Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

SORRY KOM ನೀವು ಬದುಕಿನ ಚಾಂಪಿಯನ್‌ ಅಲ್ಲ!!!

ಬೆಂಗಳೂರು: ಆರು ಬಾರಿ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿ ವಿಜೇತೆ, ಈ ಕ್ರೀಡಾ ಜಗತ್ತು ಕಂಡ ಶ್ರೇಷ್ಠ ಕ್ರೀಡಾಪಟು ಮೇರಿ ಕೋಮ್‌ ಬಗ್ಗೆ ಪತ್ರಕರ್ತೆ ದಿನಾ ಸೆರ್ತೋ ಬರೆದ ಆತ್ಮಕಥನ “Unbreakable,” ಸಾಹಸ ಪ್ರವೃತ್ತಿಯವರಿಗೆ ಸ್ಫೂರ್ತಿ, ಕಷ್ಟದಲ್ಲಿ ಬದುಕುವವರಿಗೆ ಮಾದರಿ, ಮುಂದಿನ ಪೀಳಿಗೆಗೆ ಆದರ್ಶವಿದ್ದಂತೆ. ಆಕೆ ಪದಕ ಗೆದ್ದಾಗಲೆಲ್ಲ “ಮೇರಿ ಭಾರತ್‌ ಮಹಾನ್‌” ಎಂದು ಶಿರೋನಾಮೆಯನ್ನು ಕೊಟ್ಟು ಸಂಭ್ರಮಿಸಿದವರಲ್ಲಿ ನಾನೂ ಒಬ್ಬ. ಆದರೆ ಹಣ, ಅಧಿಕಾರ, ಅಂತಸ್ತು ಮನುಷ್ಯನ್ನು ಯಾವ ರೀತಿ ಬದಲಾಯಿಸುತ್ತದೆ ಎಂಬುದಕ್ಕೆ ಮೇರಿ ಕೋಮ್‌ ಉತ್ತಮ ಉದಾಹರಣೆ ಅನ್ನದೆ ಬೇರೆ ದಾರಿ ಇಲ್ಲ. Why did Mary Kom lose in the ring of life even though she was a champion in the boxing ring?

ಮೇರಿ ಕೋಮ್‌ ಅವರ ಪತಿ ಕರೋಂಗ್‌ ಓಲ್ನರ್‌ ಕೋಮ್‌. 2023ರಲ್ಲೇ ಇವರ ನಡುವೆ ವಿಚ್ಛೇಧನವಾಗಿತ್ತು. ಅದು ಅವರ ವೈಯಕ್ತಿಕ ವಿಚಾರ. ಆದರೆ ಮೇರಿ ಕೋಮ್‌ ಎಂಬ ಚಾಂಪಿಯನ್‌ ಬಾಕ್ಸರ್‌ ಸಜ್ಜಾಗುವಲ್ಲಿ ಕೋಚ್‌ ಓಲ್ನರ್‌ ಪಾತ್ರ ಪ್ರಮುಖವಾಗಿತ್ತು. ಈಗ ಮೇರಿ ಕೋಮ್‌ ಅವರಲ್ಲಿ ಹಣವಿದೆ, ಅಧಿಕಾರವಿದೆ ಮಾತ್ರವಲ್ಲ ಜಗತ್ತು ಅವರ ಮಾತನ್ನೇ ನಂಬುತ್ತದೆ.

“ಪತಿ ಓಲ್ನರ್‌ ತನ್ನ ಹಣ ಮತ್ತು ಆಸ್ತಿಯನ್ನು ಲಪಟಾಯಿಸಿದ, ತನ್ನ ಹೆಸರಿಗೆ ಮಾಡಿಕೊಂಡ” ಎಂಬ ಆರೋಪದ ಮೇಲೆ ಮೇರಿ ಕೋಮ್‌ ವಿವಾಹ ವಿಚ್ಛೇಧನ ನೀಡಿದ್ದಾರೆ. ಇದು ಅವರ ವೈಯಕ್ತಿಕ ನಿಲುವು. ಆದರೆ ಕ್ರೀಡಾ ಕೂಠಗಳು ನಡೆಯುವಾಗ ನಾವು ಗ್ಯಾಲರಿಯಲ್ಲಿ ಕ್ರೀಡಾಪಟುಗಳ ಅಮ್ಮ, ಅಪ್ಪ, ಅಣ್ಣ, ಅಕ್ಕ, ತಂಗಿ, ಗಂಡ, ಹೆಂಡತಿ ಕೆಲವೊಮ್ಮೆ ಗೆಳೆಯ & ಗೆಳತಿ ಸಹಾಯ ನೀಡುವುದನ್ನು ನೋಡುತ್ತಿರುತ್ತೇವೆ. ನಾಳೆಯ ದಿನ ಚಾಂಪಿಯನ್‌ ಆದ ಮೇಲೆ “ನನ್ನಪ್ಪ ಅಥವಾ ಅಮ್ಮ ನನಗೇನು ಮಾಡಿದ್ದಾರೆ? ಎಂದು ಕೇಳಿದರೆ ಎಷ್ಟು ನೋವಾಗದು?

