Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

32 ಕ್ರೀಡಾ ಹಾಸ್ಟೆಲ್‌ಗಳು, 2 ಕ್ರೀಡಾ ಶಾಲೆ ಇದು ಕರ್ನಾಟಕದ ಹೆಮ್ಮೆ!

ಬೆಂಗಳೂರು: ದೇಶದಲ್ಲಿ ಹರಿಯಾಣ ಅತಿ ಹೆಚ್ಚು ಕ್ರೀಡಾಪಟುಗಳನ್ನು ಹುಟ್ಟು ಹಾಕುತ್ತಿರಬಹುದು, ಆದರೆ ದೇಶದಲ್ಲೇ ಅತಿ ಹೆಚ್ಚು ಕ್ರೀಡಾ ಸೌಲಭ್ಯಗಳನ್ನು ನೀಡುತ್ತಿರುವುದು ಕರ್ನಾಟಕ ಎಂಬುದನ್ನು ಮರೆಯುಂತಿಲ್ಲ.  ಕರ್ನಾಟದಕಲ್ಲಿ 32 ಕ್ರೀಡಾ ವಸತಿ ನಿಯಲಯಗಳು ಹಾಗೂ 2 ಕ್ರೀಡಾ ಶಾಲೆಗಳು ಇರುವುದನ್ನು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬಹುದು, ದೇಶದಲ್ಲಿ ಮೊದಲ ಬಾರಿಗೆ ಸರಕಾರಿ ಕ್ರೀಡಾ ಶಾಲೆಯನ್ನು ಆರಂಭಿಸಿದ ಕೀರ್ತಿ (1982) ಕರ್ನಾಟಕಕ್ಕೆ ಸಲ್ಲುತ್ತದೆ. Kannadigas can proudly say that there are 32 sports hostels and 2 sports schools in Karnataka. we should not be forgotten that Karnataka offers the highest number of sports facilities in the country.

ಕ್ರಿಕೆಟ್‌ನಿಂದಾಗಿ ಇತರ ಕ್ರೀಡೆಗಳ ಬಗ್ಗೆ ಆಸಕ್ತಿ ಕಡೆಮೆಯಾಗುತ್ತಿದೆ ಎಂಬ ಕೊರುಗ ಇದೆ. ಕ್ರೀಡೆಯನ್ನು ಕೇಲವ ಹಣದ ದೃಷ್ಟಯಿಂದ ನೋಡಿದ ಪರಿಣಾಮ ಇಂದು ಕ್ರಿಕೆಟ್‌ ಇಷ್ಟು ಅಪಾರ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಐಪಿಎಲ್‌ನಿಂದ ಕ್ರಿಕೆಟಿಗರು ಕೋಟ್ಯಂತರ ಹಣ ಗಳಿಸುತ್ತಿದ್ದರೂ ಯುವ ಜನತೆ ಬೆಟ್ಟಿಂಗ್‌ನ ಸುಳಿಯಲ್ಲಿ ಸಿಲುಕಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿರುವುದು ಬೇಸರದ ಸಂಗತಿ. ಆದರೆ ಇತರ ಕ್ರೀಡೆಗಳು ನಿಮಗೆ ಬದುಕನ್ನು ಕಲ್ಪಿಸುವುದರ ಜೊತೆಯಲ್ಲಿ ಉತ್ತಮ ಆರೋಗ್ಯವನ್ನೂ ನೀಡುತ್ತಿವೆ. ಸರಕಾರ ಹಾಗೂ ಜನರು ಇತರ ಕ್ರೀಡೆಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು.

ಗುರಿ ಒಲಿಂಪಿಕ್ಸ್‌‌ ಪದಕ ಯೋಜನೆ:

