Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೈಂದೂರಿನಲ್ಲಿ ಜ. 24 ರಂದು ಹೊನಲು ಬೆಳಕಿನ ಫುಟ್ಬಾಲ್‌ ಟೂರ್ನಿ

ಉಡುಪಿ: ನಾಲ್ಕು ವರ್ಷಗಳ ಹಿಂದೆ ಬೈಂದೂರಿನ ಯುವಕರು ಹುಟ್ಟು ಹಾಕಿದ ತಿರುಮಲ ಫುಟ್ಬಾಲ್‌ ಕ್ಲಬ್‌ 2026 ಜನವರಿ 24ರಂದು ಬೈಂದೂರಿನ ತಗ್ಗರ್ಸೆಯಲ್ಲಿ ಹೊನಲು ಬೆಳಕಿನ ಫುಟ್ಬಾಲ್‌      ಟೂರ್ನಿಯನ್ನು ಆಯೋಜಿಸಿದೆ. Tirumala Football Club, founded by the youths of Byndoor four years ago, is organizing a flood light Football Tournament on January 24, 2026 at Thaggarse, Byndoor, Kundapura.

ಟೂರ್ನಮೆಂಟ್‌ ಮುಕ್ತವಿಭಾಗ (Open) ಹಾಗೂ 16 ವರ್ಷ ವಯೋಮಿತಿಯ ವಿಭಾಗಗಳಲ್ಲಿ ನಡೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಫುಟ್ಬಾಲ್‌ ಕ್ರೀಡೆ ಜೀವಂತವಾಗಿರಿಸಬೇಕೆಂಬ ಉದ್ದೇಶದಿಂದ ಸ್ಥಳೀಯ ಯುವಕರಾದ ಮಹೇಂದ್ರ ಆಚಾರ್ಯ, ರಾಘವೇಂದ್ರ ಪೂಜಾರಿ ಹಾಗೂ ಪ್ರಮೋದ್‌ ಪೂಜಾರಿ ತಿರುಮಲ ಕ್ಲಬ್‌ ಹುಟ್ಟು ಹಾಕಿದರು. ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಈ ಕ್ಲಬ್‌ ಪ್ರತಿ ವರ್ಷ ತಪ್ಪದೆ ಟೂರ್ನಮೆಂಟನ್ನು ನಡೆಸಿಕೊಂಡು ಬರುತ್ತಿದೆ. ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಟೂರ್ನಿಗಳನ್ನು ನಡೆಸುವ ಕೆಲಸ ಮಾಡದಿದ್ದರೂ ಫುಟ್ಬಾಲ್‌ ಬಗ್ಗೆ ಪ್ರೀತಿ ಇರುವ ಯುವಕರು ಟೂರ್ನಿಯನ್ನು ನಡೆಸುತ್ತಿರುವುದು ವಿಶೇಷ.

ತಿರುಮಲ ಟ್ರೋಫಿ 4.0 ಹೆಸರಿನ ಈ ಟೂರ್ನಿಯ ಮುಕ್ತ ವಿಭಾಗದಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ವಯೋಮಿತಿ ಇರುವುದಿಲ್ಲ. ಪ್ರವೇಶ ಶುಲ್ಕ ರೂ. 3000. ಮುಂಗಡವಾಗಿ ರೂ. 1500 ನೀಡಿ ತಂಡವನ್ನು ನೋಂದಾಯಿಸಿಕೊಳ್ಳಬೇಕು. ಚಾಂಪಿಯನ್‌ ತಂಡಕ್ಕೆ ಬಹುಮಾನದ ಮೊತ್ತ ರೂ. 30,000 ಹಾಗೂ ರನ್ನರ್ಸ್‌ ಅಪ್‌ ತಂಡಕ್ಕೆ ಬಹುಮಾನದ ಮೊತ್ತ ರೂ. 18,000

ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 15 ಜನವರಿ 2026.

16 ವರ್ಷ ವಯೋಮಿತಿಯ ವಿಭಾಗದಲ್ಲಿ ತಂಡವನ್ನು ನೋಂದಾಯಿಸಿಕೊಳ್ಳಲು ಪ್ರವೇಶ ಶುಲ್ಕ ರೂ. 1500. ಮುಂಗಡವಾಗಿ ರೂ. 1000 ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಟೂರ್ನಿಯಲ್ಲಿ ಆಡುವವರು ಜನವರಿ 1, 2009 ರ ನಂತರ ಜನಿಸಿದವರಾಗಿರಬೇಕು. ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 8217662065 / 9742179341


administrator