ಇಂಡಿಯಾ ಓಪನ್: ಆತ್ಮವಿಶ್ವಾಸದಲ್ಲಿ ಕನ್ನಡಿಗ ಆಯುಷ್ ಶೆಟ್ಟಿ
ಹೊಸದಿಲ್ಲಿ: ಯೊನೆಕ್ಸ್ ಸನ್‌ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಭಾರತದ ಪ್ರಸಿದ್ಧ ಆಟಗಾರ ಲಕ್ಷ್ಯ ಸೇನ್ ಅವರನ್ನು ಎದುರಿಸಲು ಸಜ್ಜಾಗಿರುವ ಕನ್ನಡಿಗ ಆಯುಷ್ ಶೆಟ್ಟಿ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. Playing Lakshya in the first round is definitely a big challenge: Ayush Shetty
ಎಚ್‌ಎಸ್‌ಬಿಸಿ ವಿಶ್ವ ಟೂರ್ ಸೂಪರ್ 750 ಟೂರ್ನಿಗೆ ಸಜ್ಜಾಗುತ್ತಿರುವ ಉಡುಪಿ ಜಿಲ್ಲೆಯವರಾದ ಆಯುಷ್ ಶೆಟ್ಟಿಗೆ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ವಿಶೇಷವೆನಿಸಲಿದೆ. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಷ್ ಶೆಟ್ಟಿ, “ಮೊದಲ ಸುತ್ತಿನಲ್ಲಿ ಲಕ್ಷ್ಯ ಸೇನ್ ಅವರನ್ನು ಎದುವುದು ನಿಜವಾಗಿಯೂ ದೊಡ್ಡ ಸವಾಲು, ಈ ಹಂತದಲ್ಲಿ ಅವರಿಗೆ ಸಾಕಷ್ಟು ಅನುಭವವಿದೆ, ನನ್ನ ಪಾಲಿಗೆ ಟೂರ್ನಿಯ ಆರಂಭದಲ್ಲೇ ಪರೀಕ್ಷೆಗೊಳಗಾಗುವ ಸಂದರ್ಭ, ಇಂಡಿಯನ್ ಓಪನ್‌ನಲ್ಲಿ ಪದಾರ್ಪಣೆ ಮಾಡುತ್ತಿರುವ ನನಗೆ ನಿಜವಾಗಿಯೂ ಸವಾಲು,” ಎಂದಿದ್ದಾರೆ.
ಯುಎಸ್ ಓಪನ್ ಚಾಂಪಿಯನ್‌ಷಿಪ್ ಗೆದ್ದಿರುವ ಆಯುಷ್‌ಗೆ ಕಳೆದ ವರ್ಷದ ಅನುಭವ ಹೆಚ್ಚು ಆತ್ಮವಿಶ್ವಾಸವನ್ನು ನೀಡುವುದು ಸ್ಪಷ್ಟ, “ಯುಎಸ್ ಓಪನ್ ಗೆದ್ದಿರುವುದು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕಳೆದ ವರ್ಷ ಅಗ್ರ ಕ್ರಮಾಂಕದ ಆಟಗಾರರನ್ನು ಸೋಲಿಸಿರುವುದು ಸೀನಿಯರ್ ಹಂತದಲ್ಲಿ ಆಡಲು ಮನೋಬಲ ಹೆಚ್ಚಿಸಿದೆ, ಆದರೆ ಇನ್ನೂ ಹೆಚ್ಚು ಸುಧಾರಣೆ ಅಗತ್ಯವೆಂಬ ಅರಿವೂ ಇದೆ,” ಎಂದರು,