ಮೇರಿ ಕೋಮ್‌ ಸಾಧನೆಗೆ ಹಣದ ಹೊಳೆಯೇ ಹರಿದು ಬಂತು. ರಾಜ್ಯಸಭಾ ಸದಸ್ಯತ್ವೂ ಸಿಕ್ಕಿತು. ಇವೆಲ್ಲ ಆಕೆಯ ಶ್ರಮದ ಫಲ ನಿಜ. ಆದರೆ ಈ ಶ್ರಮದ ಹಿಂದೆ ಒಬ್ಬ ನೈಜ ಫುಟ್ಬಾಲ್‌ ಆಟಗಾರನ ತ್ಯಾಗ ಇದೆ ಎಂಬುದನ್ನು ಮರೆಯುವಂತಿಲ್ಲ. ಆತ ಆಸ್ತಿ, ಹಣದಲ್ಲಿ ಮೋಸ ಮಾಡಿದರೂ ಅದರ ಪಾಲು ಮೇರಿ ಕೋಮ್‌ಗೇ ಸೇರಿದ್ದು. ಅಧಿಕಾರ, ಅಂತಸ್ತು ಬಂದಾಗ ಬದುಕು ಇನ್ನೇನನ್ನೋ ಬಯಸುತ್ತದೆ. ಆ ಇನ್ನೇನೋ ಎಂಬುದನ್ನು ಮೇರಿ ಕೋಮ್‌ ಕಂಡುಕೊಂಡಿದ್ದಾರೆ. ಈ ಓಲ್ನರ್‌ ಮಾಡಿರುವ ಆರೋದಲ್ಲಿ ಆ “ಇನ್ನೇನೋ” ಇದೆ.

ಪತಿ-ಪತ್ನಿಯ ನಡುವೆ ಸಂಶಯ ಹುಟ್ಟಿದಾಗ ಅದು ಅವನತಿಯ ಹಾದಿ ಹಿಡಿಯುತ್ತದೆ ಎಂಬುದಕ್ಕೆ ಮೇರಿ ಕೋಮ್‌ ಹಾಗೂ ಓಲ್ನರ್‌ ಅವರ ಬದುಕು ಉತ್ತಮ ಉದಾಹರಣೆ, ಓಲ್ನರ್‌ ಇತ್ತೀಚಿಗೆ ಮಾಡಿರುವ ಆರೋಪದಲ್ಲಿ ಮೇರಿ ಕೋಮ್‌ ಅವರು ಬೇರೆಡೆ ಸಂಬಂಧ ಹೋಂದಿರುವ ಮಾತು ಕೇಳಿ ಬಂದಿದೆ. ಅನ್ನ ಮದ, ಅರ್ಥ ಮದ, ಅಖಿಲ ವೈಭವದ ಮದ, ರೂಪ ಮದ, ಪ್ರಾಯದ ಮದ ಇವೆಲ್ಲವೂ ಮೇರಿ ಕೋಮ್‌ ಅವರನ್ನು ಆವರಿಸಿದೆ. ಒಬ್ಬ ಕ್ರೀಡಾಪಟುವಿಗೆ ಕ್ರೀಡೆ ಎಲ್ಲವನ್ನೂ ತಂದುಕೊಡುತ್ತದೆ, ಆದರೆ ತನ್ನ ಸಂಸಾರದೊಂದಿಗೆ ಬದುಕುವ ರೀತಿಯನ್ನು ಕಲಿಸಿಕೊಡದಿದ್ದರೆ, ಎಷ್ಟು ಪದಕ ಗೆದ್ದರೇನು? ಯಾವ ಅಧಿಕಾರ ಸಿಕ್ಕರೇನು?

