ಆಸ್ಟ್ರೇಲಿಯಾ ಓಪನ್: ಕಾರ್ಕಳದ ಆಯುಷ್ ಶೆಟ್ಟಿ ಕ್ವಾರ್ಟರ್ ಫೈನಲ್‌ಗೆ
ಸಿಡ್ನಿ: ಜಪಾನಿನ ವಿಶ್ವದ ನಂ. 9 ಆಟಗಾರ ಕೊಡೈ ನರವೊಕಾ ವಿರುದ್ಧ ಜಯ ಗಳಿಸಿದ ಭಾರತದ ಯುವ ಆಟಗಾರ ಕಾರ್ಕಳದ ಆಯುಷ್ ಶೆಟ್ಟಿ ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. Ayush Shetty beats Kodai Naraoka to rach Australian Open Badminton Championship quarter final.
ಹಾಂಕಾಂಗ್‌ನಲ್ಲಿ ನಡೆದ ಸೂಪರ್ 500 ಸರಣಿಯಲ್ಲೂ ಆಯುಷ್ ಶೆಟ್ಟಿ ಇದೇ ಕೊಡೈ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಯುಎಸ್ ಓಪನ್ ಚಾಂಪಿಯನ್ 20 ವರ್ಷದ ಆಯುಷ್ ಶೆಟ್ಟಿ ಭಾರತದ ಇನ್ನೋವರ್ವ ಆಟಗಾರ ಲಕ್ಷ್ಯ ಸೇನ್‌ಗಿಂತಲೂ ಉತ್ತಮವಾಗಿ ಆಡುತ್ತಿರುವುದು ಗಮನಾರ್ಹ.
ವಿಶ್ವದಲ್ಲಿ 32ನೇ ರ್ಯಾಂಕ್ ಹೊಂದಿರುವ ಆಯುಷ್ ಶೆಟ್ಟಿ, ಹಾಂಕಾಂಗ್‌ನಲ್ಲಿ ಲಕ್ಷ್ಯ ಸೇನ್ ವಿರುದ್ಧ ಸೋತಿದ್ದರು. ಮತ್ತೆ ಆಟದಲ್ಲಿ ಲಯ ಕಂಡುಕೊಂಡು ಪ್ರಭುತ್ವ ಸಾಧಿಸುತ್ತಿದ್ದಾರೆ. ಈಗ ಮತ್ತೊಮ್ಮೆ ಪ್ರಮುಖ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಯಷ್ ಶೆಟ್ಟಿ 21-17, 21-16 ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಭಾರತದ ಎಚ್ ಎಸ್ ಪ್ರಣಾಯ್ ಹಾಗೂ ಕಿದಂಬಿ ಶ್ರೀಕಾಂತ್ ಸೋಲಿಗೆ ಶರಣಾಗಿದ್ದಾರೆ.

