Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

52 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಮೊದಲ ಗೋಲು, ಮೊದಲ ಅಂಕ

ಹಾಸ್ಟನ್‌: ಫುಟ್ಬಾಲ್‌ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ನಾಯಕತ್ವದ ಪೋರ್ಚುಗಲ್‌ ತಂಡದ ವಿರುದ್ಧ 1-1 ಗೋಲುಗಳಿಂದ ಸಮಬಲ ಸಾಧಿಸಿದ ಕಾಂಗೋ ವಿಶ್ವಕಪ್‌ ಇತಿಹಾಸದಲ್ಲೇ 52 ವರ್ಷಗಳ ನಂತರ ಮೊದಲ ಗೋಲು ಹಾಗೂ ಮೊದಲ ಅಂಕ ಗಳಿಸಿದೆ. FIFA world cup Wissa earns Congo DR historic point against Portugal

K ಗುಂಪಿನ ಲೀಗ್‌  ಹಂತದ ಪಂದ್ಯದಲ್ಲಿ ಪೋರ್ಚುಗಲ್ ಪರ ಜೋವೊ ನೆವೇಶ್ 6ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಡಿಆರ್ ಕಾಂಗೋ ಪರ ಯೋಯಾನೆ ವಿಸ್ಸಾ ಮೊದಲಾರ್ಧದ ಹೆಚ್ಚುವರಿ ಸಮಯದ ಐದನೇ ನಿಮಿಷದಲ್ಲಿ (45+5) ಸಮಬಲದ ಗೋಲು ದಾಖಲಿಸಿದರು.

ಈ ಗೋಲಿನೊಂದಿಗೆ ಡಿಆರ್ ಕಾಂಗೋ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಮೊದಲ ಗೋಲು ಮತ್ತು ಮೊದಲ ಅಂಕವನ್ನು ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿತು.

ಈ ಪಂದ್ಯ ಮತ್ತೊಂದು ವಿಶೇಷ ಕ್ಷಣಕ್ಕೂ ಸಾಕ್ಷಿಯಾಯಿತು. ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಪಂದ್ಯವನ್ನು ಆರಂಭಿಸಿದ ಅತ್ಯಂತ ಹಿರಿಯ  ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಇದು ರೊನಾಲ್ಡೊ ಅವರ 23ನೇ ವಿಶ್ವಕಪ್ ಪಂದ್ಯವಾಗಿದ್ದು, ಇಟಲಿಯ ದಿಗ್ಗಜ ಪೌಲೊ ಮಾಲ್ದಿನಿ ಅವರ ದಾಖಲೆಯನ್ನು ಸರಿಗಟ್ಟಿದರು.

ಪಂದ್ಯದ ಕೇವಲ ಆರನೇ ನಿಮಿಷದಲ್ಲೇ ಪೆಡ್ರೊ ನೆಟೊ ನೀಡಿದ ಅದ್ಭುತ ಕ್ರಾಸ್ ಅನ್ನು ಜೋವೊ ನೆವೇಶ್ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿ ಪೋರ್ಚುಗಲ್‌ಗೆ ಮುನ್ನಡೆ ತಂದುಕೊಟ್ಟರು.

ಆರಂಭಿಕ ಕ್ಷಣಗಳಲ್ಲಿ ಪೋರ್ಚುಗಲ್ ಮೇಲುಗೈ ಸಾಧಿಸಿದರೂ, ಡಿಆರ್ ಕಾಂಗೋ ಕ್ರಮೇಣ ಆಟಕ್ಕೆ ಮರಳಿತು. 10ನೇ ನಿಮಿಷದಲ್ಲಿ ವಿಸ್ಸಾ ಎಡ ಕಾಲಿನ ಶಾಟ್ ಮೂಲಕ ಗೋಲು ಪ್ರಯತ್ನಿಸಿದರೂ ಅದು ಸ್ವಲ್ಪ ಅಂತರದಿಂದ ಗುರಿ ತಪ್ಪಿತು.

ಮೊದಲಾರ್ಧದ ಅಂತಿಮ ಕ್ಷಣಗಳಲ್ಲಿ ಆರ್ಥರ್ ಮಸುಆಕು ನೀಡಿದ ಕ್ರಾಸ್ ಅನ್ನು ಯೋಯಾನೆ ವಿಸ್ಸಾ ಶಕ್ತಿಯುತ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿ ಸಮಬಲ ಸಾಧಿಸಿದರು. 1974ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ 52 ವರ್ಷಗಳ ನಂತರ ಡಿಆರ್ ಕಾಂಗೋ ತನ್ನ ಮೊದಲ ವಿಶ್ವಕಪ್ ಗೋಲನ್ನು ದಾಖಲಿಸಿತು.


administrator