Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವೀಲ್‌ ಚೇರ್‌ ಟೆನಿಸ್‌: ಭಾರತ ತಂಡದಲ್ಲಿ ಕರ್ನಾಟಕದ ಐವರಿಗೆ ಸ್ಥಾನ

ಬೆಂಗಳೂರು: 2026 ಬಿಎನ್‌ಪಿ ಪಾರಿಬಸ್‌ ವಿಶ್ವ ಟೀಮ್‌ ಕಪ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಕರ್ನಾಟಕದ ಐವರು ಆಟಗಾರರು ಸ್ಥಾನ ಪಡೆದಿದ್ದಾರೆ. Five Karnataka players in Indian Wheelchair Tennis Team for 2026 BNP Paribas World Team Cup Asia Qualifier

2026 BNP Paribas World Team Cup Asia ಅರ್ಹತಾ ಸುತ್ತಿನ ಪಂದ್ಯಗಳು ಮಾರ್ಚ್‌ 2 ರಿಂದ 6 ವರೆಗೆ ಕೋಲಂಬೋದಲ್ಲಿ ನಡೆಯಲಿದೆ. ಭಾರತದ ತಂಡದಲ್ಲಿರುವ ಕರ್ನಾಟಕದ ಆಟಗಾರರಲ್ಲಿ ಅನುಭವಿ ಆಟಗಾರ, ಅಂತಾರಾಷ್ಟ್ರೀಯ ಖ್ಯಾತಿಯ ಶೇಖರ್‌ ವೀರಸ್ವಾಮಿ, ಬಸವರಾಜ್‌ ಕುಂದರಗಿ, ಇವರೊಂದಿಗೆ ತಮಿಳುನಾಡಿನ ಕಾರ್ತಿಕ್‌ ಕರುಣಾಕರನ್‌ ಕೂಡ ಸೇರಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಶಿಲ್ಪಾ ಕೆ.ಪಿ, ಪ್ರತಿಮಾ ರಾವ್‌ ಮತ್ತು ಮುಬೀನಾ ಕೋಲ್ಕರ್‌ ಸೇರಿದ್ದಾರೆ.ಕೊಲಂಬೋದಲ್ಲಿ ನಡೆಯಲಿರುವ ಏಷ್ಯಾ ಅರ್ಹತಾ ಸುತ್ತಿನ ಪಂದ್ಯಗಳು ಆವೆ ಮಣ್ಣಿನ ಅಂಗಣದಲ್ಲಿ ನಡೆಯಲಿವೆ. ಇಲ್ಲಿ ಗೆಲ್ಲುವ ತಂಡವು ಅಂತಾಲ್ಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿದೆ. ಭಾರತ ತಂಡಕ್ಕೆ ಪೀಟರ್‌ ವಿಜಯ ಕುಮಾರ್‌ ಅವರು ತರಬೇತಿ ನೀಡುತ್ತಿದ್ದಾರೆ.


administrator