ಖರ್ಚಿಗೆ ಹಣ ಇಲ್ಲದಾಗ ಓಲ್ನರ್‌ ಬೇಕಾಗಿತ್ತು. ಆಗ ಆತ ಶ್ರೀಮಂತನಾಗಿದ್ದ, ಜೊತೆಯಲ್ಲಿ ಪ್ರಯಾಣ ಮಾಡಲು ಧೈರ್ಯಕ್ಕೆ  ಒಬ್ಬರು ಬೇಕಾಗಿದ್ದರು, ಆಗ ಓಲ್ನರ್‌ ಜೊತೆಯಾದ. ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳುವಾಗ ಆತ್ಮವಿಶ್ವಾಸಕ್ಕೆ ಓಲ್ನರ್‌ ಬೇಕಾಗಿತ್ತು. ಆದರೆ ಈಗ ಬೇಕಾಗಿಲ್ಲ ಕಾರಣ … ನನ್ನ ಸ್ವಾಗತಕ್ಕೀಗ ಎಲ್ಲಡೆ ಜನರಿದ್ದಾರೆ.

ಮೇರಿ ಕೋಮ್‌ ಹಾಗೂ ಓಲ್ನರ್‌ಗೆ ಅವಳಿ ಮಕ್ಕಳು. ಮೇರಿ ಕೋಮ್‌ ತರಬೇತಿ ಹಾಗೂ ಟೂರ್ನಿಗೆ ಹೋದಾಗಲೆಲ್ಲ ಆ ಮಕ್ಕಳ ಆರೈಕೆ ಮಾಡುತ್ತಿರುವುದು ಓಲ್ನರ್‌. ತನ್ನ ಕ್ರೀಡಾ ಬದುಕನ್ನು ಬದಿಗೊತ್ತಿ ಪತ್ನಿಯನ್ನು ಜಗತ್ತಿನ ಶ್ರೇಷ್ಠ ಕ್ರೀಡಾಪಟುವನ್ನಾಗಿಸುವಲ್ಲಿ ಓಲ್ನರ್‌ ಅವರ ತ್ಯಾಗವನ್ನು ಮರೆಯುವಂತಿಲ್ಲ.

“ಆತ ನನ್ನ ನಂಬಿಕೆಯನ್ನೇ ಕದ್ದ” ಎಂದು ಮೇರಿ ಕೋಮ್‌ ಹೇಳುತ್ತಿದ್ದರೆ, ಓಲ್ನರ್‌, “ಆಕೆಗೆ ಬೇರೆಯವರೊಂದಿಗೆ ಸಂಬಂಧವಿದೆ” ಎಂದು ಆರೋಪಿಸಿದ್ದಾರೆ. 2013ರಲ್ಲಿ ಮೇರಿ ಕೋಮ್‌ ಜೂನಿಯರ್‌ ಬಾಕ್ಸರ್‌ ಜೊತೆ ಸಂಬಂಧ ಹೊಂದಿದ್ದರು ಎಂದು ಪತಿ ಆರೋಪಿಸಿದ್ದಾರೆ. ಸಂಸಾರದ ಹಿತದೃಷ್ಟಿಯಿಂದ ಅವೆಲ್ಲವನ್ನೂ ಮರೆತು ಮತ್ತೆ ಒಂದಾದೆವು.ಮತ್ತೆ 2017ರಿಂದ ಮೇರಿ ಕೋಮ್‌ ಅಕಾಡೆಮಿಯಲ್ಲಿರುವ ವ್ಯಕ್ತಿಯೊಂದಿಗೆ ಆಕೆ ಸಂಬಂಧಹೊಂದಿದ್ದಾಳೆ, ಆ ಬಗ್ಗೆ ನನ್ನಲ್ಲಿ ದಾಖಲೆಗಳಿಗೆ, ಇದರಿಂದಾಗಿ ಆಕೆ ಪ್ರತ್ಯೇಕವಾಗಿರಲು ಯತ್ನಿಸುತ್ತಿದ್ದಾಳೆ. ನಾನು ಹಣ ಕದ್ದಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಲಿ, ನನ್ನ ಬಳಿ ಆ ವ್ಯಕ್ತಿಯ ಹೆಸರು, ದೂರವಾಣಿ ಸಂಖ್ಯೆ ಎಲ್ಲವೂ ಇದೆ. ದಾಖಲೆಯೂ ಇದೆ, ಆಕೆ ಎಲ್ಲಿದ್ದಾಳೆ ಹಾಗೂ ಯಾರೊಂದಿಗೆ ವಾಸಿಸುತ್ತಿದ್ದಾಳೆ ಎಂಬುದೂ ನನಗೆ ಗೊತ್ತಿದೆ, ಎಂದು ಓಲ್ನರ್‌ ಹೇಳಿದ್ದಾರೆ.

