KIUG2025: ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಕುಂದಾಪುರದ ಶ್ರೀದೇವಿಕಾ
ಜೈಪುರ: ಉತ್ತಮ ತರಬೇತುದಾರರು, ಕಠಿಣ ಪರಿಶ್ರಮ, ಉತ್ತಮ ಪ್ರೋತ್ಸಾಹ ಹಾಗೂ ಉತ್ತಮ ಅವಕಾಶ ಸಿಕ್ಕರೆ ಯಶಸ್ಸು ಸಾಧಿಸಲು ಯಾವುದೇ ಅಡ್ಡಿಯಾಗದು ಎಂಬುದನ್ನು ಉಡುಪಿಯ ತೆಂಕನಿಡಿಯೂರಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕುಂದಾಪುರದ ಶ್ರೀದೇವಿಕಾ ವಿ ಎಸ್. ಸಾಬೀತುಪಡಿಸಿದ್ದಾರೆ. Udupi’s Thenkanidiyuru govt college athlete Shridevika VS won silver medal at Khelo India University Games Jaipur.
ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ವನಿತೆಯ ಹೈಜಂಪ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಶ್ರೀದೇವಿಕಾ ಬೆಳ್ಳಿಯ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಉಡುಪಿಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕೋಚ್ ವಸಂತ ಜೋಗಿ ಅವರಲ್ಲಿ ತರಬೇತಿ ಪಡೆಯುತ್ತಿರುವ ಶ್ರೀದೇವಿಕಾ 6.05 ಮೀ ದೂರಕ್ಕೆ ಜಿಗಿದು ಬೆಳ್ಳಿಯ ಪದಕ ಗೆದ್ದರು.
ಕಳೆದ 4-5 ವರ್ಷಗಳಿಂದ ವಸಂತ ಜೋಗಿ ಅವರಲ್ಲಿ ತರಬೇತಿ ಪಡೆಯುತ್ತಿರುವ ಶ್ರೀದೇವಿಕಾ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ 6.08 ಮೀ, ದೂರಕ್ಕೆ ಜಿಗಿದಿದ್ದರು.
ಶ್ರೀದೇವಿಕಾ ಅವರ ಸಾಧನೆಯ ಬಗ್ಗೆ sportsmail ಜೊತೆ ಮಾತನಾಡಿದ ಕೋಚ್ ವಸಂತ್ ಜೋಗಿ, “ಬಡತನದಿಂದ ಬಂದು ಸಾಧನೆ ಮಾಡಿರುವ ಶ್ರೀದೇವಿಕಾ ಅವರಿಗೆ ಅಭಿನಂದನೆಗಳು. ಜನವರಿಯಲ್ಲಿ ಅಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಚಾಂಪಿಯನ್‌ಷಿಪ್ ಇದೆ. ಅಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬಹುದೆಂಬ ನಂಬಿಕೆ ಇದೆ. 6:30 ಮೀ, ಜಿಗಿದರೆ ಉತ್ತಮ. ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆಯಬೇಕಾದರೇ 6:30 ದೂರಕ್ಕೆ ಜಿಗಿಯಬೇಕು. ಶ್ರೀದೇವಿಕಾ ಅವರಲ್ಲಿ ಅಂಥ ಸಾಮರ್ಥ್ಯ ಇದೆ. ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆಂಬ ನಂಬಿಕೆ ಇದೆ,” ಎಂದರು.

ವಸಂತ ಜೋಗಿ ಅವರಲ್ಲಿ ತರಬೇತಿ ಪಡೆದ ಯಾದಗಿರಿಯ ಪಲ್ಲವಿ ಪಾಟೀಲ್ ಜರ್ಮನಿಯಲ್ಲಿ ನಡೆದ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಹರಿಯಾಣದ ಭಿಮಾನಿಯಲ್ಲಿ ನಡೆದ SGFI ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿಯ ವಿದ್ಯಾರ್ಥಿನಿ ಪೂರ್ಣಿಯಾ ಅವರು ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ ಹಾಗೂ ಲಾಂಗ್ ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದದಾರೆ. ಕುಂದಾಪುರ ತಾಲೂಕಿನ ಹೆಮ್ಮಾಡಿಯವರಾದ ಪೂರ್ಣಿಮಾ ಅವರಿಗೆ ಡಿವೈಇಎಸ್ ಕೋಚ್ ವಸಂತ ಜೋಗಿ ಅವರು ತರಬೇತಿ ನೀಡುತ್ತಿದ್ದಾರೆ. ಸುಪ್ರಿಯಾ ಎಸ್‌ಪಿ ಕೂಡ ಸ್ಯಾಫ್ ಗೇಮ್ಸ್‌ನ ಹೈಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿರುತ್ತಾರೆ.

