ವಿಜಯ ಹಜಾರೆ ಟ್ರೋಫಿ: ಮೊಖಾಡೆ ಆಟಕ್ಕೆ ಮಕಾಡೆಯಾದ ಕರ್ನಾಟಕ
ಬೆಂಗಳೂರು: ಅಮನ್ ಮೊಖಾಡೆ ಅವರ ಆಕರ್ಷಕ ಶತಕ (138) ಹಾಗೂ ಕನ್ನಡಿಗ ರವಿಕುಮಾರ್ ಸಮರ್ಥ ಅವರ ಜವಾಬ್ದಾರಿಯುತ ಅಜೇಯ ಅರ್ಧ ಶತಕ (76) ನೆರವಿನಿಂದ ವಿದರ್ಭ ತಂಡ ಕರ್ನಾಟಕ ವಿರುದ್ಧದ ವಿಜಯ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ 6 ವಿಕೆಟ್ ಜಯ ಗಳಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. Aman Mokhade hits fifth century as Vidarbha reached final of Vijaya Hazare Trophy
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಕೊಂಡ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ಎಲ್ಲ ಪಂದ್ಯಗಳಲ್ಲೂ ಮಿಂಚಿದ ದೇವತ್ತ ಪಡಿಕ್ಕಲ್ ಸೆಮಿಫೈನಲ್ ಪಂದ್ಯದಲ್ಲಿ ಎಡವಿದ್ದು ಕರ್ನಾಟಕದ ಪಾಲಿಗೆ ನುಂಗಲಾರದ ತುತ್ತಾಯಿತು. ನಾಯಕ ಮಯಾಂಕ್ ಅಗರ್ವಾಲ್ ಕೂಡ ಜವಾಬ್ದಾರಿಯುತ ಆಟ ಆಡುವಲ್ಲಿ ವಿಫಲರಾದರು. ವಿದರ್ಭದ ಬೌಲಿಂಗ್ ದಾಳಿಯನ್ನು ಚೆನ್ನಾಗಿ ಬಲ್ಲ ಕರುಣ್ ನಾಯರ್ 76 ರನ್ ಗಳಿಸಿ ತಂಡಕ್ಕೆ ನೆರವಾದರು. ಕಳೆದ ಋತುವಿನಲ್ಲಿ ಕರುಣ್ ವಿದರ್ಭ ಪರ ಆಡಿದ್ದರು. ಈ ಬಾರಿ ಆರ್ ಸಮರ್ಥ್ ವಿದರ್ಭ ಪರ ಆಡುತ್ತಿದ್ದಾರೆ. ವಿಶೇಷವೆಂದರೆ ಸಮರ್ಥ್ ಕೂಡ 76 ರನ್ ಗಳಿಸಿ ನಾಔಟ್ ಆಗಿದ್ದಾರೆ, ಕರ್ನಾಟಕದ ಪರ ಕೃಷ್ಣನ್ ಶ್ರೀಜಿತ್ 54 ರನ್ ಗಳಿಸುವದರೊಂದಿಗೆ ತಂಡ 49.4 ಓವರ್‌ಗಳಲ್ಲಿ 280 ರನ್‌ಗೆ ಆಲೌಟ್ ಆಯಿತು.
281 ರನ್‌ಗಳ ಸಾಧಾರಣ ಮೊತ್ತವನ್ನು ಬೆಂಬತ್ತಿದ ವಿದರ್ಭದ ಪರ 138 ರನ್ ಗಳಿಸುವುದರೊಂದಿಗೆ ತಂಡ 46.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿತು. ಮೊಖಾಡೆ 122 ಎಸೆತಗಳನ್ನೆದುರಿಸಿ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಮೂಲ್ಯ 138 ರನ್ ಗಳಿಸಿ ಅಂತಿಮವಾಗಿ ವಿದ್ಯಾಧರ ಪಾಟಿಲ್‌ಗೆ ವಿಕೆಟ್ ಒಪ್ಪಿಸಿದರು.

