ಆಗ್ನೇಯ ವಲಯ ವಿವಿ ಫುಟ್ಬಾಲ್: MAHE ಕ್ವಾರ್ಟರ್ ಫೈನಲ್‌ಗೆ
ಮಣಿಪಾಲ: ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಆಗ್ನೇಯ ವಲಯ ವಿಶ್ವವಿದ್ಯಾನಿಲಯಗಳ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಣಿಪಾಲದ ಮಾಹೆ (MAHE) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳು ಕ್ವಾರ್ಟರ್ ಫೈನಲ್ ತಲುಪಿವೆ. MAHE University top 8 at South East Zone Universities Football Championship.
ಹೈದರಾಬಾದ್‌ನ ವೋಕ್ಸೇನ್ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಟಿ. ರವಿಶಂಕರ್ ಶುಕ್ಲಾ ವಿಶ್ವವಿದ್ಯಾನಿಲಯದ ವಿರುದ್ಧ ಸೆಣಸಲಿದೆ. MAHA ವಿಶ್ವವಿದ್ಯಾನಿಲಯವು ಹೇಮಚಂದ್ ಯಾದವ್ ವಿಶ್ವವಿದ್ಯಾನಿಲಯವನ್ನು ಎದುರಿಸಲಿದೆ. ಯನಪೋಯ ವಿಶ್ವವಿದ್ಯಾನಿಲಯವು ಸೇಂಟ್ ಜೋಸೆಫ್ ವಿವಿಯನ್ನು ಎದುರಿಸಲಿದೆ.

MAHE ವಿಶ್ವವಿದ್ಯಾನಿಲಯವು ಸಂತ ಗಹಿರಾ ಗುರು ವಿಶ್ವವಿದ್ಯಾನಿಲಯ ಸ್ಪೋರ್ಟ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 7-6 ಅಂತರದಲ್ಲಿ ಜಯ ಗಳಿಸಿತು. ನಿಗದಿತ ಅವಧಿಯಲ್ಲಿ ಇತ್ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು.
ಎರಡನೇ ಪಂದ್ಯದಲ್ಲಿ MAHE ತಂಡವು ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯವನ್ನು 8-0 ಗೋಲುಗಳ ಅಂತರದಲ್ಲಿ ಮಣಿಸಿತು,
ಮೂರನೇ ಪಂದ್ಯದಲ್ಲಿ MAHE ವಿಶ್ವವಿದ್ಯಾನಿಲಯವು ಅಟಲ್ ಬಿಹಾರಿ ವಾಜಪೇಯಿ ವಿಶ್ವವಿದ್ಯಾನಿಲಯದ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.
ಬೆಂಗಳೂರು ವಿಶ್ವವಿದ್ಯಾನಿಲಯದ ವಿರುದ್ಧ ನಡೆದ ಪಂದ್ಯದಲ್ಲಿ MAHE ವಿಶ್ವವಿದ್ಯಾನಿಲಯ 5-4 ಅಂತರದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಜಯ ಗಳಿಸಿದೆ. ನಿಗಧಿತ ಅವಧಿಯಲ್ಲಿ ಇತ್ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು.

2024ರ ಆಗ್ನೇಯ ವಲಯ ರನ್ನರ್ಸ್ ಅಪ್ ಹೇಮ್‌ಚಂದ್ ಯಾದವ್ ವಿಶ್ವವಿದ್ಯಾನಿಲಯ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ MAHE ವಿಶ್ವವಿದ್ಯಾನಿಲಯ 0-3 ಅಂತರದಲ್ಲಿ ಸೋಲನುಭವಿಸಿತು. ಆದರೆ ಮಾಹೆ ತಂಡ ಟೂರ್ನಿಯುದ್ದಕ್ಕೂ ತೋರಿದ ಸಾಧನೆ ಅದ್ಭುತವಾಗಿತ್ತು. ಅಖಿಲ ಭಾರತ ಮಟ್ಟದಲ್ಲಿ ಕ್ಲೈವ್ ಮಸ್ಕರೆನ್ಹಾಸ್ ಅವರ ಮುಂದಾಳತ್ವದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿದೆ. ಆಗ್ನೇಯ ವಲಯದಲ್ಲಿ ಒಟ್ಟು 70 ತಂಡಗಳು ಪಾಲ್ಗೊಂಡಿದ್ದು ಅದರಲ್ಲಿ MAHE ಅಗ್ರ 8ನೇ ಸ್ಥಾನ ಗಳಿಸಿರುವುದು ಅದ್ಭುತ ಸಾಧನೆ.

