ಡಿವೈಇಎಸ್ ಕ್ರೀಡಾ ಶಾಲೆ, ಕ್ರೀಡಾ ಹಾಸ್ಟೆಲ್ ಕ್ರೀಡಾ ಸಾಧಕರಿಗೆ ಸನ್ಮಾನ
2025ರ ಡಿಸೆಂಬರ್ 20ರಂದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವು ಬೆಂಗಳೂರು ರಾಜ್ಯ ಯುವ ಕೇಂದ್ರ ಯವನಿಕಾ ದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಡಿವೈಇಎಸ್ ಕ್ರೀಡಾ ಶಾಲೆ ಮತ್ತು ಡಿವೈಇಎಸ್ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳನ್ನು ಗೌರವಿಸುವ ಸಲುವಾಗಿ ಅಭಿನಂದನಾ ಸಮಾರಂಭವನ್ನು ಆಯೋಜಿಸಿತು. A felicitation ceremony was organized by Karnataka Youth Empowerment and Sports Department to honour the students of DYES Sports School and DYES Sports Hostel who have achieved at the national and international levels.
ಈ ಸಮಾರಂಭದಲ್ಲಿ ಏಷ್ಯನ್ ಪದಕ ವಿಜೇತರಾದ ಈಶನ್ ಹಾಗೂ ಪ್ರಮಿಲಾ ಅಯ್ಯಪ್ಪ, ಒಲಿಂಪಿಯನ್ ಹಾಕಿ ಆಟಗಾರ ಸುನಿಲ್ ಮತ್ತು ಏಷ್ಯನ್ ಗೇಮ್ಸ್ ಕಬಡ್ಡಿ ಪದಕ ವಿಜೇತೆ ಉಷಾ ರಾಣಿ, ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಕಂಚಿನ ಪದಕ ವಿಜೇತ ಭಾರತ ತಂಡದ ಆಟಗಾರ ಸುನಿಲ್ ಪಾಲಾಕ್ಷಪ್ಪ ಬೆನ್ನೂರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಶ್ರೀ ಆರ್. ಚೇತನ್ ಐ.ಪಿ.ಎಸ್, ಅವರು ವಹಿಸಿದ್ದರು.

ಡಿವೈಇಎಸ್ ಕ್ರೀಡಾ ಶಾಲೆಗಳಲ್ಲಿ ಹಾಗೂ ಕ್ರೀಡಾ ಹಾಸ್ಟೆಲ್‌ಗಳಲ್ಲಿ ಕಲಿತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನೂರಕ್ಕೂ ಹೆಚ್ಚು ಕ್ರೀಡಾ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

