ಕುಂದಾಪುರದ ಅಜಿತ್ ಡಿಕೋಸ್ಟಾ ಒಮನ್ ಕ್ರಿಕೆಟ್ ತಂಡದ ಮ್ಯಾನೇಜರ್
ಕುಂದಾಪುರ: ಕೊಲ್ಲಿ ರಾಷ್ಟ್ರಗಳಲ್ಲಿ ಬದಕುನ್ನು ಕಟ್ಟಿಕೊಂಡಿರುವ ಭಾರತೀಯರ ಬದುಕು ದುಡಿಮೆಗೆ ಮಾತ್ರ ಸೀಮಿತವಾಗಿಲ್ಲ. ದುಡಿಮೆಯ ನಡುವೆಯೂ ಅವರು ಕ್ರೀಡೆ ಹಾಗೂ ಇತರ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಬದುಕು ನೀಡಿದ ಕೊಲ್ಲಿ ರಾಷ್ಟ್ರಕ್ಕೂ, ಜನ್ಮ ನೀಡಿದ ಭಾರತ ದೇಶಕ್ಕೂ ಕೀರ್ತಿ ತಂದಿದ್ದಾರೆ. ಒಮನ್ ದೇಶದಲ್ಲಿ ದುಡಿಯುತ್ತಿರುವ ಕುಂದಾಪುರದ ಹಳ ಅಳಿವೆ ನಿವಾಸಿ ಅಜಿತ್ ಡಿಕೋಸ್ಟಾ ಅವರು ಸದ್ಯ ದುಬೈನಲ್ಲಿ ನಡೆಯುತ್ತಿರುವ ಎಸಿಸಿ 19 ವರ್ಷ ವಯೋಮಿತಿಯ ಪ್ರೀಮಿಯರ್ ಕಪ್‌ನಲ್ಲಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಒಮನ್ ರಾಷ್ಟ್ರದ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. Ajith D’Costa from Kundapura has been selected as the Manager of the Oman U19 cricket team which is competing in the ACC Under-19 Premier Cup Championship being held in Dubai.
ಒಮನ್ ಕ್ರಿಕೆಟ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಜಿತ್, ಕ್ರಿಕೆಟ್ ಜಗತ್ತಿನ ಬೇರೆ ಬೇರೆ ತಂಡಗಳು ಹಾಗೂ ಆಟಗಾರರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅವರ ದಕ್ಷ ಕಾರ್ಯವೈಖರಿಯನ್ನು ಮೆಚ್ಚಿ ಎಸಿಸಿ 19 ವರ್ಷ ವಯೋಮಿತಿಯ ಪ್ರೀಮಿಯರ್ ಕಪ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಒಮನ್ ರಾಷ್ಟ್ರದ ತಂಡದ ಮ್ಯಾನೇಜರ್ ಆಗಿ ನೆಮಿಸಿದೆ.

ದುಬೈಯಿಂದ sportsmail ಜೊತೆ ಮಾತನಾಡಿದ ಅಜಿತ್ ಡಿಕೋಸ್ಟಾ, “ವೃತ್ತಿ ಬದುಕಿನಲ್ಲಿ ಇದೊಂದು ಹೊಸ ಅನುಭವ. ಚಿಕ್ಕಂದಿನಿಂದಲೂ ಕ್ರೀಡೆಯ ಜೊತೆ ಆಪ್ತವಾಗಿದ್ದ ನನಗೆ ಈ ಜವಾಬ್ದಾರಿಯನ್ನು ಅತ್ಯಂತ ಸ್ಫೂರ್ತಿಯಿಂದ ನಿಭಾಯಿಸುತ್ತಿರುವೆ. ನಮ್ಮ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರಿದೆ. ಇಲ್ಲಿ ಕ್ರಿಕೆಟ್ ಭಾರತದಷ್ಟು ವೃತ್ತಿಪರತೆಯನ್ನು ಕಂಡಿಲ್ಲ. ಆದರೆ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ತರಬೇತುದಾರರು ಒಮನ್ ಕ್ರಿಕೆಟ್‌ನ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ತಂಡದಲ್ಲಿ ಭಾರತ ಮೂಲದ ಯುವಕರೂ ಆಡುತ್ತಿರುವುದು ವಿಶೇಷ, ಇಂಥ ಉತ್ತಮ ಜವಾಬ್ದಾರಿಯನ್ನು ನೀಡಿದ ಒಮನ್ ಕ್ರಿಕೆಟ್ ಸಂಸ್ಥೆಗೆ ನಾನು ಚಿರ ಋಣಿ,ʼ ಎಂದಿದ್ದಾರೆ.

“ಕುಂದಾಪುರದ ಹಳಅಳಿವೆಯಂಥ ಪುಟ್ಟ ಗ್ರಾಮದಲ್ಲಿ ಬೆಳೆದ ನನಗೆ ಚಿಕ್ಕಂದಿನಲ್ಲಿ ಆಡಲು ಅಂಗಣವೂ ಇರಲಿಲ್ಲ. ಅಂಥದ್ದರಲ್ಲಿ ಅಂತರಾರಾಷ್ಟ್ರೀಯ ಕ್ರಿಕೆಟ್‌ನ ಬಗ್ಗೆ ಕನಸು ಕಾಣುವುದೆಲ್ಲಿ? ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ತಂಡವೊಂದರ ಮ್ಯಾನೇಜರ್ ಆಗುವ ಭಾಗ್ಯವನ್ನು ದೇವರು ಕಲ್ಪಿಸಿದ್ದಾರೆ. ಹೆತ್ತವರ ಆಶೀರ್ವಾದದಿಂದ ಇದೆಲ್ಲ ಸಾಧ್ಯವಾಯಿತು. ಎಲ್ಲರಿಗೂ ಧನ್ಯವಾದಗಳು,” ಎಂದಿದ್ದಾರೆ.

ಶುಕ್ರವಾರದಿಂದ ಪಂದ್ಯಗಳು ಆರಂಭವಾಗಲಿದ್ದು, ಒಮನ್ ಮೊದಲ ಪಂದ್ಯದಲ್ಲಿ ಕತಾರ್ ತಂಡವನ್ನು ಎದುರಿಸಲಿದೆ. ನವೆಂಬರ್ 24ರಂದು ಒಮನ್ ತಂಡ ಜಪಾನ್ ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಲೀಗ್‌ನ ಕೊನೆಯ ಪಂದ್ಯವನ್ನು ನವೆಂಬರ್ 28ರಂದು ಮಾಲ್ದೀವ್ಸ್ ವಿರುದ್ಧ ಆಡಲಿದೆ.


