ಬೆಂಗಳೂರಿನಲ್ಲಿ ಫೆಬ್ರವರಿ 8 ರಂದು HCL ಸೈಕಥ್ಲಾನ್
ಬೆಂಗಳೂರು: ಭಾರತೀಯ ಸೈಕ್ಲಿಂಗ್ ಫೆಡರೇಷನ್ ವತಿಯಿಂದ ಬೆಂಗಳೂರಿನಲ್ಲಿ 2026, ಫೆಬ್ರವರಿ 8 ರಂದು ಎಚ್‌ಸಿಎಲ್ (HCL) ಪ್ರಯೋಜಕತ್ವದಲ್ಲಿ ರೋಡ್ ರೇಸ್ ಸೈಕಥ್ಲಾನ್ ಚಾಂಪಿಯನ್‌ಷಿಪ್ ನಡೆಯಲಿದೆ. ಚಾಂಪಿಯನ್‌ಷಿಪ್‌ನ ಒಟ್ಟು ಬಹುಮಾನದ ಮೊತ್ತ 27.6 ಲಕ್ಷ ರೂ. The Road Race Cyclothon Championship will be held in Bengaluru on February 8, 2026, organized by Cycling Federation of India and sponsored by HCL. The total prize money of the championship is Rs 27.6 lakh.
ಅಮೆಚೂರ್ 50 ಕಿಮೀ ರೋಡ್ ರೇಸ್, ಅಮೆಚೂರ್ ಎಂಟಿಬಿ 32 ಕಿಮೀ ರೋಡ್ ರೇಸ್ ನಡೆಯಲಿದೆ. ಈ ಸ್ಪರ್ಧೆಗೆ ಸ್ಪರ್ಧಿಗಳು ತಮ್ಮದೇ ಆದ ಸೈಕಲ್ ಹಾಗೂ ಹೆಲ್ಮೆಟ್ ತರಬೇಕು. 16 ಕಿ ಮೀ ಗ್ರೀನ್/ಫನ್‌ರೈಡ್‌ನಲ್ಲಿ ಸ್ಪರ್ಧಿಸುವವರಿಗೆ ಬಾಡಿಗೆ ಸೈಕಲ್ ಪಡೆಯವ ಅವಕಾಶವಿದೆ.
ಹೆಸರು ನೋಂದಾಯಿಸಿದ ಪ್ರತಿಯೊಬ್ಬ ಸೈಕ್ಲಿಸ್ಟ್‌ಗೂ ಜರ್ಸಿ (ಅಮೆಚೂರ್ ಸ್ಪರ್ಧಿಗಳಿಗೆ), ಗ್ರೀನ್ ವಿಭಾಗದಲ್ಲಿ ಹೆಸರು ನೋಂದಾಯಿಸಿದವರಿಗೆ ಟಿ ಶರ್ಟ್, ಪೂರ್ಣಗೊಳಿಸಿದವರಿಗೆ ಮೆಡಲ್, ಡ್ರಾಸ್ಟ್ರಿಂಗ್ ಬ್ಯಾಗ್, ರಿಫ್ರೆಶ್‌ಮೆಂಟ್, ಟೈಮಿಂಗ್ ಸರ್ಟಿಫಿಕೇಟ್ (ಅಮೆಚೂರ್ ವಿಭಾಗದಲ್ಲಿ ಸ್ಪರ್ಧಿಸುವವರಿಗೆ ಮಾತ್ರ), ಟ್ರಾಫಿಕ್ ಮುಕ್ತ ಹಾದಿ ಹಾಗೂ ಗುಂಪಾಗಿ 100+ ಹೆಸರು ನೋಂದಾಯಿಸಿದವರಿಗೆ ಕಾರ್ಪೊರೇಟ್ ಲಾಂಜ್ ವ್ಯವಸ್ಥೆ ಮಾಡಲಾಗುವುದು.

ಹೆಸರುಗಳನ್ನು hclcyclothon.com ಮೂಲಕ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ +91 9773696955 watsapp +91 9790209655
Support@chlcylcothon.com
.

