Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ISPL ಕೊಪ್ಪಳದಿಂದ ಚೆನ್ನೈ ಸಿಂಗಮ್ಸ್ ಸೇರಿದ ಗಣಿ ಭಾಯ್‌ ಗಣೇಶ್‌

ಬೆಂಗಳೂರು: ಇಂಡಿಯನ್ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ ನಲ್ಲಿ ಚೆನ್ನೈ ಸಿಂಗಮ್ಸ್‌ ಸೇರಿದ ಕನ್ನಡಿಗ ಕೊಪ್ಪಳದ ಗಣೇಶ್‌ ಈಗ ಎಲ್ಲರ ಆಕರ್ಷಣೆ ಎನಿಸಿದ್ದಾರೆ. ಕರ್ನಾಟಕದ ಕೊಪ್ಪಳದಲ್ಲಿ ಜನಿಸಿದ ಗಣೇಶ್ ನಾಲ್ಕನೇ ತರಗತಿಯಲ್ಲೇ ಟೆನಿಸ್ ಬಾಲ್ ಕ್ರಿಕೆಟ್ ಆರಂಭಿಸಿದರು. ಮೊದಲಿಗೆ ಬೌಲರ್ ಆಗಿ ಆಡುತ್ತಿದ್ದ ಗಣೇಶ್, ಕಾಲಕ್ರಮೇಣ ಹಾರ್ಡ್-ಹಿಟಿಂಗ್ ಬ್ಯಾಟ್ಸ್‌ಮನ್ ಆಗಿ ಬದಲಾದರು. From Koppal to Indian Street Premier League Ganesh is Ready to Make his Mark with Chennai Singams in Season 3

ಅನೇಕ ಆಟಗಾರರಂತೆ ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಗಣೇಶ್‌ಗೆ ಹೆಚ್ಚಿನ ಅನುಭವವಿಲ್ಲ. ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳಷ್ಟೇ ಲೆದರ್ ಬಾಲ್ ಕ್ರಿಕೆಟ್ ಆಡಿದ ಅನುಭವ ಅವರಿಗೆ ಇದೆ. ಆದರೆ ಅವರ ಕ್ರಿಕೆಟ್ ಆಟ ಸಂಪೂರ್ಣವಾಗಿ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲೇ ಬೆಳೆದಿದೆ.

ಈ ಕುರಿತು ಮಾತನಾಡಿದ ಗಣೇಶ್, “ನನಗೆ ಚೆಂಡನ್ನು ಬಲವಾಗಿ ಹೊಡೆಯುವ ಶಕ್ತಿ ಇದೆ. ಅದಕ್ಕಾಗಿಯೇ ನಾನು ಐಎಸ್‌ಪಿಎಲ್‌ ವರೆಗೆ ತಲುಪಿದ್ದೇನೆ. ಸ್ವೀಪ್ ಶಾಟ್ ನನ್ನ ನೆಚ್ಚಿನ ಮತ್ತು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿ ಉಳಿದಿದೆ” ಎಂದು ಹೇಳಿದರು.

ಐಎಸ್‌ಪಿಎಲ್‌ ಸೀಸನ್ 3 ಗಣೇಶ್‌ಗೆ ಲೀಗ್‌ನಲ್ಲಿನ ಮೊದಲ ಅವಕಾಶವಾಗಿದೆ. ಹಿಂದಿನ ಎರಡು ಸೀಸನ್‌ಗಳಲ್ಲಿ ಅವರು ಅಲ್ಪ ಅಂತರದಿಂದ ಆಯ್ಕೆಯಿಂದ ತಪ್ಪಿಸಿಕೊಂಡಿದ್ದರು..

“ದಕ್ಷಿಣ ವಲಯದಿಂದ ಆಯ್ಕೆಯಾಗಿರುವುದಕ್ಕೆ ನನಗೆ ಬಹಳ ಹೆಮ್ಮೆ. ಒಂದು ತಂಡದಲ್ಲಿ ಕೇವಲ ಎರಡು ದಕ್ಷಿಣ ವಲಯದ ಆಟಗಾರರೇ ಕಡ್ಡಾಯವಾಗಿರುವುದರಿಂದ ಆಯ್ಕೆ ಪ್ರಕ್ರಿಯೆ ತುಂಬಾ ಕಠಿಣವಾಗಿತ್ತು. ಚೆನ್ನೈ ಸಿಂಗಮ್ಸ್ ನನ್ನನ್ನು ಆಯ್ಕೆ ಮಾಡಿಕೊಂಡಿರುವುದರಿಂದ ನನ್ನ ಗುರಿ ಇನ್ನಷ್ಟು ಸ್ಪಷ್ಟವಾಗಿದೆ” ಎಂದು ಅವರು ಹೇಳಿದರು.

ಚೆನ್ನೈ ಸಿಂಗಮ್ಸ್ ತಂಡದ ವಾತಾವರಣವನ್ನು ಗಣೇಶ್ ತುಂಬಾ ಮೆಚ್ಚಿಕೊಂಡಿದ್ದಾರೆ. ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿ ಎಲ್ಲರೂ ಆಟಗಾರರನ್ನು ಸಮಾನವಾಗಿ ನೋಡಿಕೊಳ್ಳುತ್ತಾರೆ. ಸೀನಿಯರ್–ಜೂನಿಯರ್ ಎಂಬ ಯಾವುದೇ ವ್ಯತ್ಯಾಸ ಇಲ್ಲ. ಮೊದಲ ದಿನದಿಂದಲೇ ಕುಟುಂಬದ ಭಾವನೆ ಮೂಡುತ್ತದೆ ಎಂದು ಹೇಳಿದರು.

 ಸೀಸನ್ 3 ಆರಂಭಕ್ಕೂ ಮುನ್ನ ಗಣೇಶ್ ತಮ್ಮ ಹುಟ್ಟೂರಾದ ಕೊಪ್ಪಳದ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಕ್ರಿಕೆಟ್ ಪಯಣದ ಆರಂಭದಿಂದಲೇ ಬೆಂಬಲ ನೀಡಿದ ಎಲ್ಲರಿಗೂ ಕನ್ನಡದಲ್ಲಿ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲೂ ತಮ್ಮನ್ನೂ ಚೆನ್ನೈ ಸಿಂಗಮ್ಸ್ ತಂಡವನ್ನೂ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.


administrator