Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬಂಗಾರಮಕ್ಕಿ ವೀರಾಂಜನೇಯನಿಗೆ ಬ್ಯಾಟ್‌ ಉಡುಗೊರೆ ನೀಡಿದ ಕೊಹ್ಲಿ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಬಂಗಾರಮಕ್ಕಿ ವೀರಾಂಜನೆಯ ದೇವಸ್ಥಾನಕ್ಕೆ ಕ್ರಿಕೆಟ್‌ ಜಗತ್ತಿನ ಶ್ರೇಷ್ಠ ಆಟಗಾರ ವಿರಾಟ್‌ ಕೊಹ್ಲಿ ಅವರು ಬ್ಯಾಟ್‌ ಉಡುಗೊರೆಯಾಗಿ ನೀಡಿದ್ದಾರೆ. Cricket legend Virat Kohli has gifted a bat to the Sri Bangaramakki Veeranjaneya Temple Honnavara Taluk, Uttara Kannada District.

ಭಾರತ ಕ್ರಿಕೆಟ್‌ ತಂಡದ ಕೋಚಿಂಗ್‌ ಸಹಾಯಕ ಸಿಬ್ಬಂದಿ, ಥ್ರೋ ಡೌನ್‌ ಸ್ಪೆಷಲಿಸ್ಟ್‌ ರಾಘವೇಂದ್ರ ಅವರು ಇತ್ತೀಚಿಗೆ ದೇವಾಲಯಕ್ಕೆ ಆಗಮಿಸಿ ಸ್ವಾಮೀಜಿ ಮಾರುತಿ ಗುರೂಜಿ ಅವರಿಗೆ ಆ ಉಡುಗೊರೆಯ ಬ್ಯಾಟನ್ನು ಹಸ್ತಾಂತರಿಸಿದ್ದಾರೆ.

ಬ್ಯಾಟಿನಲ್ಲಿ ಶ್ರೀ ಬಂಗಾರಮಕ್ಕಿ ವೀರಾಂಜನೇಯ ಟೆಂಪಲ್‌, ಜೈ ಶ್ರೀರಾಮ ಮತ್ತು ಓಂ ಎಂದು ಬರೆಯಲಾಗಿತ್ತು. ಬ್ಯಾಟಿನಲ್ಲಿ ವಿರಾಟ್‌ ಕೊಹ್ಲಿ ಅವರ ಸಹಿಯೂ ಇದೆ.


administrator