ಕರ್ನಾಟಕ ಸರಕಾರ ನೀಡುತ್ತಿರುವ ಸೌಲಭ್ಯ ದೇಶದ ಇತರ ರಾಜ್ಯಗಳಲ್ಲಿ ನೀಡುತ್ತಿರುವುದು ವಿರಗಳ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂ. ನಗದು ಬಹುಮಾನ, ಬೆಳ್ಳಿ ಗೆದ್ದರೆ 4 ಕೋಟಿ, ಚಿನ್ನ ಗೆದ್ದರೆ 3 ಕೋಟಿ ನಗದು ಬಹುಮಾನವನ್ನು ಸರಕಾರ ಪ್ರಕಟಿಸಿದೆ. “ಗೆಲ್ಲವುದಿಲ್ಲ ಎಂಬುದು ಸರಕಾರಕ್ಕೆ ಖಾತ್ರಿ ಆಗಿದೆ, ಈ ಕಾರಣಕ್ಕಾಗಿಯೇ ಈ ಮೊತ್ತವನ್ನು ಪ್ರಕಟಿಸಿದೆ,” ಎಂದು ಹೇಳುವವರಿದ್ದಾರೆ. ಆದರೆ ಈ ಸಾಧನೆ ಮಾಡಲು ರಾಜ್ಯ ಸರಕಾರ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಮಾತ್ರವಲ್ಲ ತರಬೇತಿಗಾಗಿ ಯೋಜನೆಯನ್ನೂ ಜಾರಿಗೆ ತಂದಿದೆ. “ಗುರಿ ಒಲಿಂಪಿಕ್ಸ್‌ ಪದಕ ಯೋಜನೆ” ಯ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿ ಎಂಬ ಕಾರಣಕ್ಕಾಗಿ ಪ್ರತಿ ವರ್ಷ ತಲಾ 10 ಲಕ್ಷ ರೂ.ಗಳ ಆರ್ಥಿಕ ಪ್ರೋತ್ಸಾಹ ಧನ ನೀಡುತ್ತಿದೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೂ 6, 4 ಮತ್ತು 3 ಕೋಟಿ ರೂ.ಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಸರಕಾರ ಪ್ರಕಟಿಸಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಅನುಕ್ರಮವಾಗಿ 35 ಲಕ್ಷ, 25 ಲಕ್ಷ ಹಾಗೂ 15 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಲಾಗಿದೆ. ವಿಶ್ವಕಪ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ತಲಾ 5 ಲಕ್ಷ ರೂ. 3 ಲಕ್ಷ ರೂ. ಹಾಗೂ 2 ಲಕ್ಷ ರೂ. ನೀಡಲಾಗುವುದು. [ಈ ವಿಭಾಗದಲ್ಲಿ ಬಹುಮಾನವನ್ನು ಹೆಚ್ಚು ಪ್ರಕಟಿಸುವುದಾಗಿತ್ತು, ಏಕೆಂದರೆ ಏಷ್ಯನ್‌ ಹಾಗೂ ಕಾಮನ್ವೆತ್ತ್‌ಗಿಂತ ಇಲ್ಲಿ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುತ್ತಾರೆ]

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ (National Games) ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಅನುಕ್ರಮವಾಗಿ, 5 ಲಕ್ಷ ರೂ. 3 ಲಕ್ಷ ರೂ ಹಾಗೂ 2 ಲಕ್ಷ ರೂ.ಗಳನ್ನು ನೀಡಲಾಗುವುದು.  ಒಲಿಂಪಿಕ್ಸ್‌ ಕ್ರೀಡೆಗಳಿಗಾಗಿ ನಡೆಯುವ ನ್ಯಾಷನಲ್‌ ಚಾಂಪಿಯನ್‌ಷಿಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಅನುಕ್ರಮವಾಗಿ 2 ಲಕ್ಷ ರೂ. 1 ಲಕ್ಷ ರೂ. ಹಾಗೂ 50,000 ರೂ. ನಗದು ಬಹುಮಾನ ನೀಡಲಾಗುತ್ತಿದೆ.

ಒಲಿಂಪಿಕ್ಸ್‌ ಕ್ರೀಡೆಗಳಿಗಾಗಿ ನಡೆಯುವ ಜೂನಿಯರ್‌ ನ್ಯಾಷನಲ್ಸ್‌ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಅನುಕ್ರಮವಾಗಿ ರೂ. 50,000 ರೂ. 25,000 ಹಾಗೂ 15,000 ರೂ, ಬಹುಮಾನವಾಗಿ ನೀಡಲಾಗುತ್ತಿದೆ. ಒಲಿಂಪಿಕ್ಸ್‌ ಕ್ರೀಡೆಗಳಿಗಾಗಿ ನಡೆಯುವ ಸಬ್‌ ಜೂನಿಯರ್‌ ನ್ಯಾಷನಲ್ಸ್‌ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಅನುಕ್ರಮವಾಗಿ ರೂ. 25,000, ರೂ. 15,000 ಹಾಗೂ ರೂ. ರೂ. 10,000 ನೀಡಲಾಗುವುದು.

ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದರೆ ಅವರಿಗೆ ವಿಶೇಷ ನಗದು ಪುರಸ್ಕಾರ ನೀಡಲಾಗುತ್ತಿದೆ.

ಪ್ರೌಢ ಶಾಲಾ ಕ್ರೀಡಾ ವಿದ್ಯಾರ್ಥಿವೇತನ: ರಾಜ್ಟ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿರುವ ಹಾಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ 10,000 ರೂ. ನೀಡಲಾಗುತ್ತದೆ. ಅದೇ ರೀತಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ ವಾರ್ಷಿಕ ಗರಿಷ್ಠ ರೂ. 50000 ಮರುಪಾವತಿ ಮಾಡಲಾಗುತ್ತಿದೆ.

ಶಾಲೆಗೆ 1,೦೦,೦೦೦ ರೂ. ಬಹುಮಾನ!: ಅಧಿಕೃತ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿ ಪದಕಗಳನ್ನು ಗೆಲ್ಲುವ ಕ್ರೀಡಾಪಟುಗಳನ್ನು ರೂಪಿಸುವ ಸರಕಾರಿ ಶಾಲೆಗಳನ್ನು ಪ್ರತಿ ಜಿಲ್ಲೆಗೆ ಒಂದರಂತೆ ಗುರುತಿಸಿ ಆಯ್ಕೆಯಾದ ಶಾಲೆಗೆ ಪ್ರೋತ್ಸಾಹ ಧನದ ರೂಪದಲ್ಲಿ 1,00,000 ರೂ. ನೀಡಲಾಗುವುದು.

ಸಾಧಕರಿಗೆ ಉದ್ಯೋಗಾವಕಾಶ:

ವಿವಿಧ ವಾರ್ಷಿಕ ಕ್ರೀಡಾಕೂಟಗಳನ್ನು ಆಯೋಜಿಸಿವುದರ ಜೊತೆಯಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಕ್ಸ್‌ನಲ್ಲಿ ಪದಕ ವಿಜೇತರಿಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಎ ಗುಂಪಿನ ಹುದ್ದೆ ಹಾಗೂ ಏಷ್ಯನ್‌ ಗೇಮ್ಸ್‌ ಹಾಗೂ ಏಷ್ಯನ್‌ ಪ್ಯಾರಾ ಗೇಮ್ಸ್‌ & ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ  ಪದಕ ಗೆದ್ದವರಿಗೆ ಬಿ ಗುಂಪಿನ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನೀಡಲಾಗುತ್ತಿದೆ. ಇದಲ್ಲದೆ ಪೋಲಿಸ್‌ ಇಲಾಖೆಯಲ್ಲಿ ಶೆ.3ರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿಡಲಾಗಿದೆ.

ಸಾಹಸ ಕ್ರೀಡೆಗೆ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ ಇದ್ದು, ರಾಜ್ಯದ ವಿವಿಧ ಕೇಂದ್ರಗಳಲ್ಲಿ ವಿವಿಧ ಸಾಹಸ ಕ್ರೀಡೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಒಂದೊಂದು ಜಿಲ್ಲೆಯಲ್ಲಿ ಸಿಗುತ್ತಿರುವ ನೈಸರ್ಗಿಕ ಸೌಲಭ್ಯಕ್ಕೆ ಅನುಗುಣವಾಗಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ನುರಿತ ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಕಳೆದ 36 ವರ್ಷಗಳಿಂದ ಸಾಸಹ ಕ್ರೀಡೆಗೆ ಒತ್ತು ನೀಡುತ್ತಿದ್ದು ರಾಜ್ಯ ಆರು ಜಿಲ್ಲೆಗಳಲ್ಲಿ ತನ್ನ ತರಬೇತಿ ಕೇಂದ್ರಗಳನ್ನು ಹೊಂದಿದೆ.


administrator