ಹಿಂದೂಸ್ಥಾನ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಓಲ್ನರ್‌,” ನಾವು ಮೊದಲ ಬಾರಿಗೆ ಭೇಟಿಯಾದಾಗ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೆ. ಶಿಲಾಂಗ್‌ ಫುಟ್ಬಾಲ್‌ ತಂಡದ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದೆ. ಅವೆಲ್ಲವನ್ನೂ ಬಿಟ್ಟು ತನ್ನ ಬಾಕ್ಸಿಂಗ್‌ ಬದುಕಿಗೆ ನೆರವಾಗಲು ವಿನಂತಿಸಿಕೊಂಡಳು. ಆಕೆಯ ಬಾಕ್ಸಿಂಗ್‌ ಬದುಕಿಗೆ ನೆರವಾಗಲು ಇದಕ್ಕೆ ಒಪ್ಪಿದೆ, ಮಕ್ಕಳ ಆರೈಕೆ ಮಾಡಿದೆ, ಬೆಳೆಸಿದೆ,”.

“ನಾನು ಅವಳ ಚಾಲಕ, ಅವಳ ಬಾಣಸಿಗ, ನನ್ನ ಕುಟುಂಬಕ್ಕಾಗಿ ಎಂದು ಎಲ್ಲವನ್ನೂ ಮಾಡುತ್ತಿದ್ದೆ. ನಾನು ಅವಳ ಜೀತದ ಆಳಾಗಿ ಕೆಲಸ ಮಾಡಿದೆ,. ಇದೆಲ್ಲ ನನ್ನ ಕುಟುಂಬಕ್ಕಾಗಿ ಎಂದು ಎಣಿಸಿದ್ದೆ. ನ್ಯಾಯಾಲದಲ್ಲಿ ನಮ್ಮ ಭವಿಷ್ಯದ ತೀರ್ಮಾನ ಆಗಿದೆ, ಆದರೆ ಈ ರೀತಿಯಲ್ಲಿ ಅಗೌರವದಿಂದ ನೋಡಬಾರದು.

ಹಣ, ಅಂತಸ್ತು, ಬಿರುದು ಗಳಿಸುವ ದಾವಂತದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕೊನೆಯಲ್ಲಿ ಲೆಕ್ಕ ಹಾಕುವಾಗ, ಯಾರೊಂದಿಗೆ ಬದುಕಬೇಕೆ ಎಂಬ ತೀರ್ಮಾನ ಕೈಗೊಳ್ಳುವ ಸ್ಥಿತಿ ಬಂದಾಗ ನೈಜತೆಯ ಬೆಳಕು ಕಾಣುತ್ತದೆ. ಮನುಷ್ಯನ ಬದುಕೇ ಹೀಗೆ. ಇಲ್ಲಿ ಯಾರನ್ನು ಹೊಗಳಬೇಕು, ಯಾರನ್ನು ದೂರಬೇಕು ಎಂಬುದು ಮುಖ್ಯವಲ್ಲ, ಖರ್ಚಿಗೆ ಹಣ ಇಲ್ಲದ ಕ್ರೀಡಾಪಟು ಬದುಕಿನಲ್ಲಿ ಎಲ್ಲವನ್ನೂ ಗಳಿಸಿದ ಬಳಿಕ ತನಗೆ ಎಲ್ಲ ರೀತಿಯಲ್ಲಿ ನೆರವಾದ, ದೇಹವನ್ನು ತನು, ಮನವನ್ನುಹಂಚಿಕೊಂಡ ಚಾಂಪಿಯನ್‌ಗೆ ಧನ ಹಂಚಿಕೊಳ್ಳಲು ಮನಸ್ಸು ಯಾಕೆ ಬರಲಿಲ್ಲ? ಬಾಕ್ಸಿಂಗ್‌ ರಿಂಗ್‌ನಲ್ಲಿ ಗೆದ್ದ ಚಾಂಪಿಯನ್‌ ಮೇರಿ ಕೋಮ್‌ ಬದುಕಿನಲ್ಲಿ ಸೋತಿದ್ದೇಕೆ?


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.