Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೆಂಗಳೂರಿನಲ್ಲಿ Yonex-Sunrise ಅಖಿಲ ಭಾರತ ಬ್ಯಾಡ್ಮಿಂಟನ್‌

ಬೆಂಗಳೂರು: ಜನವರಿ 31 ರಿಂದ ಫೆಬ್ರವರಿ 7 ರವರೆಗೆ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ನಲ್ಲಿ  Yonex-Sunrise ಅಖಿಲ ಭಾರತ ಹಿರಿಯರ ರಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ ನಡೆಯಲಿದೆ. Yonex-Sunrise All India Senior Ranking Badminton Tournament–from 31st January 2026   to 7th February 2026 at KBA Bangalore

ಪ್ರಸಕ್ತ ಸಾಲಿನ ಮೊದಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಇದಾಗಿದ್ದು, ಮಹಿಳಾ ಹಾಗೂ ಪುರುಷರ ವಿಭಾಗಲ್ಲಿ ಸುಮಾರು 1700ಕ್ಕೂ ಹೆಚ್ಚ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಪುರುಷರ ಸಿಂಗಲ್ಸ್‌, ವನಿತೆಯರ ಸಿಂಗಲ್ಸ್‌, ಪುರುಷರ ಡಬಲ್ಸ್‌ ಹಾಗೂ ವನಿತೆಯ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ಸೇರಿದಂತೆ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಂಡಿದ್ದರಿಂದ ಅರ್ಹತಾ ಸುತ್ತಿನ ಪಂದ್ಯಗಳನ್ನು ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಫೆಬ್ರವರಿ 4 ರಿಂದ ಕೆಬಿಎ ಕೋರ್ಟ್‌ನಲ್ಲಿ ಪ್ರಧಾನ ಸುತ್ತಿನ ಪಂದ್ಯಗಳು ನಡೆಯಲಿವೆ.

ಒಲಿಂಪಿಯನ್‌ ಅಶ್ವಿನಿ ಪೊನ್ನಪ್ಪ. ತನ್ವಿ ಪಾತ್ರಿ, ರುಜುಲಾ ರಾಮು ಮಹಿಳಾ ವಿಭಾಗದಲ್ಲಿ ಹಾಗೂ ಎಂ. ರಘು, ಸನೀತ್‌ ಡಿ ಎಸ್‌. ಭರತ್‌ ರಾಘವ್‌  ಅವರು ಪುರುಷರ ವಿಭಾಗದಲ್ಲಿ ಸ್ಪರ್ಧಿಸಲಿರುವ ಪ್ರಮುಖ ಆಟಗಾರರು.


administrator