ಇಂಡಿಯಾ ಓಪನ್: ಕ್ವಾರ್ಟರ್ ಫೈನಲ್ ತಲುಪಿದ ಲಕ್ಷ್ಯ ಸೇನ್
ಹೊಸದಿಲ್ಲಿ: ಜಪಾನಿನ ಕೆಂಟಾ ನಿಶಿಮೊಟೊ ವಿರುದ್ಧ ಜಯ ಗಳಿಸಿದ ಮಾಜಿ ಚಾಂಪಿಯನ್ ಭಾರತದ ಲಕ್ಷ್ಯ ಸೇನ್ ಯೊನೆಕ್ಸ್-ಸನ್ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. Former champion Lakshya Sen relied on his strong defence and injection of pace to defeat Japan’s Kenta Nishimoto.
ನಿಶಿಮೊಟೊ ವಿರುದ್ಧ 21-9, 21-11 ಅಂತರದಲ್ಲಿ ಜಯಿಸಿದ ಲಕ್ಷ್ಯ ಸೇನ್ ಮತ್ತೊಂದು ಪ್ರಶಸ್ತಿಯ ಸಮೀಪಕ್ಕೆ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಭಾರತ ಕಿದಂಬಿ ಶ್ರೀಕಾಂತ್ 21-14, 17-21, 21-17 ಅಂತರದಲ್ಲಿ ಫ್ರಾನ್ಸ್ನ ಕ್ರಿಸ್ಟೋ ಪೊಪೊವ್ ವಿರುದ್ಧ ಪರಾಭವಗೊಂಡು ನಿರ್ಗಮಿಸಿದ್ದಾರೆ. ಭಾರತದ ಎಸ್ ಎಸ್ ಪ್ರಣೋಯ್ ಉತ್ತಮ ರೀತಿಯಲ್ಲಿ ಪೈಟೋಟಿ ನೀಡಿ 18-21, 21-19, 21-14 ಅಂತರದಲ್ಲಿ ಸಿಂಗಾಪುರದ ಲೋಹ್ ಕೇನ್ ಯಿವ್ ವಿರುದ್ಧ ಪರಾಭವಗೊಂಡರು.
ಮಾಳವಿಕಾ ಬಾನ್ಸೋದ್ 21-18, 21-15 ಅಂತರದಲ್ಲಿ ಚೀನಾದ ಹಾನ್ ಯ್ಯುಯ್ ವಿರುದ್ಧ ಸೋಲನುಭವಿಸುವದರೊಂದಿಗೆ ವನಿತೆಯರ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

