ ವಿದ್ಯಾರಂಗ ಮಿತ್ರಮಂಡಳಿಯ ಅಧ್ಯಕ್ಷರಾದ ಜಯಾನಂದ ಖಾರ್ವಿ, ಎಸ್‌.ಎನ್‌ ಚಂದ್ರಶೇಖರ್‌ ಖಾರ್ವಿ, ಸರಕಾರಿ ಕಾಲೇಜು ಕೋಟೇಶ್ವರ ಇಲ್ಲಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಪಾಟ್ಕರ್‌, ಉದ್ಯಮಿ ವಿಶಾಲ್‌ ವಿ., ಫ್ರೆಂಡ್ಸ್‌ ಮಧ್ಯಕೇರಿಯ ಗೌರವಾಧ್ಯಕ್ಷರಾದ ರವೀಂದ್ರ ಖಾರ್ವಿ, ಶ್ರೀ ಸಾಯಿ ಸ್ಪಂದನಾ ಫೌಂಡೇಷನ್‌ನ ಸಂಸ್ಥಾಪಕರಾದ ಗುರುಪ್ರಸಾದ್‌ ಎಸ್‌. ಖಾರ್ವಿ, ಫ್ರೆಂಡ್ಸ್‌ ಮಧ್ಯಕೇರಿ (ಡಿಜಿ) ಇದರ ಉಪಾಧ್ಯಕ್ಷರಾದ ರಾಘವೇಂದ್ರ ಖಾರ್ವಿ ಮೊದಲಾದ ಗಣ್ಯರು ಪಾಲ್ಗೊಳ್ಳವರು.


administrator